ಬೆಂಗಳೂರು, ಮೇ 22, 2026

ಕಾಂಗ್ರೆಸ್ ಪಕ್ಷವು ಪಂಚ ಗ್ಯಾರಂಟಿಗಳ ಭರವಸೆಯೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿತು, ಅದರಲ್ಲಿ "ಗೃಹಲಕ್ಷ್ಮಿ" ಯೋಜನೆಯೇ ಅತ್ಯಂತ ಪ್ರಮುಖ ಮುಕುಟ ಮಣಿಯಾಗಿತ್ತು. ಭಾರಿ ರಾಜಕೀಯ ಪ್ರಚಾರದೊಂದಿಗೆ ಆರಂಭವಾದ ಈ ಯೋಜನೆಯು ರಾಜ್ಯದ 1.28 ಕೋಟಿಗೂ ಅಧಿಕ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ನೇರವಾಗಿ ಪ್ರತಿ ತಿಂಗಳು ₹2,000 ಆರ್ಥಿಕ ಭದ್ರತೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಈ ರಾಜ್ಯದ ಬಡ ಮಹಿಳೆಯರ ಹಕ್ಕಿನ ಹಣಕ್ಕೆ ಕನ್ನ ಹಾಕಿ, ಇಡೀ ವ್ಯವಸ್ಥೆಯನ್ನು ವಂಚಿಸಿದೆ ಮತ್ತು ರಾಜ್ಯದ ಜನತೆಗೆ ಹಾಗೂ ಪ್ರಾಮಾಣಿಕ ತೆರಿಗೆದಾರರ ಹಣಕ್ಕೆ ಮಹಾ ದ್ರೋಹ ಎಸಗಿದೆ ಎಂಬುದಕ್ಕೆ ನಮ್ಮ ಮುಂದೆ ಲಭ್ಯವಿರುವ ಅಧಿಕೃತ ದಾಖಲೆಗಳೇ ಸಾಕ್ಷಿ.

ಇವತ್ತು ನಾನು ನಿಮ್ಮ ಮುಂದೆ ನೇರವಾಗಿ ಒಂದು ಗಂಭೀರವಾದ ಪ್ರಶ್ನೆಯನ್ನು ಇಡಲು ಬಯಸುತ್ತೇನೆ, ರಾಜ್ಯದ ಬಡ ತಾಯಂದಿರ ಹಕ್ಕಿನ 5000 ಕೋಟಿ ರೂಪಾಯಿ ಹಣ ಎಲ್ಲಿದೆ? ಇದು ಕೇವಲ ತಾಂತ್ರಿಕ ಲೋಪವಲ್ಲ, ಇಡೀ ರಾಜ್ಯದ ಇತಿಹಾಸದಲ್ಲೇ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ನಡೆದ ಅತ್ಯಂತ ದೊಡ್ಡ ಸಾಂಸ್ಥಿಕ ಹಗರಣವಾಗಿದೆ. ನಮ್ಮ ನೇರ ಪ್ರಶ್ನೆ ಇಷ್ಟೇ, ಈ ಘಟನೆ ನಡೆದು ಇಂದಿಗೆ ಒಂದು ವರ್ಷಕ್ಕೂ ಅಧಿಕ ಕಾಲ ಕಳೆದಿದ್ದರೂ, ಸರ್ಕಾರ ಇಂದಿಗೂ ಈ 5000 ಕೋಟಿ ರೂಪಾಯಿ ಎಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿಲ್ಲ. ಬಜೆಟ್‌ನಲ್ಲಿ ಹಣವಿದ್ದರೂ ಅದನ್ನು ಫಲಾನುಭವಿಗಳಿಗೆ ತಲುಪಿಸದೆ ಲ್ಯಾಪ್ಸ್ ಮಾಡಿ, ಆ 5000 ಕೋಟಿ ತೆರಿಗೆದಾರರ ಹಣವನ್ನು ಸರ್ಕಾರ ಎಲ್ಲಿಗೆ ಡೈವರ್ಟ್ ಮಾಡಿದೆ? ಯಾವ ರಾಜಕೀಯ ಲಾಭಕ್ಕೆ ಅಥವಾ ಚುನಾವಣಾ ಫಂಡಿಂಗ್‌ ಬಳಸಿಕೊಂಡಿದೆ? ಈ ಗಂಭೀರ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳ ನೇರ ಅಧೀನದಲ್ಲಿರುವ ಆರ್ಥಿಕ ಇಲಾಖೆ ಇಂದಿಗೂ ಮೌನ ವಹಿಸಿದೆ.

ಯೋಜನೆ ಘೋಷಣೆ ಮತ್ತು ಆರಂಭಿಕ ಸರ್ಕಾರಿ ಆದೇಶಗಳು (Dates & Orders)

20.05.2023 (ಅನುಮೋದನೆ ಆದೇಶ): ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನಕ್ಕೆ ಸಚಿವ ಸಂಪುಟದ ಒಪ್ಪಿಗೆ ನೀಡಿ ಪ್ರಕ್ರಿಯೆ ಆರಂಭಿಸಿತು. (ಆದೇಶ ಸಂಖ್ಯೆ: MME 70 SWW 2023).

06.06.2023 (ಅಧಿಕೃತ ಜಾರಿ ಆದೇಶ): ರಾಜ್ಯದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ₹2,000/- ಆರ್ಥಿಕ ನೆರವು ನೀಡುವ ನಿಯಮಾವಳಿಗಳನ್ನು ಪ್ರಕಟಿಸಿ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು (ಆದೇಶ ಸಂಖ್ಯೆ: MME 70 MMA 2023)

ಲೆಕ್ಕ ಕೊಡಿ ಸಿದ್ಧರಾಮಣ್ಣ! - ಬಜೆಟ್‌ನಲ್ಲಿ ₹28,608.40 Crores ಕಣ್ಣೆದುರೇ ಇದ್ದರೂ, ಆರ್ಥಿಕ ವರ್ಷದ ಕೊನೆಯಲ್ಲಿ ಬಡ ಮಹಿಳೆಯರ ಹೊಟ್ಟೆಗೆ ಹೊಡೆದು ಲ್ಯಾಪ್ಸ್ ಮಾಡಲಾದ ಆ $5,000 Crores ಇವತ್ತು ಎಲ್ಲಿದೆ? ಯಾರ ಜೇಬಿಗೆ ಹೋಗಿದೆ?

ಒಂದು ವರ್ಷದ ಮೌನ! – ಈ ಮಹಾ ವಂಚನೆ ನಡೆದು ಇಂದಿಗೆ 1 ವರ್ಷಕ್ಕೂ ಅಧಿಕ ಕಾಲ ಕಳೆದಿದೆ. ಆದರೂ ಮುಖ್ಯಮಂತ್ರಿಗಳ ನೇರ ಅಧೀನದಲ್ಲಿರುವ ಆರ್ಥಿಕ ಇಲಾಖೆ ಇಂದಿಗೂ ಈ 5000 crore ಹಣದ ಲೆಕ್ಕ ಕೇಳಿದರೆ ಮೌನಕ್ಕೆ ಶರಣಾಗಿದೆ ಯಾಕೆ?

ತೆರಿಗೆದಾರರ ಹಣಕ್ಕೆ ಕನ್ನ! - ಬಡ ಮಹಿಳೆಯರಿಗೆ ತಲುಪಬೇಕಿದ್ದ ಈ 5000 crore

ತೆರಿಗೆದಾರರ ಹಣವನ್ನು ಸರ್ಕಾರ ಎಲ್ಲಿಗೆ ಡೈವರ್ಟ್ ಮಾಡಿದೆ? ಯಾವ ರಾಜಕೀಯ ಲಾಭಕ್ಕೆ ಅಥವಾ ಚುನಾವಣಾ ಫಂಡಿಂಗ್‌ಗೆ ಈ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ?

ರಾಜ್ಯದ ತಾಯಂದಿರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡ ಈ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ನೇರ ಸವಾಲು, ಬಡವರ ಹಕ್ಕಿನ ಆ 5000 crore ಹಣದ ಪೈಸೆ ಪೈಸೆ ಲೆಕ್ಕ ಸಿಗುವವರೆಗೂ ಮತ್ತು ತಾಯಂದಿರ ಖಾತೆಗೆ ಬಾಕಿ ಹಣ ಜಮೆಯಾಗುವವರೆಗೂ ನಮ್ಮ ರಾಜಕೀಯ ಹೋರಾಟ ನಿಲ್ಲುವುದಿಲ್ಲ! ಎಂದು ಎಚ್ಚರಿಕೆ ನೀಡಿದರು.