ಬೆಂಗಳೂರು, ಮಾರ್ಚ್ 26, 2025

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ದಲಿತ ಸಂಘರ್ಷ ಸಮಿತಿ'ಯ ರಾಜ್ಯಾಧ್ಯಕ್ಷರಾದ ಡಾ|| ಎನ್. ಮೂರ್ತಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಪರಿಶಿಷ್ಟರ ಒಳಮೀಸಲಾತಿಗಾಗಿ ಏಪ್ರಿಲ್ 14 ರಿಂದ ರಾಜ್ಯಾದ್ಯಂತ ಜನಾಂದೋಲನ ಆಯೋಜಿಸಲಾಗಿದೆ ಎಂದು 'ಕರ್ನಾಟಕ ದಲಿತ ಸಂಘರ್ಷ ಸಮಿತಿ'ಯ ರಾಜ್ಯಾಧ್ಯಕ್ಷರಾದ ಡಾ|| ಎನ್. ಮೂರ್ತಿ ಅವರು ತಿಳಿಸಿದರು. 

ಪರಿಶಿಷ್ಟ ಜಾತಿಗಳ ಮೀಸಲಾತಿಯು ಈ ಸಮಾಜದ 101 ಜಾತಿಗಳ ಮಧ್ಯೆ ಸಮನಾಗಿ ಹಂಚಿಕೆಯಾಗಿಲ್ಲ ಹಾಗಾಗಿ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ಕಳೆದ ಮೂರುವರೆ ದಶಕಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಯುತ್ತಿದೆ.

ದಿನಾಂಕ: 01.08.2024 ರಂದು ಸುಪ್ರೀಂ ಕೋರ್ಟ್‌ ನ 7 ಜನ ನ್ಯಾಯಾಧೀಶರ ಪೀಠ ನೀಡಿದ ತೀರ್ಪಿನಂತೆ ಕೂಡಲೇ ಪರಿಶಿಷ್ಟರ ಮೀಸಲಾತಿಯ ವರ್ಗೀಕರಿಸಲು ಒತ್ತಾಯಿಸಿದೆ. ಹಾಗಾಗಿ, ದಿನಾಂಕ: 19.03.2025 ರಂದು 50 ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸಹಸ್ರಾರು ಜನ ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಭಾರಿ ಬೃಹತ್ ಸಮಾವೇಶ ನಡೆಸಲಾಯಿತು.