ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಕುರುಬರ (ಕುರುಮನ್ಸ್) ಸಮಾಜ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಈ ಪತ್ರಿಕಾಗೋಷ್ಠಿಯಲ್ಲಿ ಗೌರವ ಅಧ್ಯಕ್ಷರಾದ ಕುರುಬರ ಮುಕುಡಪ್ಪ, ಹಾಗೂ ಅಧ್ಯಕ್ಷರಾದ ಕೆ.ಕಾಂತೇಶ್ ಈಶ್ವರಪ್ಪ ಅವರು ಮಾತನಾಡಿದರು.

ಕೇಂದ್ರ ಕುರುಬ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು 'ಕರ್ನಾಟಕ ಕುರುಬರ (ಕುರುಮನ್ಸ್) ಸಮಾಜ ಸಂಘ'ದ ಪದಾಧಿಕಾರಿಗಳು ಒತ್ತಾಯಿಸಿದರು. 

ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಮಾಜಿ ಸಂಸದ ಉಗ್ರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಉದ್ದೇಶಿಸಿ ಕುರುಬರಿಗೆ ಎಸ್.ಟಿ. ಶಿಪಾರಸ್ಸು ಮಾಡಿ, ವಾಲ್ಮೀಕಿ ಜನಾಂಗದ ತಟ್ಟೆಗೆ ಕೈ ಹಾಕಿ ಅನ್ನ ಕಿತ್ತುಕೊಳ್ಳಬೇಡಿ ಎಂದ ಮಾತಿಗೆ ಸಿದ್ದರಾಮಯ್ಯನವರು ಕಟು ಸತ್ಯವಾದ ಮಾತನ್ನು ಹೇಳಿದ್ದಾರೆ. ಇಡೀ ರಾಜ್ಯದ ಕುರುಬರನ್ನು ಎಸ್.ಟಿ.ಗೆ ಸೇರಿಸಲು ಹೋರಾಡಿದ್ದು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಅವರ ಪರಿಶ್ರಮ, ಹೋರಾಟದಿಂದ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿಯವರು ಇಡೀ ರಾಜ್ಯಕ್ಕೆ ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಇಡೀ ರಾಜ್ಯದ ಕುರುಬರಿಗೆ ಎಸ್.ಟಿ.ಗೆ ಶಿಫಾರಸ್ಸು ಮಾಡಿದ್ದು ನಾನಲ್ಲ. ನಾನು ಕೇವಲ ಮೂರೇ-ಮೂರು ಜಿಲ್ಲೆಯ ಕುರುಬರಿಗೆ ಎಸ್.ಟಿ. ಶಿಫಾರಸ್ಸು ಮಾಡಿದ್ದೇನೆ. ಅಲ್ಲದೇ ಇಡೀ ರಾಜ್ಯದ ಕುರುಬರನ್ನು ಎಸ್.ಟಿ.ಗೆ ಸೇರಿಸುವ ಅಧಿಕಾರ ಕೇಂದ್ರ ಸರ್ಕಾರದ್ದು, ರಾಜ್ಯ ಸರ್ಕಾರದ್ದಲ್ಲ ಎಂದು ಸ್ಪಷ್ಟವಾಗಿ ಸಭೆಗೆ ತಿಳಿಸಿದ್ದಾರೆ.

ಈ ಬಗ್ಗೆ ಕೆಲವು ಮಾಹಿತಿ, ಐತಿಹಾಸಿಕ ಹಿನ್ನೆಲೆ ಘಟನೆಗಳನ್ನು ಇಡೀ ರಾಜ್ಯದ ಕುರುಬರನ್ನ ಎಸ್.ಟಿ. (ಪರಿಶಿಷ್ಟ ಪಂಗಡಕ್ಕೆ) ಸೇರಲು ಇರುವ ಅರ್ಹತೆ ಮಾನದಂಡಗಳನ್ನು ಕೆಳಗೆ ನೀಡಿರುತ್ತೇವೆ.

Kurubas are ab-original tribes of South India ಎಂದು ಅನೇಕ ಸಾಕ್ಷ್ಯಾಧಾರಗಳು, ಶಾಸನಗಳು, ಗೆಜೆಟಿಯರ್‌ಗಳು ಕ್ರಿ.ಶ.1856 ರಿಂದ ಕ್ರಿ.ಶ.1863ರಲ್ಲಿ ಭಾರತ ದೇಶದ ಮೂಲ ನಿವಾಸಿಗಳು ಮತ್ತು ಜನಾಂಗದ ಬಗ್ಗೆ ಛಾಯಾಚಿತ್ರ ಸಮೇತ 1868ರಲ್ಲಿ "ಪೀಪಲ್ ಆಫ್ ಇಂಡಿಯಾ" ಎಂಬ ಪುಸ್ತಕವನ್ನು ಬ್ರಿಟೀಷ್ ಸರ್ಕಾರ ಪ್ರಕಟಿಸಿತ್ತು. ಈ ಗ್ರಂಥದ ಪ್ರಕಾರ ದಕ್ಷಿಣ ಭಾರತದ ಮೂಲ ನಿವಾಸಿಗಳಾದ ಕುರುಬರನ್ನು ಕನ್ನಡದಲ್ಲಿ ಕುರುಬ, ತಮಿಳಿನಲ್ಲಿ ಕುರುಂಬನ್, ಮಲೆಯಾಳ ಮತ್ತು ತುಳುವಿನಲ್ಲಿ ಕುರುಮನ್ ಎಂದು ಕರೆಯುತ್ತಾರೆ. ಈ ಮೂಲ ನಿವಾಸಿಗಳು ಬಲಿಷ್ಠರಾಗಿ ದಕ್ಷಿಣ ಭಾರತದಲ್ಲಿ ಪಲ್ಲವ ಸಾಮ್ರಾಜ್ಯವನ್ನು ಕಟ್ಟಿ ಆಳಿದರು. ಪಲ್ಲವರು ತಮ್ಮದೇ ಆದ ಕುರುಂಬ ನಾಣ್ಯಗಳನ್ನು ಹೊಂದಿದ್ದರು. ಮೊಹೆಂಜೋದಾರೋ, ಹರಪ್ಪದಲ್ಲಿ ಕುರಿ ಚಿತ್ರವಿರುವ ಶಾಸನ. 1922ರಲ್ಲಿ ಫಾದರ್ ಹೆರಾಸ್ ನಡೆಸಿದ ಸಂಶೋಧನಾ ಉತ್ಪನನದಲ್ಲಿ ದೊರೆತಿದ್ದು, 'ಕಳ್‌ ಅರು'(ಹಾಲು ಉತ್ಪಾದಕರು) ಇದ್ದನಾಡು ಕಳ್ ಅರನಾಡು ಕೊನೆಗೆ ಕನ್ನರನಾಡು, ಆಮೇಲೆ ಕನ್ನಡ ನಾಡು ಆಯಿತು.

12 ರಾಶಿಗಳಲ್ಲಿ ಮೊದಲನೇ ರಾಶಿ ಮೇಷ ರಾಶಿ, ಅಂದರೆ ಟಗರು, ಸೂರ್ಯನಾತ್ ಕಾಮತ್ ಸಂಪಾದಕೀಯದಲ್ಲಿ 1961ರಲ್ಲಿ ಹೊರತಂದ State Gazetter ನಲ್ಲಿ ಕರ್ನಾಟಕದಲ್ಲಿರುವ ಪ್ರಮುಖ ಗುಡ್ಡಗಾಡು, ಬುಡಕಟ್ಟು ಭಾಷೆಗಳಲ್ಲಿ ಕುರುಂಬ/ಕುರುಬ ಎನ್ನುವ ಭಾಷೆ ಆಡುವವರು ಈಗಲೂ 4063 ಜನರಿದ್ದಾರೆ ಎಂದು ದಾಖಲಾಗಿದೆ.