ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 10 ಸಾವಿರ ವರ್ಷಗಳಷ್ಟು ಹಳೆಯದಾದ ತ್ರಿಶೂಲ ಹಾಗೂ 3 ಸಾವಿರ ವರ್ಷಗಳಷ್ಟು ಹಳೆಯದಾದ ವಜ್ರಾಯುಧವನ್ನು ಪ್ರದರ್ಶನ ಮಾಡಲಾಯಿತು. ಉದ್ಯಮಿ ಹಾಗೂ ಸಂಶೋಧಕರಾದ ಸೈಯದ್ ಶಮೀರ್ ಹುಸೇನ್ ರವರು ಫಿಲಿಪೈನ್ಸ್ ದೇಶದಲ್ಲಿ ಗಣಿಗಾರಿಕೆ ಮಾಡುತ್ತಿದ್ದಾಗ ತ್ರಿಶೂಲ ಹಾಗೂ ವಜ್ರಾಯುಧ ದೊರೆತಿವೆ. ಭಾರತೀಯ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿ ಇವುಗಳನ್ನು ದಾಖಲಿಸಲಾಗಿದೆ ಎಂದು ಸೈಯದ್ ಶಮೀರ್ ಹುಸೇನ್ ರವರು ಮಾಹಿತಿ ನೀಡಿದರು.