ಕೊಲಂಬಿಯಾ: ಅಮೆಜಾನ್‌ ವಿಮಾನ ಅಪಘಾತವಾದ ಬರೋಬ್ಬರಿ 40 ದಿನಗಳ ನಂತರ ನಾಲ್ಕು ಮಕ್ಕಳು ಪತ್ತೆಯಾಗಿದ್ದಾರೆ. ವಿಮಾನ ಅಪಘಾತದಲ್ಲಿ ಬದುಕುಳಿದ 4 ಮಕ್ಕಳನ್ನು ಕೊಲಂಬಿಯಾ ಪೊಲೀಸರು ಸಂರಕ್ಷಣೆ ಮಾಡಿದ್ದಾರೆ.

  ಈ ವಿಮಾನ ಅಪಘಾತದಲ್ಲಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದರು. ದಟ್ಟವಾದ ಅರಣ್ಯದ ಮಧ್ಯೆ ವಿಮಾನ ಅಪಘಾತವಾಗಿತ್ತು. ಸ್ಥಳೀಯ ಪೊಲೀಸರ ಮುನ್ನೆಚ್ಚರಿಕೆಯಿಂದ ಕಾಡಿನಲ್ಲಿದ್ದ ನಾಲ್ಕು ಮಕ್ಕಳ ಪವಾಡ ಸದೃಶವಾಗಿ ಪಾರಾಗಿದ್ದಾರೆ. ವಿಮಾನ ಅಪಘಾತದ ಬಳಿಕ ಮಕ್ಕಳನ್ನು ಪತ್ತೆಹಚ್ಚಲು ಪೊಲೀಸರು ನಿರಂತರವಾಗಿ ಕ್ಯೂಬಿಂಗ್ ಕಾರ್ಯ ನಡೆಸಿದ್ದರು. ಅಪಘಾತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಕ್ಕಳಿಗಾಗಿ ಆಹಾರ ಪೊಟ್ಟಣ, ನೀರನ್ನು ಹೆಲಿಕಾಪ್ಟರ್ ಮೂಲಕ ಪೊಲೀಸರು ಒದಗಿಸಿದ್ದರು. ಅಮೆಜಾನ್ ಕಾಡುಗಳಲ್ಲಿ ಭಯಾನಕ ಕಾಡು ಪ್ರಾಣಿಗಳಿದ್ದರೂ ನಾಲ್ಕು ಮಕ್ಕಳು ಬದುಕಿರುವುದು ಪವಾಡವೇ ಸರಿ.