ಹಾವೇರಿ : ನಮ್ಮ ಕಾಲದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ಕಾಂಗ್ರೆಸ್ ನಿಂದಲೇ ವಿದ್ಯುತ್ ದರ ಹೆಚ್ಚಳದ ಆಜ್ಞೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
पटौदी इंटरप्राइजेज एवं अलगोजा रिसोर्ट - बूंदी
पटौदी इंटरप्राइजेज एवं अलगोजा रिसोर्ट कीऔर से बूंदी वासियों को दीपावली की हार्दिक बधाई व शुभकामनाएं
ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕೆ.ಇ.ಆರ್. ಸಿ ಅದೊಂದು ಸ್ಟೆಚುಟರಿ ಬಾಡಿಯವರು ಮಾರ್ಚ್ ನಲ್ಲಿ ಹೆಚ್ಚಳದ ಪ್ರಸ್ತಾವನೆ ಕೊಟ್ಟರೂ, ನಾವು ಒಪ್ಪಿಗೆ ಕೊಟ್ಟಿರಲಿಲ್ಲ. ನಾವು ವಿದ್ಯುತ್ ದರ್ ಹೆಚ್ಚಳದ ಯಾವುದೇ ಆದೇಶ ಮಾಡಿಲ್ಲ. ಕಾಂಗ್ರೆಸ್ ನವರು ಬಂದ ಮೇಲೆಯೇ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಅವರ ಆಜ್ಞೆಯಿಂದಲೇ ವಿದ್ಯುತ್ ದರ ಹೆಚ್ಚಳ ಆಗಿದೆ ಎಂದರು.
ಏಪ್ರೀಲ್ ನಿಂದ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಇದು ಬಹಳ ದೊಡ್ಡ ಭಾರ ಇದೆ. ಬರುವ ದಿನಗಳಲ್ಲಿ ಎಲೆಕ್ಟ್ರಿಸಿಟಿ ಕ್ಷೇತ್ರ ಬಹಳ ಸಂಕಷ್ಟಕ್ಕೆ ಈಡಾಗಲಿದೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಗೆ ಹಣ ಕೊಡಬೇಕು. ಒಂದು ವರ್ಷ ಬಿಟ್ಟು ಸಬ್ಸಿಡಿ ಕೊಟ್ಟರೆ ಆಗಲ್ಲ. ಮುಂಗಡವಾಗಿ ಸಬ್ಸಿಡಿ ಕೊಡಬೇಕು ಎಂದರು.
ರಾಜ್ಯದ ಶಾಲಾ ಮಕ್ಕಳಿಗೆ ಸ್ಕೂಲ್ ಬಸ್ ಕೊಡಬೇಕು. ಶಾಲಾ ಮಕ್ಕಳ ಸುರಕ್ಷತೆ ಆಗುತ್ತದೆ. ಈಗಾಗಲೇ ನಾವಯ ಆಜ್ಞೆ ಕೂಡ ಮಾಡಿದ್ದೇವೆ. ಇದಕ್ಕೆ ಬಜೆಟ್ ನಲ್ಲಿ ಹಣ ಕೂಡ ಇಟ್ಟಿದ್ದೇವೆ. ಸಾರಿಗೆ ಹಾಗೂ ವಿದ್ಯುತ್ ಕ್ಷೇತ್ರಗಳಿಗೆ ಸರಿಯಾಗಿ ಹಣ ಕೊಟ್ಟು ನಿರ್ವಹಿಸದೇ ಇದ್ದರೆ, ಸಾರಿಗೆ ಸ್ಥಗಿತ ಆಗುವುದು, ವಿದ್ಯುತ್ ಶಕ್ತಿ ನಿಲ್ಲುವುದು ಗ್ಯಾರಂಟಿ ಆಗುತ್ತದೆ ಎಂದು ಮಾಜಿ ಸಿಎಂ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.
ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಿ: ಬೊಮ್ಮಾಯಿ
ಬಸ್ ಗಳನ್ನು ಎಲ್ಲಾ ರೂಟ್ ಗಳಿಗೆ , ಶೆಡ್ಯೂಲ್ ಗಳಿಗೆ ಪೂರ್ವ ನಿಯೋಜಿತವಾಗಿ ಆಗಿರುವಂತೆ ಬಿಡವುದು ಕೆ.ಎಸ್ ಆರ್.ಟಿ ಸಿ ಕರ್ತವ್ಯ. ಉಚಿತ ಯೋಜನೆಗಳು ಹೆಣ್ಣುಮಕ್ಕಳಿಗೆ ಏನು ಬೇಕೋ ಅದನ್ನು ಮಾಡಲಿ. ಆದರೆ ಮಾಡುವ ಭರದಲ್ಲಿ ರೂಟ್ ಕ್ಯಾನ್ಸಲ್ ಮಾಡುವುದು. ಒಂದೇ ಬಸ್ ಬಿಡುವುದು, ಈ ತರ ಎಲ್ಲ ಹಲವಾರು ದೂರುಗಳು ಬರುತ್ತಿವೆ ಎಂದರು.
ಇನ್ನೂ ಇದೇ ವೇಳೆ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೂ ಬಹಳ ತೊಂದರೆ ಆಗುತ್ತಿದೆ. ಹೀಗಾಗಿ ಶಾಲಾ ಮಕ್ಕಳು ಬಸ್ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುತ್ತಿದ್ದಾರೆ. ಹಾನಗಲ್ ತಾಲೂಕಿನಲ್ಲಿ ನಿನ್ನೆ ಒಂದು ಅನಾಹುತ ಕೂಡ ಆಗಿದೆ. ಈ ತರ ಆಗದ ಹಾಗೆ ನೋಡಿಕೊಳ್ಳಬೇಕು. ವ್ಯವಸ್ಥೆ ಹದಗೆಡಬಾರದು ಎಂದರು.
ಒಂದೊಳ್ಳೆ ಕಾರ್ಯಕ್ರಮ ಇದ್ದಾಗ ಸಮರ್ಪಕವಾಗಿ ತಯಾರಿ ಮಾಡಿಕೊಳ್ಳಬೇಕು. ಈ ಗುರುತರ ಜವಾಬ್ದಾರಿ ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಎಂ.ಡಿ ಮೇಲಿದೆ. ಒಂದು ವಾರದಲ್ಲಿ ಈ ಸಮಸ್ಯೆಗಳನ್ನು ಅವರು ಸರಿ ಮಾಡಬೇಕು. ಇಲ್ಲದಿದ್ದರೆ ಯಾವ ಉದ್ದೇಶಕ್ಕಾಗಿ ಹೆಣ್ಣುಮಕ್ಕಳಿಗೆ ಫ್ರೀ ಮಾಡಿದ್ದಾರೋ, ಆ ಉದ್ದೇಶ ಈಡೇರಲ್ಲ ಎಂದರು.