ದಿನಾಂಕ: 26.06.2023

ಪತ್ರಿಕಾ ಪ್ರಕಟಣೆಗಾಗಿ | ದೃಶ್ಯ ಮಾದ್ಯಮದ ಪ್ರಸಾರಕ್ಕಾಗಿ ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಸರಪಳಿ 72.260 ರಿಂದ 214.300 ಕಿ.ಮೀ.ವರೆಗೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ನಡೆದಿರುವ ಅಕ್ರಮ ಅವ್ಯವಹಾರ-ಕಳಪೆ ಕಾಮಗಾರಿಗಳ ಸಂಕ್ಷಿಪ್ತ ವಿವರಗಳು

><><><

ಕರ್ನಾಟಕ ರಾಜ್ಯ ರೈತ ಸಂಘದ ಪ್ರತಿನಿಧಿಯಾದ ಮತ್ತು ಸಾಮಾಜಿಕ ಹೋರಾಟಗಾರರಾದ ಶ್ರೀ ನಾಗೇಗೌಡ, ಪಿ.ಬಿ.ಮಂಚನಹಳ್ಳಿ ಗ್ರಾಮ, ಶೀಳನೆರೆ ಹೋಬಳಿ, ಕೃಷ್ಣರಾಜಪೇಟೆ ತಾಲ್ಲೂಕು ಇವರು ಸಾಮಾಜಿಕ ಹೋರಾಟಗಾರರಾದ ಕೃಷ್ಣರಾಜಪೇಟೆ ಪಟ್ಟಣದ ಜಿ.ಆರ್.ಜಯಣ್ಣನವರ ಸಹಕಾರ ಮತ್ತು ಸಲಹೆಯ ಮೇರೆಗೆ ಈ ಮೇಲ್ಕಂಡ ಯೋಜನೆಯಲ್ಲಿ ನಡೆದಿರುವ ಅಕ್ರಮ-ಅವ್ಯವಹಾರಗಳ ಕುರಿತು ಸಮಗ್ರವಾದ ದಾಖಲಾತಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ಸತತ ಹೋರಾಟದ ಹಾದಿಯ ಹಿಂದೆಬಿದ್ದು ಸುಮಾರು 5000 ಪುಟಕ್ಕೂ ಮಿಗಿಲಾದ ದಾಖಲಾತಿಗಳನ್ನು ಕಲೆಹಾಕಿದ್ದಾರೆ.

ಈ ಮೇಲ್ಕಂಡ ಹಗರಣದ ಸಂಬಂಧವಾಗಿ ಶ್ರೀ ನಾಗೇಗೌಡರವರು ಮಾನ್ಯ ಕರ್ನಾಟಕ ಲೋಕಾಯುಕ್ತರಲ್ಲಿ ದೂರು ಸಂಖ್ಯೆ ಲೋಕ್/ಎಂವೈಎಸ್/3055/2019ರ ಪ್ರಕಾರ ದೂರನ್ನು ದಾಖಲಿಸಿದ್ದಾರೆ. ದೂರು ಅರ್ಜಿಯು ಇತ್ಯರ್ಥವಾಗಲು ಬಾಕಿ ಇರುತ್ತದೆ. ಈ ದೂರು ಅರ್ಜಿಯ ಜೊತೆ ಸುಮಾರು 1000 ಪುಟಗಳ ದಾಖಲಾತಿಗಳನ್ನು ಮಾನ್ಯ ಲೋಕಾಯುಕ್ತರಿಗೆ ಒದಗಿಸಲಾಗಿದೆ.

ಮೇಲ್ಕಂಡ ಅಕ್ರಮಗಳ ಕುರಿತು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಯವರು ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿಗೆ ದಿನಾಂಕ: 21.07.2022ರಂದು ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಆಗಮಿಸಿದ ವೇಳೆ ಖುದ್ದಾಗಿ ಮತ್ತು ಬಹಿರಂಗವಾಗಿ ಮನವಿಯನ್ನು ಸಲ್ಲಿಸಿ, ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಸರಪಳಿ 72.260 ರಿಂದ 214.300 ಕಿ.ಮೀ.ವರೆಗೆ ನಾಲೆಯ ಆಧುನೀಕರಣ ಕಾಮಗಾರಿಯಲ್ಲಿ ನಡೆದಿರುವ ಸುಮಾರು 500 ಕೋಟಿಗೂ ಹೆಚ್ಚು ಅಕ್ರಮ ಅವ್ಯವಹಾರ ಕಳಪೆ ಕಾಮಗಾರಿಯ ಕುರಿತು ದೂರನ್ನು ಸಲ್ಲಿಸಿ, ಸಮಗ್ರವಾದ ತನಿಖೆಯನ್ನು ನಡೆಸಿ, ಪ್ರಕರಣದ ವಿಚಾರಣೆಯನ್ನು ಸಿ.ಬಿ.ಐ.ಗೆ ವಹಿಸುವಂತೆ ಕೋರಲಾಗಿತ್ತು. ಆದರೆ ಈ ಹಿಂದಿನ ಮುಖ್ಯ ಮಂತ್ರಿಯವರು ದೂರನ್ನು ಜಲಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳದಿಂದ 7 ದಿನಗಳ ಒಳಗಾಗಿ ವಿಚಾರಣೆ ನಡೆಸಿ ಸತ್ಯಾತ್ಯತೆಯನ್ನು ಮನಗಂಡು ಬಳಿಕ ಮುಂದಿನ ಕ್ರಮ ವಹಿಸುವುದಾಗಿ ಬಹಿರಂಗ ಭರವಸೆಯನ್ನು ನೀಡಿದ್ದರೂ ಸಹ ಈವರೆಗೆ ಒಂದು ವರ್ಷವಾದರೂ ಸಹ ಕನಿಷ್ಟ ದೂರಿನ ಕಡತವನ್ನು ಸಹ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ.

ಈ ಮೇಲ್ಕಂಡ ದೂರು ಅರ್ಜಿಯನ್ನು ದಾಖಲಿಸಿದ ಬಳಿಕ ದೂರನ್ನು ಸಾಬೀತುಪಡಿಸಲು ಅವಶ್ಯಕವಾದ ದಾಖಲೆಗಳು, ದಿನಪತ್ರಿಕೆಯ ಪ್ರತಿಗಳು, ಆಗಿಂದಾಗ್ಗೆ ಉಂಟಾಗಿರುವ ಕಳಪೆ ಕಾಮಗಾರಿಯ ಗುಣಲಕ್ಷಣಗಳನ್ನು ಒದಗಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಪೆನ್‌ಡ್ರೈವ್‌ನಲ್ಲಿ ಹಲವು ವೀಡಿಯೋ ಚಿತ್ರೀಕರಣದ ದೃಶ್ಯಗಳನ್ನು ಮತ್ತು ಛಾಯಾ ಚಿತ್ರಗಳನ್ನು ಸಲ್ಲಿಸಿದ್ದು, ಇದರ ಜೊತೆಗೆ ಕೆವೊಂದು ಸಿ.ಡಿ.ಗಳ ರೂಪದಲ್ಲಿ ಸಹ ಸಲ್ಲಿಸಲಾಗಿರುತ್ತದೆ. ಮಂಡ್ಯ ಜಿಲ್ಲೆಯಾದ್ಯಂತ ಮತ್ತು ಹೊರ ಜಿಲ್ಲೆಯಿಂದ ಸಹ ಸಾಕಷ್ಟು ಸಾರ್ವಜನಿಕರು ಪತ್ರ ಚಲುವಳಿಯ ಮೂಲಕ ಯೋಜನೆಯ ಕಾಮಗಾರಿಯನ್ನು ನಡೆದಿರುವ ಅಕ್ರಮಗಳ ಕುರಿತು ತಮ್ಮ ಲಿಖಿತ ಪ್ರತಿಭಟನೆಯನ್ನು ವ್ಯಕ್ತಪಡಿಸಿ, ಮಾನ್ಯ ಲೋಕಾಯುಕ್ತ ಕಛೇರಿಗೆ ಸುಮಾರು 400 ರಿಂದ 500 ಪತ್ರಗಳನ್ನು ಸಹ ಕಳುಹಿಸಿರುತ್ತಾರೆ.

ಈ ಮೇಲ್ಕಂಡ ದೂರಿಗೆ ಪೂರಕವಾಗಿ ಸಾವಿರಾರು ಪುಟಗಳ ದಾಖಲೆಗಳನ್ನು ಸನ್ಮಾನ್ಯ ಲೋಕಾಯುಕ್ತರಿಗೆ ಸಲ್ಲಿಸಲಾಗಿರುತ್ತದೆ. ರೂ: 817.73 ಕೋಟಿ ಮೊತ್ತದ ಈ ಮೇಲ್ಕಂಡ ಆಧುನೀಕರಣ ಕಾಮಗಾರಿಯನ್ನು ಶೇಕಡ 8.00ರಷ್ಟು ಹೆಚ್ಚುವರಿ ದರಗಳ ಪ್ರಕಾರ ರೂ: 883.15 ಕೋಟಿ ಮೊತ್ತಕ್ಕೆ ಗುತ್ತಿಗೆದಾರರಾದ ಶ್ರೀ ಎಂ.ವೈ.ಕಟ್ಟಿಮನಿ, ವಿಜಯಪುರ ಜಿಲ್ಲೆ ಇವರಿಗೆ ವಹಿಸಲಾಗಿರುತ್ತದೆ. ಈ ಕಾಮಗಾರಿಯನ್ನು ಗುತ್ತಿಗೆದಾರರು ದಿನಾಂಕ: 21.02.2018ರಂದು ಪ್ರಾರಂಭಿಸಿ 15 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ವಾಸ್ತವವಾಗಿ ಈ ಕಾಮಗಾರಿಯು ಇದುವರೆಗೂ ಸಹ ಪೂರ್ಣಗೊಂಡಿರುವುದಿಲ್ಲ.

ಈ ಮೇಲ್ಕಂಡ ಆಧುನೀಕರಣ ಯೋಜನೆಯ ಕಾಮಗಾರಿಯನ್ನು ಗುತ್ತಿಗೆದಾರರು ಕಳೆದ 2019ನೇ ಸಾಲಿನಲ್ಲಿ ಪೂರ್ಣಗೊಳಿಸಬೇಕಾಗಿದ್ದರೂ ಸಹ ಕಾಮಗಾರಿಯನ್ನು ಜಾರಿಗೊಳಿಸುವ ಅಧಿಕಾರಿಗಳಲ್ಲಿ ಒಬ್ಬರಾದ ಸಕ್ಷಮ ಅಧಿಕಾರಿಯವರು ಒದಗಿಸಿರುವ ದಾಖಲೆಯಂತೆ ಕಾಮಗಾರಿಯು ಇದುವರೆಗೂ ಸಹ ಪೂರ್ಣಗೊಂಡಿರುವುದಿಲ್ಲ.

ಈ ಮೇಲ್ಕಂಡ ಕಾಮಗಾರಿಗೆ ಸುಮಾರು 40 ಲಕ್ಷ ಕ್ಯೂಬಿಕ್ ಮೀಟರ್‌ನಷ್ಟು ಗ್ರಾವೆಲ್ ಮಣ್ಣು ಮತ್ತು ಸಿ.ಎನ್.ಎಸ್. ಸಾಯಿಲ್ ಅನ್ನು ಉಪಯೋಗಿಸಲು ಸುಮಾರು ರೂ: 250.00 ಕೋಟಿಯಷ್ಟು ಹಣವನ್ನು ಗುತ್ತಿಗೆದಾರರು ಕೈಮು ಮಾಡಿದ್ದು, ಗುತ್ತಿಗೆದಾರರು ಕಾಮಗಾರಿಗೆ ಉಪಯೋಗಿಸಿರುವಂತೆ ಗುತ್ತಿಗೆದಾರರು ಮತ್ತು ಇಲಾಖೆ ತೋರಿಸಿರುವ ಯಾವೊಂದು ಸ್ಥಳಗಳಲ್ಲಿಯೂ ಸಹ ಗ್ರಾವೆಲ್ ಮಣ್ಣನ್ನು ಉಪಯೋಗಿಸಿರುವುದಿಲ್ಲ ಎಂಬ ಕುರಿತು ಮಂಡ್ಯ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯವರು ಉಲ್ಲೇಖ ಪತ್ರ(2)ರಲ್ಲಿ ಸಮಗ್ರವಾದ ಸ್ಥಳ ತನಿಖಾ ವರದಿಯನ್ನು ನೀಡಿರುತ್ತಾರೆ.

ಕಾಮಗಾರಿಗೆ ಮರಳು ಗಣಿಗಾರಿಕೆಯನ್ನು ನಿಷೇದವಿದ್ದಾಗ್ಯೂ ಸಹ ಸುಮಾರು 100 ಕಿ.ಮೀ. ದೂರದಿಂದ ಮೈಸೂರು ನಗರದ ಟಿ.ನರಸೀಪುರ ಕಾವೇರಿ ನದಿ ಪಾತ್ರದಿಂದ ಸುಮಾರು 2.40 ಲಕ್ಷ ಕ್ಯೂಬಿನ್ ಮೀಟರ್‌ನಷ್ಟು ಮರಳನ್ನು ಎತ್ತುವಳಿ ಮಾಡಿರುವ ಕುರಿತು ಗುತ್ತಿಗೆದಾರರಿಗೆ ಇಲಾಖೆಯು ಬಿಲ್ ನೀಡಿದ್ದು, ವಾಸ್ತವವಾಗಿ ಮರಳು ಗಣಿಗಾರಿಕೆಯನ್ನು ನಿಷೇದಿಸಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಮರಳನ್ನು ಎತ್ತುವಳಿ ಮಾಡಲು ಅನುಮತಿಯನ್ನು ನೀಡುರುವುದಿಲ್ಲ ಮತ್ತು ಈ ಪ್ರಮಾಣದ ಮರಳನ್ನು ಈ ಭಾಗದಲ್ಲಿ ಎತ್ತುವಳಿ ಮಾಡಿರುವುದಿಲ್ಲ ಎಂಬ ಕುರಿತು ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳು ಲಿಖಿತ ಹಿಂಬರಹವನ್ನು ನೀಡಿರುತ್ತಾರೆ.

ದಿನಾಂಕ: 13.07.2021 ರಿಂದ 16.07.2021 ರಿಂದ ಮಾನ್ಯ ಲೋಕಾಯುಕ್ತ ತನಿಖಾ ತಂಡದ ತಾಂತ್ರಿಕ ಅಧಿಕಾರಿಗಳು ಕೈಗೊಂಡ ಸ್ಥಳ ತನಿ ತನಿಖಾ ವರದಿಯಲ್ಲಿ ಬಹುತೇಕ ಸುಳ್ಳು ಅಂಶಗಳನ್ನು ನೀಡಿರುವ ಕುರಿತು ಸದರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮಾನ್ಯ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್‌ರವರಿಗೆ ಲಿಖಿತ ದೂರನ್ನು ಸಹ ನೀಡಲಾಗಿರುತ್ತದೆ. ಒಬ್ಬ ತನಿಖಾ ತಂಡದ ತನಿಖಾಧಿಕಾರಿಯು ತಪ್ಪು ವರದಿ ನೀಡಿರುವ ಸಂಬಂಧ ದೂರು ಸಲ್ಲಿಸಿರುವುದು ಮಾನ್ಯ ಲೊಕಾಯುಕ್ತ ಸಂಸ್ಥೆಯಲ್ಲಿ ಬಹುಶಃ ಮೊದಲನೆಯ ಪ್ರಸಂಗವಿರಬಹುದೆಂದು ಭಾವಿಸುತ್ತೇವೆ.

ನಂತರದ ದಿನಗಳಲ್ಲಿ ಈ ಮೇಲ್ಕಂಡ ಆಧುನೀಕರಣ ಯೋಜನೆಯ ಕಾಮಗಾರಿಯಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯವಹಾರಗಳ ಕುರಿತು ಕೃಷ್ಣರಾಜಪೇಟೆ ತಾಲ್ಲೂಕು ಮಟ್ಟದ ಕರ್ನಾಟಕ ರಾಜ್ಯ ರೈತ ಸಂಘಟನೆಯು ಕೃಷ್ಣರಾಜಪೇಟೆ ತಾಲ್ಲೂಕು ತಹಸಿಲ್ದಾರ್‌ರವರ ಕಛೇರಿಯ ಆವರಣದಲ್ಲಿ ಅಹೋರಾತ್ರಿ ನಡೆಸಿದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ಸಹ ಈ ಮೇಲ್ಕಂಡ ಆಧುನೀಕರಣ ಯೋಜನೆಗೆ ಸಂಬಂಧಿಸಿದಂತೆ ತಾಲ್ಲೂಕು ಆಡಳಿತ ಮತ್ತು ಮಾನ್ಯ ಜಿಲ್ಲಾಧಿಕಾರಿಯವರು ಮತ್ತು ಕ್ಷೇತ್ರದ ಸ್ಥಳೀಯ ಶಾಸಕರು ಮತ್ತು ರಾಜ್ಯದ ಸಂಪುಟದರ್ಜೆ ಸಚಿವರ ಗಮನಕ್ಕೆ ಸಹ ಸಲ್ಲಿಸಲಾಗಿರುತ್ತದೆ. ಕೊನೆಗೆ ರೈತರ ಅಹವಾಲುಗಳನ್ನು ಆಲಿಸಿದ ಮಾನ್ಯ ಜಿಲ್ಲಾಧಿಕಾರಿಯವರು ಸಾಕಷ್ಟು ಚರ್ಚೆಯ ಬಳಿಕ ಪ್ರಕರಣದಲ್ಲಿನ ಅಕ್ರಮ-ಅವ್ಯವಹಾರದ ಗಂಭೀರತೆಯನ್ನು ಅರಿತು ಸಮಗ್ರ ತನಿಖೆ ನಡೆಸಿ ಕಳಪೆ ಕಾಮಗಾರಿ ಮತ್ತು ಅವ್ಯವಹಾರ-ಅಕ್ರಮಗಳ ಕುರಿತು ತನಿಖೆ ನಡೆಸಿ ಕ್ರಮ ಪೂರಕ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ ನಿಯಮಿತ, ಬೆಂಗಳೂರು, ಇವರಿಗೆ ಕೋರಿರುತ್ತಾರೆ. ಈ ಸಂಬಂಧವಾಗಿ ಕಾವೇರಿ ನೀರಾವರಿ ನಿಗಮದಿಂದ ಮೂರು ಜನ ನಿವೃತ್ತ ಮುಖ್ಯ ಇಂಜಿನಿಯರ್‌ಗಳ ತಂಡವನ್ನು ತನಿಖೆ ಮಾಡಿ ವರದಿ ನೀಡಲು ಸೂಚಿಸಿದ್ದು, ಇವರ ಪೂರ್ವಾಪರ ಇತಿಹಾಸದ ಮಾಹಿತಿ ನೀಡಿರುವುದಿಲ್ಲ. ಒಂದು ವೇಳೆ ಈ ಮೂರೂ ಜನ ನಿವೃತ್ತ ಮುಖ್ಯ ಇಂಜಿನಿಯರ್‌ರವರು ಎಲ್ಲರೂ ಸಹ ಉತ್ತರಕರ್ನಾಟಕ ಭಾಗದವರಾಗಿದ್ದು, ಆಧುನೀಕರಣ ಕೈಗೊಂಡಿರುವ ಗುತ್ತಿಗೆದಾರರಿಗೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳಾಗಿರುವ ಕಾರಣ ಪಾರದರ್ಶಕ ತನಿಖೆಯ ಭರವಸೆಯನ್ನು ಹೊಂದಿರುವುದಿಲ್ಲ.

ಮೇಲ್ಕಂಡ ಯೋಜನೆಯ ಅಕ್ರಮವು ಭಾರಿ ಮೊತ್ತದ ಕನಿಷ್ಟ ರೂ: 500.00 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿರುವ ಘಟನೆಯಾಗಿದ್ದು, ಇಲಾಖೆಯ ಅಧಿಕಾರಿಗಳು ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು ಎಲ್ಲಾ ರೀತಿಯ ವಾಮಮಾರ್ಗದ ಅವಿರತ ಪ್ರಯತ್ನವನ್ನು ನಡೆಸುವಲ್ಲಿ ನಿರತರಾಗಿರುತ್ತಾರೆ.

ಈ ಮೇಲ್ಕಂಡ ಯೋಜನೆಯಲ್ಲಿ ಈ ಕೆಳಗಿನಂತೆ ಮೇಲ್ನೋಟಕ್ಕೆ ಯಾವುದೇ ತಂತ್ರಜ್ಞಾನವಿಲ್ಲದೇ ಗೋಚರವಾಗುವಂತಹ ಅಕ್ರಮಗಳು ಕಂಡು ಬರುತ್ತಿದೆ. ಈ ಅಕ್ರಮಗಳ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಡಳಿತದ ಪುನರಾವರ್ತಿತ ಸೂಚನೆಯ ಹೊರತಾಗಿಯೂ ಸಹ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಮೌನವನ್ನು ವಹಿಸಿರುತ್ತಾರೆ.

ನಾಲೆಯ ಆಧುನೀಕರಣ ಯೋಜನೆಯಲ್ಲಿ ಈಗಾಗಲೇ ಬಹುತೇಕ ಕಡೆ ನಾಲೆಯು ಅಲ್ಲಲ್ಲಿ ಕುಸಿದು ಬೀಳುತ್ತಿದ್ದು, ಕುಸಿದು ಬಿದ್ದಿರುವ ಸ್ಥಳಗಳಲ್ಲಿ ಪ್ರದೇಶಗಳಲ್ಲಿ ಅಂದಾಜುಪಟ್ಟಿಯ ಅಳವಡಿಕೆಯಂತೆ ಕಬ್ಬಿಣ-ಟೆಂಪ್ಲೆಟ್-ಯು.ಸಿ.ಆರ್. ಲೈನಿಂಗ್ ಅಳವಡಿಸದೇ ಇರುವ ಅಂಶ ಗೋಚರವಾಗುತ್ತಿದ್ದು, ಈ ಅಕ್ರಮವನ್ನು ಮುಚ್ಚಿಹಾಕಲು ಇಲಾಖೆಯ ಅಧಿಕಾರಿಗಳು ಯತ್ನಿಸುತ್ತಿದ್ದು, ಈ ರೀತಿಯಾಗಿ ನಡೆದಿರುವ ಒಂದು ಸ್ಥಳದ ಉದಾಹರಣೆಯನ್ನು ಸಾಕ್ಷಾಧಾರಗಳ ಸಹಿತ ನಾನು ಪತ್ತೆಹಚ್ಚಿ ವರದಿ ನೀಡುವಂತೆ ಒತ್ತಾಯಿಸಿದರೂ ಸಹ ಕಳೆದ ನಾಲ್ಕು ತಿಂಗಳಿಂದ ಇಲಾಖೆಯು ವರದಿಯನ್ನು ನೀಡಿರುವುದಿಲ್ಲ. ಈ ಸಂಬಂಧವಾಗಿ ಪಾಂಡವಪುರ ಉಪ ವಿಭಾಗಾಧಿಕಾರಿಯವರು ಸೂಕ್ತ ವರದಿಯನ್ನು ನೀಡುವವರೆಗೆ ಯಾವುದೇ ದುರಸ್ತಿ ಕೆಲಸ ಕೈಗೊಳ್ಳದಂತೆ ತಡೆಯನ್ನು ಸಹ ನೀಡಿರುತ್ತಾರೆ.

ಮುಂದುವರೆದು ಮುಂಬರುವ 2023ನೇ ಸಾಲಿನ ಜುಲೈ-ಆಗಸ್ಟ್ ಮಾಹೆಯಲ್ಲಿ ಕೃಷಿ ಚಟುವಟಿಕೆಗೆ ನಾಲೆಯಲ್ಲಿ ನೀರನ್ನು ಹರಿಸುವ ಕಾರ್ಯಕ್ರಮವಿದ್ದು, ಈ ರೀತಿ ನಾಲೆಯಲ್ಲಿ ನೀರನ್ನು ಹರಿಸಿದಲ್ಲಿ ನಡೆದಿರುವ ಮೇಲ್ಕಂಡ ಅಕ್ರಮಅವ್ಯವಹಾರಗಳನ್ನು ಪತ್ತೆ ಹಚ್ಚಲು ಅಲ್ಪ ಪ್ರಮಾಣದ ಹಿನ್ನಡೆಯಾಗುವ ಕಾರಣ ಮತ್ತು ನಾಲೆಯಲ್ಲಿನನ ಅಕ್ರಮಗಳ ವಾಸ್ತವಾಂಶವನ್ನು ಅರಿಯಲು ಸಾಕ್ಷಿ ನಾಶವಾಗುವ ಕಾರಣ ನಾಲೆಯಲ್ಲಿ ಸಂಪೂರ್ಣ ನೀರನ್ನು ನಿಲ್ಲಿಸಿರುವ ಕಾರಣ, ಸನ್ಮಾನ್ಯರು ಖುದ್ದು ಸ್ಥಳಕ್ಕೆ ಆಗಮಿಸಿ ವಾಸ್ತವಾಂಶವನ್ನು ಮನಗಂಡು ಸುಮಾರು 500 ಕೋಟಿಯಷ್ಟು ಅಕ್ರಮ ಎಸಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ತಕ್ಷಣ ಕ್ರಮ ಜರುಗಿಸುವಂತೆ ಈ ಮೂಲಕ ಒತ್ತಾಯಿಸಲಾಗಿತ್ತು. ಆದಾಗ್ಯೂ ಸಹ ಮಾನ್ಯ ಲೋಕಾಯುಕ್ತರಿಂದ ಸಹ ತ್ವರಿತ ತನಿಖೆ ಕೈಗೊಂಡಿರುವುದಿಲ್ಲ.

ಆಧುನೀಕರಣ ಯೋಜನೆಯಲ್ಲಿ ಮೇಲ್ನೋಟಕ್ಕೆ ಈ ಕೆಳಕಂಡ ಅಕ್ರಮಗಳನ್ನು ಯಾವುದೇ ತಂತ್ರಜ್ಞಾನವಿಲ್ಲದೇ ಗಮನಿಸಬಹುದಾಗಿರುತ್ತದೆ

ಕಮ ಸಂಖ್ಯೆ

ಕಾಮಗಾರಿಯ ಹೆಸರು

ಅಂದಾಜು ಮೊತ್ತ

ಸರಪಳಿ 72.260 ರಿಂದ 214.300 ಕಿ.ಮೀ.ವರೆಗೆ ಒಟ್ಟಾರೆಯಾಗಿ ಸಂಪೂರ್ಣ ಕೆಲಸಗಳನ್ನು ಕೈಗೊಳ್ಳದೇ ಇರುವ

ಟರ್ಫಿಂಗ್ ಸಂಪೂರ್ಣ ಮಾಡಿರುವುದಿಲ್ಲ

ವಿವರಗಳು

4,34,01,111.00 1,39,66,685.00

2 ಅರ್ದನ್ ಚರಂಡಿ (ಡ್ರೈನ್) ಮಾಡಿರುವುದಿಲ್ಲ

3 4 5 6 7 8 9 ಗಡಿ ಕಲ್ಲುಗಳು (ಬೌಂಡರಿ ಕಲ್ಲು) (ಒಟ್ಟು 5282, ಒಂದಕ್ಕೆ ರೂ: 183.88ರಂತೆ) ಎಲ್ಲೂ ಸಹ ಗಡಿ ಕಲ್ಲುಗಳನ್ನು ನೆಟ್ಟಿರುವುದಿಲ್ಲ ಶಾಶ್ವತವಾದ ಬೆಂಚ್ ಮಾರ್ಕ್ ಕಲ್ಲು - (ಒಟ್ಟು 569, ಒಂದಕ್ಕೆ ರೂ: 8597.35ರಂತೆ) ಎಲ್ಲೂ ಸಹ ನೆಟ್ಟಿರುವುದಿಲ್ಲ ಐ.ಆರ್.ಸಿ. ಗುಣಮಟ್ಟದ ಕಿಲೋಮೀಟರ್ ಕಲ್ಲುಗಳು (ಪ್ರತಿ ಕಿ.ಮೀ.ಗೆ ಒಂದರಂತೆ 142 ಸಂಖ್ಯೆ ಒಂದಕ್ಕೆ ರೂ: 1785.81ರಂತೆ, ಎಲ್ಲೂ ಸಹ ನೆಟ್ಟಿರುವುದಿಲ್ಲ ಐ.ಆರ್.ಸಿ. ಗುಣಮಟ್ಟದ ಹೆಕ್ಟೋಮೀಟರ್ ಕಲ್ಲುಗಳು ಒಟ್ಟು 1255 ಸಂಖ್ಯೆ, ಒಂದಕ್ಕೆ ರೂ: 1218.67ರಂತೆ)- ಎಲ್ಲೂ ಸಹ ಕಾಣಸಿಗುತ್ತಿಲ್ಲ 10.50 ಕಿಲೋ ವ್ಯಾಟ್ ಸಾಮರ್ಥ್ಯದ 3 ಜನರೇಟರ್‌ಗಳು ಏನಾದವು, ಈ ಯಂತ್ರಗಳನ್ನು ಗುತ್ತಿಗೆದಾರರು ಒದಗಿಸಿಕೊಳ್ಳಬೇಕಾಗಿದ್ದು, ಇಲಾಖೆ ಮಾಡಿದ್ದರ ಹಿಂದಿನ ದುರುದ್ದೇಶ ಏನು ಸರಬರಾಜು ಗಾರ್ಡ್‌ಸ್ಟೋನ್ (ರಕ್ಷಣಾ ಕಲ್ಲುಗಳು) 21358 ಸಂಖ್ಯೆ, ಒಂದಕ್ಕೆ ರೂ: 2239ರಂತೆ ಇದರಿಂದ ರೈತರ ಪ್ರಾಣ ರಕ್ಷಣೆಗೆ ಪೂರಕವಾದ ಅಂಶವನ್ನು ಗುತ್ತಿಗೆದಾರರು ನುಂಗಿದ್ದಾರೆ. ನಾಲೆಯುದ್ದಕ್ಕೂ 450ಮಿಮಿ ಉದ್ದ, 50ಮಿಮಿ ವ್ಯಾಸದ 68305 ಪ್ರೆಷರ್ ರಿಲೀಪ್ ಪೈಪ್‌ಗನ್ನು ಹಾಕಿರುವುದಿಲ್ಲ (ಒಂದಕ್ಕೆ ರೂ: 317.20 ರಂತೆ ಒಟ್ಟಾರೆ 68305ಕ್ಕೆ) + 16,52,776.00 9,71,254.00 48,91,892.00 2,53,585.00 15,29,431.00 20,40,000.00 4,78,20,562.00 2,16,66,319.00