'ಬಿಪೊರ್ ಜಾಯ್' ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಮಹಾರಾಷ್ಟ್ರ ರಾಜ್ಯದ ಮುಂಬೈ ಹಾಗೂ ಗುಜರಾತ್ ನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಹೀಗಾಗಿ ಈ ಎರಡೂ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಏರ್‌ಪೋರ್ಟ್ ನ (9/27) ರನ್ ವೇ ಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ಕೆಲ ವಿಮಾನಗಳು ರದ್ದಾಗಿವೆ, ಇನ್ನು ಕೆಲವು ವಿಮಾನಗಳು ಮುಬೈಗೆ ನಿದಾನವಾಗಿ ಬರಲಿವೆ.