ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಸಮರ್ಥಿಸುವ ವೈವಿಧ್ಯಮಯ ಸಮುದಾಯಗಳನ್ನು ಒಂದು ವೇದಿಕೆಯಡಿ ತರುವ ವಿಭಿನ್ನ ಪ್ರಯತ್ನವನ್ನು ರೋಟರಿ ಡಿಸ್ಟ್ರಿಕ್ಟ್ 3192 ಮಾಡುತ್ತಿದೆ. ಸೇವೆ ಮತ್ತು ಸಹಯೋಗದ ಮೂಲ ತತ್ವಗಳಲ್ಲಿ ಬೇರೂರಿರುವ ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನ (SAIPC) 2025. ಆರೋಗ್ಯ ಮತ್ತು ಪರಿಸರ ಸುಸ್ಥಿರತೆಯ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ಗುರಿಗಳನ್ನು ಹೊಂದಿದ್ದು, ಜಾಗತಿಕ ನಾಯಕರು. ಸಮುದಾಯಗಳನ್ನು ಒಗ್ಗೂಡಿಸುವ ಉದ್ದೇಶ ಒಳಗೊಂಡಿದೆ.
ಅಭಿಯಾನ:
'ಸಂವಾದ, ಸಹಯೋಗ ಮತ್ತು ನವೀನ ಪರಿಹಾರಗಳ ಮೂಲಕ ಶಾಂತಿ ಮತ್ತು ಸಾಮರಸ್ಯದ ಹುಡುಕಾಟದಲ್ಲಿ ದಕ್ಷಿಣ ಏಷ್ಯಾದಾದ್ಯಂತ ನಾಯಕರು ಮತ್ತು ಸಮುದಾಯಗಳನ್ನು ಒಂದುಗೂಡಿಸುವುದು. ಕಾರ್ಯಸಾಧು ತಂತ್ರಗಳ ಮೂಲಕ ಪ್ರಮುಖ ಸವಾಲುಗಳನ್ನು ಪರಿಹರಿಸುವ ಮುಖೇನ ಸಂಘರ್ಷಗಳು ಮತ್ತು ಸಾಮರಸ್ಯದ ಸಮಯದಲ್ಲಿ ಸಮುದಾಯಗಳಲ್ಲಿ ಉನ್ನತ ಮೌಲ್ಯಗಳನ್ನು ಮೂಡಿಸಬೇಕು ಎಂದು ಈ ಸಮ್ಮೇಳನವು ಆಶಿಸುತ್ತದೆ.
SAIPC-2025 ಪರಿಕಲ್ಪನೆಯು ಸಂವಾದ, ಸಹಯೋಗ ಮತ್ತು ಕಾರ್ಯಸಾಧ್ಯ ಪರಿಹಾರಗಳ ವಿಚಾರದಲ್ಲಿ ಮೂರು ನಿರ್ಣಾಯಕ ಕ್ಷೇತ್ರಗಳಲ್ಲಿ ನೀತಿ ನಿರೂಪಣೆಯನ್ನು ಯೋಜಿಸುತ್ತದೆ.
1. ಪರಿಸರ ಸಂರಕ್ಷಣೆ ಮೂಲಕ ಶಾಂತಿ ನಿರ್ಮಾಣ
4 ದಕ್ಷಿಣ ಏಷ್ಯಾ ರಾಷ್ಟ್ರಗಳ ದೊಡ್ಡ ಪ್ರಮಾಣದ ಅರಣ್ಯನಾಶ, ವನ್ಯಜೀವಿಗಳ ನಾಶ ಮತ್ತು ಭೂಮಿಯ ಉಷ್ಣಾಂಶ ನಿರ್ವಹಣೆ ಸವಾಲುಗಳನ್ನು ಪರಿಹರಿಸುವುದು.
ಸುಸ್ಥಿರ ಅಭ್ಯಾಸಗಳು, ಸಂರಕ್ಷಣಾ ಪ್ರಯತ್ನಗಳು ಮತ್ತು ಹವಾಮಾನ ಬದಲಾವಣೆ ತಗ್ಗಿಸುವಿಕೆಯ ಕ್ರಮಗಳ ಸಂಶೋಧನೆ ಮತ್ತು ಅಧ್ಯಯನ
ಆರೋಗ್ಯಕರ ಭೂಮಿಗಾಗಿ ಗಡಿಯಾಚೆಗಿನ ಸಹಕಾರವನ್ನು ಉತ್ತೇಜಿಸುವುದು.