ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ವ್ತಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಕತ್ತು ಕೊಯ್ದು ರಕ್ತ ಕುಡಿದ ಭೀಕರ ಘಟನೆ ನಡೆದಿದೆ.
ಚಿಂತಾಮಣಿ ನಗರದ ಗಾಂಧಿನಗರ ನಿವಾಸಿ ವಿಜಯ್ ಎಂಬಾತ ಚೇಳೂರು ತಾಲೂಕಿನ ಮಂಡಪಲ್ಲಿ ಗ್ರಾಮದ ಮಾರೇಶ್ ಎಂಬಾತನ ಕತ್ತು ಕೊಯ್ದು ರಕ್ತ ಕುಡಿದಿದ್ದಾನೆ. ಈ ಭೀಭತ್ಸ ಕೃತ್ಯವನ್ನು ವೀಡಿಯೋ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಈ ಭೀಕರ ಕೃತ್ಯ ಎಸಗಿದ ವಿಜಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.
 
  
  
  
  
   
  