ಬೆಂಗಳೂರು, ಏಪ್ರಿಲ್ 27, 2026

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ' ವತಿಯಿಂದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 

'ಸಮಾಜದಲ್ಲಿ ವಚನ ಗಳನ್ನು ಅಳವಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ಇದಕ್ಕೆ ಕಾನೂನಿನ ಬಲ ಬೇಕು' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

'ವಚನ, ಭಗವದ್ಗೀತೆ, ಉಪನಿಷತ್ ಗಳಿಗೆ ಕಾನೂನಿನ ಬಲ ದೊರೆತು, ಅಳವಡಿಕೆ ಕಡ್ಡಾಯವಾದರೆ ಸಮಾಜ ದಲ್ಲಿ ಬದಲಾವಣೆ ಆಗಲು ಸಾಧ್ಯ. ಎಲ್ಲರೂ ಒಪ್ಪಿರುವಂತಹದ್ದನ್ನು ಮಾತ್ರ ಕಡ್ಡಾಯಮಾಡಬೇಕು' ಎಂದರು.

'ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉನ್ನತ ಸ್ಥಾನದಲ್ಲಿರುವ ಎಲ್ಲರೂ ಮಾತನಾಡು ತ್ತಾರೆ. ಅವುಗಳನ್ನು ಬೇರೆಯವರು ಅಳವಡಿಸಿಕೊಳ್ಳಬೇಕು ಎಂದು ಬಯಸು ತಾರೆಯೇ ಹೊರತು, ತಾವು ಅದನ್ನು ಅಳವಡಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಕಡ್ಡಾಯಗೊಳಿಸದ ಹೊರತು ಯಾವುದನ್ನೂ ಅಳವಡಿಸಿಕೊಳ್ಳುವು-ದಿಲ್ಲ. ಹೀಗಾಗಿ, ಅದಕ್ಕೆ ಕಾನೂನು ಬಲ ಅಗತ್ಯ' ಎಂದು ಅಭಿಪ್ರಾಯಪಟ್ಟರು.

'ಗುರುರಾಜ ಕರಜಗಿ ಅವರು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ ಎಂದು ಹೇಳಿದರು. 

'ಇಂದು ಎಲ್ಲ ಕ್ಷೇತ್ರಗಳಲ್ಲೂ ಅಧಃಪತನ ಕಾಣುತ್ತಿದ್ದೇವೆ. ವ್ಯವಸ್ಥೆಯ ಕೆಡಕಿನ ಬಗ್ಗೆ ವಿವೇಕಶಾಲಿಗಳು ಸಿನಿಕರಾಗುತ್ತಿದ್ದಾರೆ. ಜನಪರ ಚಳವಳಿಗಳು ಕ್ಷೀಣವಾಗುತ್ತಿವೆ. ಹಾಗಾಗಿ, ಇಂದು ನಮಗೆ ಅಲ್ಲಮನ ತಾತ್ವಿಕತೆ, ಬಸವಣ್ಣನ ಕ್ರಿಯಾಶೀಲತೆ, ಅಂಬಿಗರ ಚೌಡಯ್ಯನ ಆಕ್ರೋಶ ಬೇಕಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಗುರುರಾಜ ಕರಜಗಿ ಸೇರಿದಂತೆ ಅನೇಕ ಶರಣರ ಮಾತುಗಳನ್ನು ಕೇಳಲಾದರೂ ಬರಬೇಕು ಎಂದಿದ್ದೆ. ಆದರೆ ನನ್ನ ಆರೋಗ್ಯ ವ್ಯತ್ಯಯದಿಂದ ಬರಲಾಗುತ್ತಿಲ್ಲ' ಎಂದು ಎಚ್.ಡಿ. ದೇವೇಗೌಡರು ಸಂದೇಶದಲ್ಲಿ ತಿಳಿಸಿದ್ದರು.

ಬಸವಶ್ರೀ ಪ್ರಶಸ್ತಿ ಸ್ವೀಕರಿಸಲು ದೇವೇಗೌಡ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅವರ ಸಂದೇಶವನ್ನು ಬಸವ ವೇದಿಕೆ ಉಪಾಧ್ಯಕ್ಷ ಎಸ್. ಷಡಕ್ಷರಿ ವಾಚಿಸಿದರು.

ಅಮೆರಿಕದಲ್ಲೂ ಬಸವಜಯಂತಿ ನಡೆಯುತ್ತಿದೆ. ಪುತ್ಥಳಿ ಸ್ಥಾಪನೆ ಮಾಡಿ, ಬಸವ ಜಯಂತಿಯನ್ನು ಬಸವ ದಿನ ಎಂದು ಆಚರಿಸಲಾಗುತ್ತಿದೆ. ಬಸವಣ್ಣ ದೇಶ-ವಿದೇಶಗಳಲ್ಲೂ ಪ್ರಸ್ತುತ ಎಂದು ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹೇಳಿದರು. 

ಮೌಲ್ಯಗಳೊಂದಿಗೆ ಬೋಧನೆ ಮಾಡಿ. ಯಾರನ್ನು ಮುಟ್ಟಬೇಕೋ ಅವರಿಗೆ ತಲುಪವವರೆಗೂ ಪ್ರಯತ್ನಪಡುತ್ತಾರೆ. ಅವರದ್ದು ದಣಿವಿಲ್ಲದ ಕೆಲಸ' ಎಂದು ಹೇಳಿದರು.

ಕೇಂದ್ರದ ಜಲಶಕ್ತಿ ಮತ್ತು ರೈಲ್ವೆಯ ರಾಜ್ಯ ಸಚಿವ ವಿ. ಸೋಮಣ್ಣ, 'ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ದೆಹಲಿಯಲ್ಲಿ 2027ರಲ್ಲಿ ಆಚರಿಸಲಾ-ಗುತ್ತದೆ. ದೇಶ-ವಿದೇಶದಲ್ಲಿ ಬಸವಣ್ಣ-ನವರ ವಚನ, ತತ್ವಗಳನ್ನು ಪಸರಿಸುವ

ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ' ಎಂದರು.

ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ, 'ಹುಟ್ಟು ಸಾವಿನ ನಡುವೆ ಸಮಯ ಕಡಿಮೆ ಇರುತ್ತದೆ. ಈ ಸಮಯದಲ್ಲಿ ನಾವು ಮೊದಲು ವಿಕಾಸ ವಾಗಬೇಕು. ನಿಜವಾದ ಬಸವ ತತ್ವಗಳನ್ನು ಅಳವಡಿಸಿಕೊಳ್ಳುವುದು ಅಸಾಧ್ಯ. ಆದರೆ ಸಾಧನೆ ಬಿಡಬಾರದು. ಬಸವಣ್ಣನನ್ನು 900 ವರ್ಷಗಳಿಂದಲೂ ಅಪ್ರಸ್ತುತ ಮಾಡಲು ಪ್ರಯತ್ನಿಸಲಾಗುತ್ತಿದೆ. ಆದರೆ, ಬಸವಣ್ಣ ಶಾಶ್ವತ' ಎಂದರು.

ವಚನ ಸಾಹಿತ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಕ್ಷಣ ತಜ್ಞ ಗುರುರಾಜ ಕರಜಗಿ 'ಬಸವಣ್ಣ, ಅಕ್ಕಮಹಾದೇವಿ ಹಾಗೂ ವಚನಕಾರರ ಬಗ್ಗೆ ನನ್ನ ಅಜ್ಜ ನನ್ನ ಬಾಲ್ಯದಲ್ಲೇ ಹೇಳುತ್ತಿದ್ದ. ನಾನು ಬೆಳೆದು ದೊಡ್ಡವನಾದಾಗ ಅವುಗಳ ಬಗ್ಗೆ ಅಧ್ಯಯನಕ್ಕೆ ನನ್ನ ಅಜ್ಜನೇ ಕಾರಣ' ಎಂದು ಹೇಳಿದರು.