ನಿಜ... ಮಾವು ಹಣ್ಣುಗಳ ಗಾಜ,,, ಈ ಹಣ್ಣು ಅಂದರೆ ಜನಕ್ಕೆ ಎಲ್ಲಿಲ್ಲದ ಮೋಹ, ಯಾವ ಹಣ್ಣನ್ನು ತಿನ್ನುತ್ತಾರೋ ಇಲ್ಲವೋ. ಆದರೆ ಮಾವಿನ ಹಣ್ಣು ಅಂದರೆ ಪ್ರತಿಯೊಬ್ಬರ ಬಾಯಲ್ಲೂ ನೀರೂರುತ್ತದೆ, ಭಾರತದ ಮಟ್ಟಿಗೆ ಸರಿಸುಮಾರು ನಾಲ್ಕು ಸಾವಿರ ವರ್ಷಗಳಿಂದ ಮಾವಿನ ಬೇಸಾಯ ಇದೆ ಎನ್ನಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಮಾವಿನ ಹಣ್ಣಿನ ಬೃಹತ್ ಮೇಳ ಏರ್ಪಾಟಾಗಿದೆ. ವಾಸವಿ ಕಾಂಡಿಮೆಂಟ್ಸ್ ಎಲ್ಲರಿಗೂ ಚಿರಪರಿಚಿತ. ಅದರಲ್ಲೂ ಅವರೇಕಾಯಿ ಸೀಸನ್ ಬಂತೆಂದರೆ ಬೆಂಗಳೂರಿನ ಜನ ವಾಸವಿ ಕಾಂಡಿಮೆಂಟ್ಸ್ ಕಡೆ ಒಂದು ವಿಸಿಟ್ ಹಾಕದೇ ಇರೋದಿಲ್ಲ. ರೈತರಿಂದ ನೇರವಾಗಿ ಅವರೇಕಾಯಿ ಖರೀದಿಸಿ, ಅದರಿಂದ ಬಗೆಬಗೆಯ ಖಾದ್ಯ ಸಿದ್ಧಪಡಿಸಿ, ಮಾರಾಟ ಮಾಡುವ ಪರಿಪಾಠವನ್ನು ವಾಸವಿ ಕಾಂಡಿಮೆಂಟ್ಸ್ ಕಳೆದ ಎರಡು ದಶಕಗಳಿಂದ ನಿರಂತರವಾಗಿ ಮುಂದುವರೆಸಿಕೊಂಡು ಬಂದಿದೆ.
ಈ ಬಾರಿ ವಾಸವಿ ಕಾಂಡಿಮೆಂಟ್ಸ್ ಮಾವಿನ ಹಣ್ಣಿಗೂ ಕೈ ಇಟ್ಟಿದೆ. ಮಾವು ಅಭಿವೃದ್ಧಿ ಮಂಡಳಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದೊಂದಿಗೆ ಮಾವಿನ ಹಣ್ಣು ಮತ್ತು ಅದರ ಖಾದ್ಯಗಳ ಮೇಳವನ್ನು ಆಯೋಜಿಸಿದೆ. ಕೋಲಾರ, ಶ್ರೀನಿವಾಸಪುರ, ಮಧುಗಿರಿ, ಮಂಡ್ಯ, ಶ್ರೀರಂಗಪಟ್ಟಣ, ರಾಮನಗರ ಜಿಲ್ಲೆಗಲ್ಲಿ ರೈತರು ಬೆಳೆದ ವಿವಿಧ ತಿಳಿಯ ಮಾವು ಇಲ್ಲಿ ನೇರವಾಗಿ ಗ್ರಾಹಕರಿಗೆ ದೊರೆಯಲಿದೆ. ಯಾವುದೇ ಪೌಡರ್ ಬಳಸದೇ, ಕೃತಕ ವಿಧಾನಗಳನ್ನು ಅನುಸರಿಸದ ಸಹಜವಾಗಿ ಹಣ್ಣಾದ ತಾಜಾ ಮಾವಿನಹಣ್ಣುಗಳು ಇಲ್ಲಿ ಲಭ್ಯವಿರುತ್ತದೆ. ಹಿಂದಿನ ದಿನ ಮರದಿಂದ ಕಿತ್ತ ಹಣ್ಣುಗಳು ಮಾರನೇ ದಿನಕ್ಕೆ ಜನರ ಖರೀದಿಗೆ ಸಿಗಲಿದೆ.
ಆಲಂಪುರ್, ಆಲೋನ್ಸ್, ಬಾದಾಮಿ, ರಸಪುರಿ, ಮಲಗೋಬಾ, ತೀರಾ ವಿರಳವಾದ ಗುಲಾಬ್ದಾಸ್, ಇಮಾಮ್ ಪಸಂದ್, ಮಾಯಾಸಿಂಧೂರಿ ತಳಿಯ ಹಣ್ಣುಗಳೂ ಇಲ್ಲಿ ದೊರಕಲಿವೆ. ಇಂಗ್ಲೆಂಡ್, ಜರ್ಮನ್ ಮತ್ತು ಫ್ರಾನ್ಸ್ ದೇಶಗಳಿಗೆ ಕೂಡಾ ಹಣ್ಣುಗಳನ್ನು ರಫ್ತು ಮಾಡಲಾಗುತ್ತಿದೆ.
2023ನೇ ಸಾಲಿನ ಮಾವಿನ ಹಣ್ಣಿನ ಈ ಮೇಳ ಇದೇ ಜೂನ್ 15ರಿಂದ 19ರ ವರೆಗೆ ಜಯನಗರ 4ನೇ ಬ್ಲಾಕ್, ಬಿ.ಎಸ್.ಎನ್ಬೆಲ್ ಕಛೇರಿ ಎದುರು ಇರುವ ಶಾಲಿನಿ ಮೈದಾನದಲ್ಲಿ ನಡೆಯಲಿದೆ. ಮಾವು ಪ್ರಿಯರೆಲ್ಲರೂ ಈ ಮೇಳಕ್ಕೆ ಆಗಮಿಸಿ, ಇಷ್ಟದ ಹಣ್ಣು ಮತ್ತು ತಿನಿಸುಗಳನ್ನು ಖರೀದಿಸಿ, ಸವಿಯಬಹುದು ಎಂದು ಸ್ವಾತಿ, ವ್ಯವಸ್ತಾಪಕರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಿದರು.