ಬೆಂಗಳೂರು, ಏಪ್ರಿಲ್ 5, 2025

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಸಮುದ್ಯತಾ ಸಾಂಸ್ಕೃತಿಕ ಪ್ರತಿಷ್ಠಾನ' ವತಿಯಿಂದ "ಪ್ರವೀಣ್ ಪ್ರದೀಪ್ ಕಾನ್ಸರ್ಟ್" ಸಂಗೀತ ಕಾರ್ಯಕ್ರಮ ನಡೆಯಿತು. 

ಸಮುದ್ಯತಾ ಸಾಂಸ್ಕೃತಿಕ ಪ್ರತಿಷ್ಠಾನ' ಪ್ರಮುಖರು ಹಾಗೂ ಗಾಯಕರಾದ ಪ್ರದೀಪ್ ಹಾಗೂ ಪ್ರವೀಣ್ ಅವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.  

ಗಾಯಕರಾದ ಪ್ರದೀಪ್ ಹಾಗೂ ಪ್ರವೀಣ್ ಅವರಿಗೆ ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ಅವರು ಸಂಗೀತ ಕಾರ್ಯಕ್ರಮದಲ್ಲಿ ಜತೆಯಾದರು. 

  ಸಂಗೀತ ಪ್ರೇಮಿಗಳನ್ನು ಅತ್ಯಂತ ಮಂತ್ರಮುಗ್ಧಗೊಳಿಸುವುದು ಭಾವಗೀತೆಗಳ ಪ್ರಪಂಚ! ಭಾವ-ಗಾನ-ಯಾನದ ಪರಂಪರೆಯನ್ನು ಮುಂದುವರಿಸುತ್ತಿರುವ ಅನೇಕ ಕೊರಳುಗಳು ಹೊಸತೇ ಸ್ವಧರ್ಮದ ಹೊಳಹುಗಳೊಂದಿಗೆ ಭಾವಗೀತೆಗಳನ್ನು ಪ್ರಸ್ತುತ ಪಡಿಸುತ್ತ, ಈ ಸಂಗೀತ ಪ್ರಕಾರವನ್ನು ನಾವಿನ್ಯತೆಯೊಂದಿಗೆ ಶ್ರಾವ್ಯವಾಗಿಸುತ್ತಿದ್ದಾರೆ, 

ಕನ್ನಡದ ವಿವಿಧ ಕವಿಗಳ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸಂಗೀತ ರಸಿಕರ ಮನ ತಣಿಸಿದರು.

ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳ ಕಾಲ ಎಲ್ಲ ದಿಗ್ಗಜರೊಂದಿಗೆ ತಮ್ಮ ಕೀಬೋರ್ಡ್ ವಾದನ ಮತ್ತು ಸಂಗೀತ ನಿರ್ದೇಶನಡಲ್ಲಿ ತೊಡಗಿಸಿಕೊಂಡಿರುವ ನಗರ ಕೃಷ್ಣ ಉಡುಪ ಮತ್ತು ಹದಿಮೂರು ಕೈಗಳ ವಾದ್ಯ ಸಮೂಹ, ಹತ್ತು ವಯಲಿನ್ ಗಳ ಜಂಟಿ ಝಂಕಾರ, ಈ ಕಂಠಗಳ ಜೊತೆ ತುರುಸಿನ ಸ್ಪರ್ಧೆಗಿಳಿಯಿತು. ಕಾವ್ಯದ ಲಯೋಪಾದಿಯಲ್ಲಿ ಕೇಳುಗರನ್ನು ಭಾವಲೋಕದಲ್ಲಿ ಮುಳುಗಿಸುವ, ರಾಗ-ಗೀತೆಗಳಲ್ಲಿ ಇನ್ನಷ್ಟು ಅರಿವು, ಒಲುಮೆ ಹೆಚ್ಚಿಸುವ ರಾಘವೇಂದ್ರ ಕಾಂಚನ್ ನಿರೂಪಣಾ ಸಾಂಗತ್ಯ!