ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಸಮುದ್ಯತಾ ಸಾಂಸ್ಕೃತಿಕ ಪ್ರತಿಷ್ಠಾನ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಹಾಗೂ 'ಸಮುದ್ಯತಾ ಸಾಂಸ್ಕೃತಿಕ ಪ್ರತಿಷ್ಠಾನ' ಸದಸ್ಯರಾದ ಪ್ರದೀಪ್ ಹಾಗೂ ಪ್ರವೀಣ್ ಅವರು ಮಾತನಾಡಿದರು. 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 5ರಂದು "ಪ್ರವೀಣ್ ಪ್ರದೀಪ್ ಕಾನ್ಸರ್ಟ್" ನಡೆಯಲಿದೆ ಎಂದು ತಿಳಿಸಿದರು

  ಸಂಗೀತ ಪ್ರೇಮಿಗಳನ್ನು ಅತ್ಯಂತ ಮಂತ್ರಮುಗ್ಧಗೊಳಿಸುವುದು ಭಾವಗೀತೆಗಳ ಪ್ರಪಂಚ! ಭಾವ-ಗಾನ-ಯಾನದ ಪರಂಪರೆಯನ್ನು ಮುಂದುವರಿಸುತ್ತಿರುವ ಅನೇಕ ಕೊರಳುಗಳು ಹೊಸತೇ ಸ್ವಧರ್ಮದ ಹೊಳಹುಗಳೊಂದಿಗೆ ಭಾವಗೀತೆಗಳನ್ನು ಪ್ರಸ್ತುತ ಪಡಿಸುತ್ತ, ಈ ಸಂಗೀತ ಪ್ರಕಾರವನ್ನು ನಾವಿನ್ಯತೆಯೊಂದಿಗೆ ಶ್ರಾವ್ಯವಾಗಿಸುತ್ತಿದ್ದಾರೆ, ಜೀವಂತವಾಗಿರಿಸುತ್ತಿದ್ದಾರೆ. ಇಂತಹುದೊಂದು ವಿಶಿಷ್ಟ ಪ್ರಯೋಗಗಳ ಆಗರ ಪ್ರವೀಣ್ ಪ್ರದೀಪ್ ಜೋಡಿಯ ಸಂಗೀತ

ಸಮುದ್ಯತಾ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇದೇ ಏಪ್ರಿಲ್ 5, ಸಂಜೆ 5.00ಗಂಟೆಗೆ “ಪ್ರವೀಣ್ ಪ್ರದೀಪ್ ಕಾನ್ಸರ್ಟ್ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ವಿನೂತನ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಭಾವಗೀತೆಗಳನ್ನು ರೂಢಿಗಿಂತ ಭಿನ್ನ, ನವ-ನವೀನ ಪ್ರಸ್ತುತಿ ನೀಡುವ ಭರವಸೆಯ ಈ

ಜೋಡಿಯೊಂದಿಗೆ, ಎಂ.ಡಿ ಪಲ್ಲವಿ ದನಿ ಬೆರಸಲಿದ್ದಾರೆ.

ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳ ಕಾಲ ಎಲ್ಲ ದಿಗ್ಗಜರೊಂದಿಗೆ ತಮ್ಮ ಕೀಬೋರ್ಡ್ ವಾದನ ಮತ್ತು ಸಂಗೀತ ನಿರ್ದೇಶನಡಲ್ಲಿ ತೊಡಗಿಸಿಕೊಂಡಿರುವ ನಗರ ಕೃಷ್ಣ ಉಡುಪ ಮತ್ತು ಹದಿಮೂರು ಕೈಗಳ ವಾದ್ಯ ಸಮೂಹ, ಹತ್ತು ವಯಲಿನ್ ಗಳ ಜಂಟಿ ಝಂಕಾರ, ಈ ಕಂಠಗಳ ಜೊತೆ ತುರುಸಿನ ಸ್ಪರ್ಧೆಗಿಳಿಯಲಿವೆ. ಕಾವ್ಯದ ಲಯೋಪಾದಿಯಲ್ಲಿ ಕೇಳುಗರನ್ನು ಭಾವಲೋಕದಲ್ಲಿ ಮುಳುಗಿಸುವ, ರಾಗ-ಗೀತೆಗಳಲ್ಲಿ ಇನ್ನಷ್ಟು ಅರಿವು, ಒಲುಮೆ ಹೆಚ್ಚಿಸುವ ರಾಘವೇಂದ್ರ ಕಾಂಚನ್ ನಿರೂಪಣಾ ಸಾಂಗತ್ಯ!

ಜೊತೆಗೆ, ಸಂಗೀತ ಕ್ಷೇತ್ರದ ಹಲವು ಕಲಾವಿದರು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವೆಲ್ಲಾ ಹದವಾಗಿ ಮೇಲೈಸಿ ಬೆಂಗಳೂರು ಕಲಾಕ್ಷೇತ್ರದ ತುಂಬೆಲ್ಲಾ ತುಂಬು ಮಾಧುರ್ಯ ಮೊರೆಯುವುದನ್ನು ಅನುಭವಿಸುವ ಅವಕಾಶ. ಈ ಮಹತ್ತರ ಪ್ರಯತ್ನ ಇದೀಗ ನಿಮ್ಮ ಆಸ್ವಾದನೆಗೆ.

ಈ ಕಾರ್ಯಕ್ರಮಕ್ಕೆ ತಮ್ಮನ್ನು ಹೃತ್ತೂರ್ವಕವಾಗಿ ಸ್ವಾಗತಿಸುತ್ತೇವೆ. ಹಾಗೆಯೇ, ತಮ್ಮ ಪತ್ರಿಕೆ/ ವಾಹಿನಿಗಳಲ್ಲಿ ಇದರ ಬಗ್ಗೆ ಲೇಖನಗಳನ್ನು ಹಾಗೂ ನಗರದ ಕಾರ್ಯಕ್ರಮಗಳ ಬಗ್ಗೆ, ಮಾಹಿತಿ ನೀಡುವ ಸಂಕಲನಗಳಲ್ಲಿ ಪ್ರಕಟಿಸಬೇಕಾಗಿ ಕೋರುತ್ತೇವೆ. ಕಾರ್ಯಕ್ರಮದ ವಿವರಗಳನ್ನು ಈ ಪತ್ರದೊಂದಿಗೆ ಲಗತಿಸಿರುತ್ತೇವೆ.