ಬೆಂಗಳೂರಿನಲ್ಲಿ ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ಸ್ ನ `ಗ್ರೇವಾಲ್ವ್’ ಸಮ್ಮೇಳನ

ಹೊಸ ಯೋಜನೆ ಜಾರ್ಜ್ ಟೌನ್ ನಲ್ಲಿ ಹೂಡಿಕೆ ಆಕರ್ಷಣೆಗೆ ಈ ಕಾರ್ಯಕ್ರಮ ಆಯೋಜನೆ

ಬೆಂಗಳೂರು, 24 ಜೂನ್ 2023: ಟೆಕ್ಸಾಸ್ ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ಹೂಡಿಕೆ ಕಂಪನಿಯಾಗಿರುವ ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ಸ್ ತನ್ನ ಬಹುನಿರೀಕ್ಷಿತ ಗ್ರೇವಾಲ್ವ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ 23 ಜೂನ್ 2023 ರಂದು ಏರ್ಪಡಿಸಿತ್ತು. ಈ ಅಶ್ಟನ್ ಗ್ರೇ ಸಂಸ್ಥೆಗೆ ತನ್ನ ಚಾನಲ್ ಪಾಲುದಾರರು ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಇತ್ತೀಚಿನ ಯೋಜನೆಯಾಗಿರುವ `ಜಾರ್ಜ್ ಟೌನ್’ ಅನ್ನು ಘೋಷಣೆ ಮಾಡಲು ಈ ಕಾರ್ಯಕ್ರಮ ಒಂದು ವೇದಿಕೆಯಾಗಿತ್ತು. ಯುನೈಟೆಡ್ ಸ್ಟೇಟ್ಸ್ ನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರಿಗೆ ಉತ್ತಮ ಅವಕಾಶವನ್ನು ಕಲ್ಪಿಸಿತ್ತು.

ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ಸ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಸುದರ್ಶನ್ ವೆಂಬುಟ್ಟಿ ಅವರು ಮಾತನಾಡಿ, ``ಗ್ರೇವಾಲ್ವ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದ್ದಕ್ಕೆ ಅತ್ಯಂತ ಸಂತಸವಾಗಿದೆ. ಚಾನಲ್ ಪಾಲುದಾರರಿಂದ ಅಭೂತಪೂರ್ವವಾದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ’’ ಎಂದರು.

``ಬೆಂಗಳೂರಿನಲ್ಲಿ ನಡೆದ ಈ ಗ್ರೇವಾಲ್ವ್ ಕಾರ್ಯಕ್ರಮದ ಯಶಸ್ಸು ನಮಗೆ ರೋಮಾಂಚನಗೊಳಿಸಿದೆ. ಈ ಕಾರ್ಯಕ್ರಮವು ನಮ್ಮ ಗೌರವಾನ್ವಿತ ಚಾನಲ್ ಪಾಲುದಾರರು. ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮುಂದೆಯೂ ಇದೇ ರೀತಿ ಉತ್ತೇಜನಕಾರಿ ನಿರೀಕ್ಷೆಗಳನ್ನು ಪ್ರದರ್ಶನ ಮಾಡಲು ನಮಗೆ ಅಮೂಲ್ಯವಾದ ಅವಕಾಶಗಳನ್ನು ಒದಗಿಸಿದೆ. ನಾವು ಈ ಕಾರ್ಯಕ್ರಮದಿಂದ ಪಡೆದಿರುವ ಅಗಾಧವಾದ ಪ್ರತಿಕ್ರಿಯೆಯಿಂದ ನಮ್ಮ ಬಲವಾದ ಸಂಬಂಧ ಮತ್ತು ನಮ್ಮ ಪಾಲುದಾರರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ’’ ಎಂದು ಹೇಳಿದರು.

ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ಸ್ ನ ಸಹ-ಸಂಸ್ಥಾಪಕ ಮತ್ತು ಸಿಇಒ ಸುಮಿ ರೆಂಗರಾಜ್ ಅವರು ತಮ್ಮ ಭಾಷಣದಲ್ಲಿ ಕಂಪನಿ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಇದೇ ವೇಳೆ, ವಿಪುಲವಾದ ಹೂಡಿಕೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹೂಡಿಕೆದಾರರಿಗೆ ಕರೆ ನೀಡಿದರು. 

ಹೊಸ ಯೋಜನೆ ಬಗ್ಗೆ ಮಾತನಾಡಿದ ಅವರು, ``ಜಾರ್ಜ್ ಟೌನ್ ಯೋಜನೆಯನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಮತ್ತು ಕುತೂಹಲವೆನಿಸುತ್ತಿದೆ. ಟೆಕ್ಸಾಸ್ ನ ಜಾರ್ಜ್ ಟೌನ್ ನಲ್ಲಿ 5.6 ಎಕರೆಯ ವಾಣಿಜ್ಯ ನಿವೇಶನದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಒಂದು ಅನನ್ಯವಾದ ಅವಕಾಶವನ್ನು ನೀಡುತ್ತದೆ. ರಾಷ್ಟ್ರ ಮಟ್ಟದಲ್ಲಿ ಪರಿಗಣಿಸಲ್ಪಟ್ಟಿರುವ ಮಾಸ್ಟರ್ ಪ್ಲಾನ್ ಡೆವಲಪರ್ ಸಂಸ್ಥೆಯಾಗಿರುವ ಜಾನ್ಸನ್ ಡೆವಲಪ್ಮೆಂಟ್ ನಿಂದ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂಸ್ಥೆಯು ಗೃಹ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ಜಾರ್ಜ್ ಟೌನ್ ನಲ್ಲಿ ವಾಣಿಜ್ಯ ಅಭಿವೃದ್ಧಿಗಾಗಿ ಆಕರ್ಷಕ ನಿವೇಶನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಪ್ರದೇಶವು ಪಾರ್ಮರ್ ರಂಚ್ ಮತ್ತು ಸನ್ ಸಿಟಿ ಸಮೀಪದಲ್ಲಿದ್ದು, ಇಲ್ಲಿಂದ ಪ್ರಮುಖ ಹೆದ್ದಾರಿಗಳಿಗೆ ಸುಲಭದ ಸಂಪರ್ಕವಿದೆ. ಈ ಪ್ರಮುಖ ಕಾರಣದಿಂದ ಇಲ್ಲಿ ಹೂಡಿಕೆ ಮಾಡಲು ಒಂದು ಉತ್ತಮ ಅವಕಾಶವಿದೆ’’ ಎಂದರು.

ಇದಲ್ಲದೇ, ಪ್ರೀಮಿಯರ್ ಗೃಹ ಅಥವಾ ವಸತಿ ಯೋಜನೆಗಳ ಸಂಸ್ಥೆಗಳ ಸೇರ್ಪಡೆಯಿಂದಾಗಿ ಜಾರ್ಜ್ ಟೌನ್ ಯೋಜನೆಯು ಸುತ್ತಮುತ್ತಲಿನ ಕುಟುಂಬಗಳು ಮತ್ತು ಮನೆ ಖರೀದಿದಾರರನ್ನು ಆಕರ್ಷಿಸಲು ಸಿದ್ಧವಾಗಿದೆ. ಶಾಲಾ ಜಿಲ್ಲೆಗಳು, ಬಾರ್ ಡಬ್ಲ್ಯೂ ಮಾರ್ಕೆಟ್ ಪ್ಲೇಸ್ ಶಾಪಿಂಗ್ ಸೆಂಟರ್ ಗೆ ಈ ಜಾರ್ಜ್ ಟೌನ್ ಸನಿಹದಲ್ಲಿದೆ ಮತ್ತು ಸದ್ಯದಲ್ಲಿಯೇ ವೈಲ್ಡ್ ಫ್ಲವರ್ ಹೌಸ್ ಅಮೆನಿಟಿ ಸೆಂಟರ್ ಸಹ ಇದರ ಸಮೀಪದಲ್ಲಿಯೇ ಆರಂಭವಾಗಲಿರುವುದರಿಂದ ಈ ಯೋಜನೆಯು ವಾಣಿಜ್ಯ ಸೈಟ್ ಗೆ ಹೆಚ್ಚು ಮೌಲ್ಯವನ್ನು ತಂದುಕೊಡುತ್ತದೆ ಮತ್ತು ಲಾಭದಾಯಕ ಹೂಡಿಕೆಗೆ ಮುಕ್ತ ಅವಕಾಶವನ್ನು ಕಲ್ಪಿಸುತ್ತದೆ. ಆಶ್ಟನ್ ಗ್ರೇ ಮತ್ತು ಜಾನ್ಸನ್ ಡೆವಲಪ್ಮೆಂಟ್ 523 ಎಕರೆ ಅಭಿವೃದ್ಧಿ ಯೋಜನೆಗೆ ಸಹಭಾಗಿತ್ವವನ್ನು ಮಾಡಿಕೊಂಡಿವೆ. ನೋಲಿನಾ ಯೋಜನೆಯಲ್ಲಿ ಭವಿಷ್ಯದ ಅಭಿವೃದ್ಧಿಗಾಗಿ 23.2 ಎಕರೆ ವಾಣಿಜ್ಯ ನಿವೇಶನವನ್ನು ಮೀಸಲಿಟ್ಟಿವೆ.

ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ ತಂಡವು ಗಣನೀಯವಾದ ಹೂಡಿಕೆ ಅವಕಾಶಗಳನ್ನು ಅನ್ಲಾಕ್ ಮಾಡಲು ಮತ್ತು ಪರಸ್ಪರ ಯಶಸ್ಸನ್ನು ಸಾಧಿಸಲು ಚಾನಲ್ ಪಾಲುದಾರರು ಮತ್ತು ಹೂಡಿಕೆದಾರರ ನಡುವಿನ ಸಹಯೋಗ ಅತ್ಯಗತ್ಯ ಎಂಬುದರಲ್ಲಿ ನಂಬಿಕೆ ಇಟ್ಟುಕೊಂಡಿದೆ. ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ ನ ಪ್ರಮುಖ ಉಪಕ್ರಮವಾಗಿರುವ ಗ್ರೇವಾಲ್ವ್ ಕಾರ್ಯಕ್ರಮವು ಚಾನಲ್ ಪಾಲುದಾರರು ಮತ್ತು ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ವಿನ್ಯಾಸಗೊಳಿಸಲಾಗಿರುವ ಒಂದು ಕ್ರಿಯಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಪಾಲುದಾರರ ಸಾಮರ್ಥ್ಯಗಳನ್ನು ಹೆಚ್ಚಿಸಿ, ಅವರ ವ್ಯವಹಾರದ ವ್ಯಾಪ್ತಿಯನ್ನು ವಿಸ್ತರಣೆ ಮಾಡಲು ಸಮಗ್ರ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ. ತಮ್ಮ ಗ್ರಾಹಕರ ವೈವಿಧ್ಯಮಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಜಾಗರೂಕವಾಗಿ ಸಂಗ್ರಹಿಸಲಾದ ಉನ್ನತ ಗುಣಮಟ್ಟದ ಹೂಡಿಕೆ ಆಯ್ಕೆಗಳ ವಿಶಾಲವಾದ ಜಾಲದ ಪ್ರವೇಶವನ್ನು ಕಲ್ಪಿಸುತ್ತದೆ. ಇದಲ್ಲದೇ, ಗ್ರೇವಾಲ್ವ್ ಹೂಡಿಕೆದಾರರಿಗೆ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸುವ ಪರಿಸರ ವ್ಯವಸ್ಥೆಯನ್ನು ನೀಡುವ ಮೂಲಕ ಅವರಿಗೆ ಲಾಭದಾಯಕ ಅನುಭವವನ್ನು ಖಾತ್ರಿಗೊಳಿಸುತ್ತದೆ.

ಜಾರ್ಜ್ ಟೌನ್ ಯೋಜನೆ ಆರಂಭದ ಜೊತೆಗೆ ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ಸ್ ರಿಯಲ್ ಎಸ್ಟೇಟ್ ಉತ್ಸಾಹಿಗಳು ಮತ್ತು ಹೂಡಿಕೆದಾರರಿಗೆ ಅತ್ಯಾಕರ್ಷಕವಾದ ಟೆಕ್ ಚಾಲಿತ ವೇದಿಕೆಯಾದ ಎಲ್ಬೇಸ್ ಅನ್ನು ಅನಾವರಣಗೊಳಿಸಿದೆ. ಈ ನವೀನ ವೇದಿಕೆಯು ಬಳಕೆದಾರರನ್ನು ಅನ್ವೇಷಣೆ ಮಾಡಲು, ಅವರನ್ನು ಸಂಪರ್ಕಿಸಲು ಮತ್ತು ಇತ್ತೀಚಿನ ಡೀಲ್ ಗಳು ಹಾಗೂ ಕೊಡುಗೆಗಳ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗುತ್ತದೆ.

ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ಸ್ ರಿಯಲ್ ಎಸ್ಟೇಟ್ ಅಭಿವೃದ್ದಿಯಲ್ಲಿ 13 ವರ್ಷಗಳ ಸುದೀರ್ಘ ಅನುಭವದೊಂದಿಗೆ ಯಶಸ್ಸನ್ನು ದಾಖಲಿಸಿದೆ. ಸಂಸ್ಥೆಯ ಪ್ರಭಾವಶಾಲಿ ಪೋರ್ಟ್ ಫೋಲಿಯೋವು ಐಷಾರಾಮಿಯಾದ ವಿಶೇಷ ಮನೆಗಳು, ಸಬ್ ಡಿವಿಶನ್ ಗಳು, ಮಲ್ಟಿ ಫ್ಯಾಮಿಲಿ ಪ್ರಾಪರ್ಟಿಗಳು, ರೀಟೇಲ್ ಸೆಂಟರ್ ಗಳು, ಸೀನಿಯರ್ ಲಿವಿಂಗ್ ಕಮ್ಯುನಿಟಿಗಳು ಮತ್ತು ಮಾಸ್ಟರ್ ಪ್ಲಾನ್ ಅಭಿವೃದ್ಧಿಗಳನ್ನು ಒಳಗೊಂಡಿದೆ. ಸಮಗ್ರತೆ, ಪಾರದರ್ಶಕತೆ ಮತ್ತು ಉತ್ಕೃಷ್ಟತೆಗೆ ಹೆಸರಾಗಿರುವ ಕಂಪನಿಯು ತನ್ನ ಬದ್ಧತೆಗೆ ಹಲವಾರು ಮನ್ನಣೆ ಮತ್ತು ಪುರಸ್ಕಾರಗಳನ್ನು ಗಳಿಸಿದೆ.

ಲೋ ಬ್ಯಾರಿಯರ್ ಟು ಎಂಟ್ರಿ, ವೈವಿಧ್ಯಮಯ ಹೂಡಿಕೆಗಳು, ಜಾಗತಿಕ ಹೂಡಿಕೆ ಅವಕಾಶಗಳು, ಕಡಿಮೆ ಅವಧಿಯಲ್ಲಿ ವೇಗವಾದ ಆದಾಯ ಗಳಿಕೆ ಮತ್ತು ಸಂಯೋಜಿತ ಮಾದರಿಯ ಮೂಲಕ ಸುರಕ್ಷಿತ ಹೂಡಿಕೆಗಳನ್ನು ಒಳಗೊಂಡ ಹಲವಾರು ಪ್ರಯೋಜನಗಳನ್ನು ಅಶ್ಟನ್ ಗ್ರೇ ನೀಡುತ್ತದೆ. ಕಳೆದ ಒಂದು ದಶಕದಿಂದ ಶೇ.100 ರಷ್ಟು ಕಾರ್ಯಕ್ಷಮತೆಯ ದಾಖಲೆಯೊಂದಿಗೆ ಅಶ್ಟನ್ ಗ್ರೇ ಇನ್ವೆಸ್ಟ್ ಮೆಂಟ್ಸ್ ಹೆಚ್ಚಿನ ಆದಾಯವನ್ನು ನೀಡುವುದನ್ನು ಮುಂದುವರಿಸಿದೆ ಮತ್ತು ಹೂಡಿಕೆದಾರರಿಗೆ ನಿರೀಕ್ಷೆಗಳನ್ನು ಪೂರೈಸುವುದರಲ್ಲಿ ಯಶಸ್ವಿಯಾಗಿದೆ.

ಭಾರತೀಯ ಪ್ರಜೆಗಳು, ಅನಿವಾಸಿ ಭಾರತೀಯರು (NRI), ಭಾರತೀಯ ಮೂಲದ ವ್ಯಕ್ತಿಗಳು (PIOs), ಸೀಮಿತ ಹೊಣೆಗಾರಿಕೆ ಪಾಲುದಾರಿಕಗಳು (LLP) ಮತ್ತು ಖಾಸಗಿ ಲಿಮಿಟೆಡ್ ಕಂಪನಿಗಳು ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಆದಾಗ್ಯೂ, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ನಿಯಮ ಪಾಲನೆ ಮಾಡುವ ಬಗ್ಗೆ ಮಾಹಿತಿಗಳನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.