ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಕಂಪನಿಯ ಮಾಲೀಕರಾದ ಎಲಾನ್ ಮಸ್ಕ್ ಅವರು ಭೇಟಿಯಾಗಿದ್ದಾರೆ.
ಈ ವೇಳೆ ನರೇಂದ್ರ ಮೋದಿ ಅವರು "ಮೇಕ್ ಇನ್ ಇಂಡಿಯಾ" ಪರಿಕಲ್ಪನೆಯನ್ನು ಎಲಾನ್ ಮಸ್ಕ್ ಅವರಿಗೆ ತಿಳಿಸಿದರು. ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಎಲಾನ್ ಮಸ್ಕ್ ಅವರು ಶೀಘ್ರದಲ್ಲೇ ಟೆಸ್ಲಾ ಕಂಪನಿ ಭಾರತಕ್ಕೆ ಬರಲಿದೆ ಎಂದಿದ್ದಾರೆ.