ಮಹಾಸಭೆಯು ಪ್ರತಿ ಸಾರ್ವತ್ರಿಕ ಚುನಾವಣೆಯ ಸಂತರ ಚುನಾಯಿತರಾದ ಸಮಾಜದ ಜನಪ್ರತಿನಿಧಿಗಳನ್ನು ಆದರಿಸಿ, ಸತ್ಕರಿಸಿಕೊಂಡು ಬಂದಿರುವ ಪದ್ಧತಿಯಂತೆ 20230 ವಿಧಾನಸಭಾ ಚುನಾವಣೆಯಲ್ಲಿ ಆರಿಸಿಬಂದಂತಹ ವೀರಶೈವ-ಲಿಂಗಾಯತ ಸಮಾಜದ ಸಚಿವರು ಮತ್ತು ಶಾಸಕರುಗಳನ್ನು ಅಭಿನಂದಿಸಲು ಮಹಾಸಭೆಯ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪ, ಶಾಸಕರು, ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 6-7-2023ರ ಗುರುವಾರ ಸಂಜೆ 5.00 ಗಂಟೆಗೆ “ಚೌಡಯ್ಯ ಮೆಮೋರಿಯಲ್ ಹಾಲ್*, ವೈಯಾಲಿಕಾವಲ್, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿ “ನೂತನ ಸಚಿವರು ಮತ್ತು ಶಾಸಕರುಗಳ ಅಭಿನಂದನಾ ಸಮಾರಂಭ”ವನ್ನು ಏರ್ಪಡಿಸಲಾಗಿದೆ.

ಈ ಅಭಿನಂದನಾ ಸಮಾರಂಭದಲ್ಲಿ ಒಬ್ಬರು ಸಭಾಪತಿಗಳು, 07 ಜನ ಸಚಿವರು, 49 ಜನ ಶಾಸಕರು ಹಾಗೂ 16 ಜನ ವಿಧಾನಪರಿಷತ್‌ ಸದಸ್ಯರು ಹೀಗೆ ಒಟ್ಟು 73 ಜನ ಅಭಿನಂದಿತರು ಮಹಾಸಭೆಯ ಅಭಿನಂದನೆಯನ್ನು ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ನಾಡಿನ ಹೆಸರಾಂತ ವೀರಶೈವ- ಲಿಂಗಾಯತ ಸಮಾಜದ ಗಣ್ಯವ್ಯಕ್ತಿಗಳು, ಮಹಾಸಭೆಯ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಸಮಾಜಬಾಂಧವರು ಭಾಗವಹಿಸಲಿದ್ದಾರೆ ಎಂದು ಎಸ್. ಗುರುಸ್ವಾಮಿ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ, ಎಂ.ಎನ್.ರಾಜಶೇಖರಪ್ಪ-ಉಪಾಧ್ಯಕ್ಷರು, ಹೆಚ್.ಎಂ.ರೇಣುಕ ಪ್ರಸನ್ನ-ಕಾರ್ಯದರ್ಶಿ,  ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು

#jassonnews