ಬೆಂಗಳೂರು, ಮಾರ್ಚ್ 25, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಭಾರತ ಮುಕ್ತಿ ಮೋರ್ಚಾ ಸಂಘಟನೆ'ಯ ರಾಜ್ಯ ಘಟಕದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಯಾದ ಮಾರುತಿ ಗಂಜಗಿರಿ ಅವರು ಮಾತನಾಡಿದರು.
ಕಲಬುರಗಿಯ ರಟಕಲ್ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಅಪಮಾನ ಆರೋಪ - ಕ್ರಮ ಕೈಗೊಳ್ಳದ ಜಿಲ್ಲಾ ಪಂಚಾಯತಿ ವಿರುದ್ಧ 'ಭಾರತ ಮುಕ್ತಿ ಮೋರ್ಚಾ ಸಂಘಟನೆ' ಸದಸ್ಯರಿಂದ ಖಂಡನೆ
ಕರ್ನಾಟಕ ಪಂಚಾಯತ್ ರಾಜ್ಯ ಸಚಿವರ ಸ್ವ-ಕ್ಷೇತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರವರಿಗೆ ಬಾರಿ ಅವಮಾನವಾದರು ಕ್ರಮ ಕೈಗೊಳ್ಳದ ಜಿ.ಪಂ. ಅಧಿಕಾರಿಗಳ ಹಾಗೂ ಸಚಿವರ ನಡೆ ಖಂಡಿಸಿ ಪತ್ರಿಕಾ ಗೋಷ್ಠಿ.
ಕರ್ನಾಟಕ ಪಂಚಾಯತ್ ರಾಜ್ ಸಚಿವರಾದ ಸನ್ಮಾನ್ಯ ಪ್ರಿಯಾಂಕ ಖರ್ಗೆರವರು ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ಅರಿವು ಮೂಡಿಸಬೇಕೆಂಬ ಸದುದ್ದೇಶದಿಂದ ಕರ್ನಾಟಕ ರಾಜ್ಯಾದಾದ್ಯಂತ ಸಂವಿಧಾನ ಜಾಗೃತಿ ಜಾತಾ ಕಾರ್ಯಕ್ರವನ್ನು ಹಮ್ಮಿಕೊಂಡು ಅದಕ್ಕೆ ಮೇಲುಸ್ತುವಾರಿ ಸಮಿತಿಗಳನ್ನು ರಚನೆ ಮಾಡಿ ಬಾಳ ಜಾಗರೂಕತೆಯಿಂದ ಜಾಥಾ ಕಾರ್ಯಕ್ರವನ್ನು ಯಶಸ್ವಿ ಮಾಡುವಂತೆ ಪದೇ ಪದೇ ಸಚಿವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಸಭೆಗಳನ್ನು ಮಾಡಿದರು. ಸಚಿವರ ಸ್ತ್ರಕ್ಷೇತ್ರದಲ್ಲಿ ಪ್ರಯೋಜನವಾಗಿಲ್ಲವೆನ್ನುವುದಕ್ಕೆ ಕಲಬುರಗಿ ಉಸ್ತುವಾರಿ ಮತ್ತು ಕರ್ನಾಟಕ ಪಂಚಾಯತ್ ರಾಜ್ ಸಚಿವರ ಕ್ಷೇತ್ರ ಕಾರಣವೆಂದರೆ ತಪ್ಪಾಗಲಿಕ್ಕಿಲ್ಲ ಏಕೆಂದರೆ ದಿನಾಂಕ: 08.02.2024ರಂದು ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಗೃತಿ ಜಾಥಾವು ಆಗಮಿಸಿದಾಗ ಡಾ.ಬಿ.ಆರ್. ಅಂಬೇಡ್ಕರ್ ಅನುಯಾಯಿಗಳು, ಸ್ವಾಭಿಮಾನಿಗಳು, ಬುದ್ದಿ ಜೀವಿಗಳು ವಿವಿಧ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರವಿರುವ ಪ್ಲೆಕ್ಸ್‌ಗೆ ಪೂಜೆ ಮಾಡುವಾಗ ಹರಿದ ಅಂಬೇಡ್ಕರ್ ರವರ ಭಾವಚಿತ್ರವಿರುವ ಪ್ಲೆಕ್ಸ್‌ನ್ನು ಕಂಡು ಧಿಗ್ಧಮೆಯಾಗಿ ಸಂಬಂಧಪಟ್ಟ ರಟಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ.ಮಾಹನಂದ ಗುತ್ತೆದಾರ್ ರವರಿಗೆ ಕೇಳಿದಾಗ ಈಗ ಸಮಯವಾಗಿದೆ ಹಾಗೆಯೇ ಮುಗಿಸಿ ಬೇಗ ಎನ್ನುತ್ತಿದ್ದಂತೆ ಜನರು ಈಗಲಾದರೂ ಹರಿದಿರುವ ಬಿ.ಆರ್.ಅಂಬೇಡ್ಕರವರ ಭಾವಚಿತ್ರವನ್ನು ಬದಲಾಯಿಸೋಣವೆಂದು ಪರಿಪರಿಯಾಗಿ ಕೇಳಿದರು ಪಿ.ಡಿ.ಓ. ರವರು ತಮ್ಮ ಮೊಂಡುತನವನ್ನು ಮುಂದುವರೆಸಿದಾಗ ದಿಢೀರನೆ ಅನುಯಾಯಿಗಳು ಹೋರಾಟಕ್ಕೆ ಇಳಿದಾಗ ಪಿ.ಡಿ.ಓ. ರವರು ಪರಾರಿಯಾದರು ಹೋರಾಟದ ಸ್ಥಳಕ್ಕೆ ಬಂದ ಡಿ.ವೈ.ಎಸ್.ಪಿ. ಸಂಗಮೇಶ್ ಹಿರೇಮರ್ ಮತ್ತು ಕಾಳಗಿ ತಾಲ್ಲೂಕಿನ ತಹಶೀಲ್ದಾರ್‌ರಾದ ಶ್ರೀಮತಿ. ಘಮಾವತಿ ರಾಠೋಡ್ ರವರು ಪಿ.ಡಿ.ಓ. ರವರಿಗೆ ದೂರವಾಣಿ ಕರೆಮಾಡಿದರು ಸಹಿತ ನಿರ್ಲಕ್ಷತನದ
ಮಾತನಾಡಿ ಬೇಜವಾಬ್ದಾರಿ ತೋರಿಸಿದಕ್ಕಾಗಿ ರಟಕಲ್ ಪೊಲೀಸ್ ಠಾಣೆಯಲ್ಲಿ ಪಿ.ಡಿ.ಓ. ರವರ ಮೇಲೆ ದೂರು ಪ್ರಕರಣ ದಾಖಲಾಯಿತು. ಈ ವಿಷಯವನ್ನು ಮೇಲಾಧಿಕಾರಿಗಳಿಗೆ ವರದಿ ಮಾಡುವಂತೆ ತಾ.ಪಂ. ಕಾಳಗಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ.ವಿಲಾಸ್ವರಾಜ್ ರವರಿಗೆ ದೂರು ನೀಡಿದರು ನಾನು ಅಸಹಾಯಕ ನನ್ನ ಮೇಲೆ ರಾಜಕೀಯ ಒತ್ತಡವಿದೆ ಎಂದು ತಳ್ಳಿಹಾಕಿದರು ನಂತರ ಬಂದ ಕಾಯನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಸಲಿಂಗಪ್ಪ ಡಿಗ್ಗಿ ರವರು ಜಿಲ್ಲಾ ಪಂಚಾಯಿತಿಗೆ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿ ಮಾಡಿ ತಿಂಗಳುಗಳು ಕಳೆಯುತ್ತಿದ್ದರು ಕಲಬುರಗಿ ಜಿಲ್ಲಾ ಪಂಚಾಯಿತಿ ಡಿ.ಎಸ್.-1 ಲಕ್ಷ್ಮಣ ಸಿಂಗೇರಿ ರವರು ವಿಳಂಭ ಮಾಡುತ್ತಿದ್ದಾರೆ. ಅಲ್ಲದೆ ರಟಕಲ್ ಗ್ರಾಮ ಪಂಚಾಯಿತಿ ಪಿ.ಡಿ.ಓ. ರವರು 2022-2023 ರಿಂದ 2024-2025ನೇ ಸಾಲಿನವರೆಗೆ 15ನೇ ಹಣಕಾಸು ಯೋಜನೆ ಕ್ರಿಯಾ ಯೋಜನೆಯಲ್ಲಿ ನೀರು ನಿರ್ವಹಣೆ ಹಾಗೂ ಬೀದಿ ದೀಪಗಳ ನಿರ್ವಹಣೆಗಾಗಿ ನಿಗಧಿಪಡಿಸಿದ ಮೊತ್ತ ರೂ.50,30,684/- ಗಳು ಆದರೆ, ರಟಕಲ್ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾ.ಪಂ. ಸದಸ್ಯರ ಯಾವುದೇ ಸಭೆ ಮಾಡದೆ ನಡುವಳಿ ಕ್ರಿಯಾ ಯೋಜನೆ ಇಲ್ಲದೆ ನಿಗಧಿ ಮಾಡಿರುವ ಹಣಕ್ಕಿಂತ ರೂ.17,23.703/-ಗಳನ್ನು ಖರ್ಚು ಮಾಡಿರುತ್ತಾರೆ ಅಂದರೆ ಒಟ್ಟು ರೂ.67,54,387/-ಗಳ ಅವ್ಯವಹಾರ ಮಾಡಿ ಕರ್ನಾಟಕ ಸೇವಾ ನಿಯಮಾವಳಿಗಳ 3(1)ರ ಹಾಗೂ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಪಿ.ಡಿ.ಓ. ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾ ಪಂಚಯಿತಿಗೆ ವರದಿ ನೀಡಿರುತ್ತಾರೆ. ಈ ಕತಡವನ್ನು ಉಪ ನಿರ್ದೇಶಕರಾದ ಶ್ರೀ.ಲಕ್ಷ್ಮಣ್ ಸಿಂಗೇರಿ ರವರು ಪರಿಶೀಲನೆ ಮಾಡದೆ ಉದ್ದೇಶಪೂರಕವಾಗಿ ಮುಂದೆ ತಳ್ಳಿಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರಿಕಾ ಗೋಷ್ಠಿಯ ಮೂಲಕ ಒತ್ತಾಯಿಸುತ್ತಿದ್ದೇವೆ.