ಬೆಂಗಳೂರು, ಮಾರ್ಚ್ 17, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

'ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘ' ಆರಂಭವಾಗಿದ್ದು, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. 

ಎಲ್ಲಾ ನೌಕರರಿಗೆ ಸೇವಾ ಸೌಲಭ್ಯಗಳನ್ನು ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದು ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘ'ದ ಅಧ್ಯಕ್ಷರಾದ ಮಹಾಲಿಂಗಪ್ಪ ಅವರು ತಿಳಿಸಿದರು. 

ಕರ್ನಾಟಕ ರಾಜ್ಯದಲಿ, ರಾಜ್ಯ & ಕೇಂದ್ರ ಸರ್ಕಾರಿ/ ಸಾರ್ವಜನಿಕ /ಅರೆ ಸಾರ್ವಜನಿಕ /ಇಲಾಖೆಗಳಿಗೆ

ಹಾಗೂ ಐ ಟಿ & ಬಿ ಟಿ ಉದ್ಯಮ, ಎಂ ಎನ್ ಸಿ ಕಂಪನಿಗಳು, ಬೃಹತ್ & ಮಧ್ಯಮ ಕಾರ್ಖಾನೆ ಗಳನ್ನೊಳಗೊಂಡಂತೆ ಖಾಸಗಿ ವಲಯದ ಎಲ್ಲಾ.. ಉದ್ಯಮಗಳಿಗೆ (ಹೊರರಾಜ್ಯ & ವಿದೇಶಗಳಿಗೂ ಸೇರಿದಂತೆ) ಎಲ್ಲಾ ವೃಂದದ ಮಾನವ ಸಂಪನ್ಮೂಲ ಸೇವೆಯನ್ನು ( Human resources services) ಹೊರಗುತ್ತಿಗೆ ಮುಖಾಂತರ ಸುಮಾರು ಅಂದಾಜು 50 ಲಕ್ಷಕ್ಕೂ ಅಧಿಕ ಜನರಿಗೆ ಹಾಗೂ ನೇರವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ, ಉದ್ಯೋಗ ಒದಗಿಸುತ್ತಿರುವ ಕೋಟ್ಯಾಂತರ ಕುಟುಂಬಗಳಿಗೆ ಆರ್ಥಿಕವಾಗಿ ಮತ್ತು ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸರ್ಕಾರಕ್ಕೆ ಪರೋಕ್ಷವಾಗಿ ನೆರವಾಗುತ್ತಿರುವ ಕರ್ನಾಟಕ ರಾಜ್ಯಕ್ಕೆ ಸೇರಿದ ಅಸಂಘಟಿತ ಖಾಸಗಿ ಗುತ್ತಿಗೆದಾರರು/ಸಂಸ್ಥೆಗಳು/ಏಜೆನ್ಸಿಗಳು/ಮಾಲೀಕರುಗಳು ಒಟ್ಟುಗೂಡಿ, ಉದ್ಯಮ ಬೆಳವಣಿಗೆ ಮತ್ತು ಅಭಿವೃದ್ಧಿ ಹಾಗೂ ಹಿತಾಸಕ್ತಿ ಬೇಡಿಕೆಗಳ ಈಡೇರಿಕೆ ಮತ್ತು ವಿವಿಧ ದ್ವೇಯೋದ್ದೇಶಗಳಿಗಾಗಿ ಮತ್ತು ಸಂಸ್ಥೆ /ಏಜೆನ್ಸಿಗಳ ಮೂಲಕ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಮತ್ತು ನೇರ ಉದ್ಯೋಗಿಗಳ ವೆಲ್‌ಫೇ‌ರ್(ಕಲ್ಯಾಣ) ಸೇರಿದಂತೆ ಎಜೆನ್ಸಿ/ಸಂಸ್ಥೆ ಮಾಲೀಕರುಗಳ ಹಿತಾಸಕ್ತಿ ಈಡೇರಿಸಿಕೊಳ್ಳುವ ಉದ್ದೇಶದಿಂದ ರಾಜ್ಯಮಟ್ಟದಲ್ಲಿ, "KARNATAKA HUMAN RESOURCES SERVICES PROVIDER'S CONTRACTOR'S ASSOSIATION (R) BENGALURU" (ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ (0), ) : DRB4/SOR/228/2024-2025 ថ ಅಡಿಯಲ್ಲಿ ಗುತ್ತಿಗೆದಾರ ಏಜೆನ್ಸಿಗಳ/ ಸಂಸ್ಥೆಗಳ ಮಾಲೀಕರುಗಳನ್ನೊಳಗೊಂಡ ನೂತನ ಗುತ್ತಿಗೆದಾರರ ಸಂಘ ಸ್ಥಾಪಿತವಾಗಿದ್ದು, ಆಸ್ತಿತ್ವಕ್ಕೆ ಬಂದಿರುತ್ತದೆ. ರಾಜ್ಯಮಟ್ಟದ ಈ ಸಂಘದ ಪದಾಧಿಕಾರಿಗಳಾಗಿ ಈ ಕೆಳಕಂಡವರು ಆಯ್ಕೆಯಾಗಿರುತ್ತಾರೆ.