ಬೆಂಗಳೂರು, ಮಾರ್ಚ್ 28, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏಪ್ರಿಲ್ 23ರಂದು "ರಾಜ್ಯಮಟ್ಟದ ವಿಶ್ವಕರ್ಮ ಜನಜಾಗೃತಿ ಬೃಹತ್ ಸಮಾವೇಶ" ನಡೆಯಲಿದೆ ಎಂದು ತಿಳಿಸಿದರು.
ಹಲವು ವರ್ಷಗಳ ಕಾಲ ರಾಜ್ಯದಲ್ಲಿ ವಿಶ್ವಕರ್ಮ ಸಮಾಜವು ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಿರಲಿಲ್ಲ. ಸಮಾಜವನ್ನು ಒಂದು ಸಂಘಟನಾತ್ಮಕ ಶಕ್ತಿಯನ್ನಾಗಿಸಿ ಹೋರಾಟ ನಡೆಸಿದ ಕೀರ್ತಿ ವಿಶ್ವಕರ್ಮ ಜನಾಂಗದ ಹಲವು ನಾಯಕರಿಗೆ ಸಲ್ಲಬೇಕು. ಸಮಾಜವನ್ನು ಸಂಘಟಿಸುವ ಮತ್ತು ಒಗ್ಗೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸಮಾಜ ಏಳೆಗಾಗಿ ರಾಜ್ಯ ವಿಶ್ವಕರ್ಮ ಸಮಾಜದ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಅವಿರತವಾಗಿ ಸಮಾಜದ ಹಲವಾರು ಪ್ರಮುಖರು ಶ್ರಮಿಸಿದ್ದಾರೆ.
ರಾಜ್ಯದಲ್ಲಿನ ಹಿಂದುಳಿದ ವರ್ಗದಲ್ಲಿರುವ ಅತಿ ಹೆಚ್ಚು ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಸಮಾಜ ವಿಶ್ವಕರ್ಮ ಸಮಾಜ ಆಗಿದೆ ಸಮಾಜದಲ್ಲಿ ನಮ್ಮ ಸಮುದಾಯವು ಪ್ರಬಲವಾಗಿದ್ದು, ನಮ್ಮ ಶಕ್ತಿ ಏನು ಎಂಬುದನ್ನು ಸರ್ಕಾರಕ್ಕೆ ರಾಜಕೀಯ ಪಕ್ಷಗಳಿಗೆ ಹಾಗೂ ರಾಜಕಾರಣಿಗಳಿಗೆ ಮನದಟ್ಟು ಮಾಡಿಕೊಡ ಬೇಕಾಗಿದೆ. ಸಮುದಾಯಕ್ಕೆ ಅಗತ್ಯ ಸವಲತ್ತು ರಾಜಕೀಯ ಸ್ಥಾನಮಾನ ಸಿಗಬೇಕು. ಅಲ್ಲದೆ ಸಮಾಜದ ಬಡತನದಲ್ಲಿರುವ ಮಕ್ಕಳಿಗೆ ಶಿಕ್ಷಣ ಸಿಗಬೇಕು ಈ ನಿಟ್ಟನಲ್ಲಿ ಸಮುದಾಯದ ಹೋರಾಟದ ಬಗ್ಗೆ ತಿಳಿಸಿಕೊಡುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ.
ಈ ಬೃಹತ್ ಸಮಾವೇಶದಲ್ಲಿ ವಿಶ್ವಕರ್ಮ ಸಮಾಜದ ಹಾಗೂ ವಿವಿಧ ಸಮಾಜದ ಮರಾಧಿಪತಿಗಳು, ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು, ಸಚಿವರು, ಮಹೋದಯರು ಶಾಸಕರು ನಿಗಮ ಮಂಡಳಿ ಅಧ್ಯಕ್ಷರು ಕಲಾವಿದರು. ಸಾಹಿತಿಗಳು ಚಲನಚಿತ್ರ ನಟ ನಡೆಯರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು ನಾನಾ ಗುರುತಿಸಿ ಅಭಿನಂದಿಸಲಾಗುವುದು.
ಸಮಾವೇಶದಲ್ಲಿ ಸುಮಾರು ಸಹಸ್ರ ಸಮಾಜ ಬಂಧುಗಳು ವಿಶ್ವಕರ್ಮ ಬೃಹತ್ ಸಮಾವೇಶವನ್ನು ಸಾಕ್ಷಿಕರಿಸಲಿದ್ದು ಗ್ರಾಮ, ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದವ್, ವಿಶ್ವಕರ್ಮ ಸಮಾಜ ಬಾಂಧವರು ವೈದಿಕರು, ಋತ್ವಿಜಕರು, ಪ್ರರೋಷಿತರು ಪಂಟು ವಿಧ ಶಿಕ್ಷೆಗಳು ವಿಧನ್ ಮಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಿಹಿಸುವುದರ ಮೂಲಕ ಎರಕ ಶಿಲ್ಪ (ಕಂಚು), ಸ್ವರ್ಣಶಿಲ್ಪ (ಚಿನ್ನ-ಬೆಳ್ಳಿ), ಪಂಚವೃತ್ತಿಗಳಲ್ಲಿ ಅಮೋಘ ಸಾಧನೆಗೈದಿರುವ ದಿನಕರ್ಮ 5 ಪರುಷ ಸಾಧಕರಿಗೆ “ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್" "ವಿಶ್ವಕರ್ಮ ಕಲಾಸಿಂಧು" "ವಿಶ್ವಕರ್ಮ ಶಿಲ್ಪಶ್ರೀ" "ವಿಶ್ವಕರ್ಮ ಕಲಾ ಕೌಸ್ತುಭ" "ವಿಶ್ವಕರ್ಮ ಕಲಾ ಸೌರಭ" ಪ್ರಶಸ್ತಿ ಪುರಸ್ಕಾರ ನೀಡಲಾಗುವುದು ಹಾಗೂ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಕಾನೂನು, ಪ್ರತಿಭೆ, ಕ್ರೀಡೆ, ರಂಗಭೂಮಿ, ಚಲನಚಿತ್ರ ಇತರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ 5 ಮಹಿಳಾ ಸಾಧಕರಿಗೆ “ವಿಶ್ವಕರ್ಮ ಕಲಾ ಸಿಂಧು" "ವಿಶ್ವಕರ್ಮ ಸಾಹಿತ್ಯ ಸೌರಭ" "ವಿಶ್ವಕರ್ಮ ಕಲಾ ಸೌರಭ" "ವಿಶ್ವಕರ್ಮ ಕಲಾಕೌಸ್ತುಭ" "ವಿಶ್ವಕರ್ಮ ಕಲಾಶ್ರೀ" ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘವು ನಿರ್ಧರಿಸಿದೆ. ಈ ಪ್ರಶಸ್ತಿ ಪುರಸ್ಕಾರವು 5 ಪುರುಷ ಸಾಧಕರಿಗೆ ಮತ್ತು 5 ಮಹಿಳಾ ಸಾಧಕರಿಗೆ ನಗದು ಸ್ಮರಣಿಕೆ (ಫಲಕ) ನೀಡಲಾಗುವುದು.