ಬೆಂಗಳೂರು, ಮಾರ್ಚ್ 26, 2025

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ "ಕ್ರಾಂತಿಕಾರಿ ಪಾದಯಾತ್ರೆ"ಯ ಮೂಲಕ ಪ್ರತಿಭಟನೆ ನಡೆಸಲಾಯಿತು. 

ಹರಿಹರದ ಪ್ರೊ. ಬಿ. ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಬೆಂಗಳೂರಿನವರೆಗೆ "ಕ್ರಾಂತಿಕಾರಿ ಪಾದಯಾತ್ರೆ"ಯ ಮೂಲಕ ಪ್ರತಿಭಟನೆ ನಡೆಸಲಾಯಿತು. 

ಈ ಪ್ರತಿಭಟನೆಯಲ್ಲಿ ದಲಿತ ಹೋರಾಟಗಾರರಾದ ಬಿ.ಆರ್. ಮುನಿರಾಜ್, ಮುತ್ತುರಾಜ್ ಹಾಗೂ ಪೌರಕಾರ್ಮಿಕ ಸಂಘಟನೆಯ ತ್ಯಾಗರಾಜ್ ಅವರು ಭಾಗಿಯಾಗಿದ್ದರು.