ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಮ್ಮ ಹುಟ್ಟು ಹಬ್ಬವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯದ ಅಹಿಂದ ಸ್ವಾಮೀಜಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.

ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಹರಿಹರದ ಪಂಚಮ ಸಾಲಿ ಗುರು ಪೀಠದ ವಚನನಾಂದ ಶ್ರೀಗಳು, ಕುರುಬ ಸಮುದಾಯದ ಕನಕ ಗುರು ಪೀಠದ ನಿರಂಜನಾಂದ ನಾಥಪುರಿ ಸ್ವಾಮೀಜಿ,ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಶ್ರೀಗಳು, ಬೋವಿ ಗುರು ಪೀಠದ ಸಿದ್ಧರಾಮೇಶ್ವರ ಶ್ರೀಗಳು,ತೀರ್ಥಹಳ್ಳಿಯ ಈಡಿಗ ಗುರುಪೀಠದ ರೇಣುಕಾನಂದ ಶ್ರೀಗಳು, ಕುಂಚಟಿಗ ಮಹಾಸಂಸ್ಥಾನ ಮಠದ ಶಾಂತಲಿಂಗ ಮಹಾಸ್ವಾಮಿಗಳು, ಭಗೀರಥ ಮಹಾಸಂಸ್ಥಾನ ಮಠದ ಪುರುಷೋತ್ತಮನಂದ ಸ್ವಾಮಿಗಳು,ಮಡಿವಾಳ ಸಮಾಜದ ಮಡಿವಾಳ ಮಾಚಯ್ಯ ಶ್ರೀಗಳು ಸೇರಿದಂತೆ ಐವತ್ತಕ್ಕೂ ಅಧಿಕ‌ ಸ್ವಾಮೀಜಿಗಳು ಭಾಗವಹಿಸಿ ಕೇಕ್ ತಿನಿಸಿ ಆಶೀರ್ವಾದ ನೀಡಿದರು.

ಸಚಿವರಾದ ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಮಧುಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್, ಸಂಸದ ತುಕರಾಂ,ಕೆಎಂಎಫ್ ಅಧ್ಯಕ್ಷ ಬೀಮನಾಯ್ಕ್, ಬಿಜೆಪಿಯ ಮುಖಂಡರಾದ ಶಾಸಕ ಆಶ್ವಥ್ ನಾರಾಯಣ,ಸಿ.ಕೆ.ರಾಮ ಮೂರ್ತಿ,ಮಾಜಿ ಶಾಸಕ ಸುರಪುರದ ರಾಜು ಗೌಡ ಸೇರಿದಂತೆ ಕಾಂಗ್ರೆಸ್ ನ ಅನೇಕ ಶಾಸಕರು,ಮುಖಂಡರು ಭಾಗವಹಿಸಿ ಶುಭ ಹಾರೈಸಿದರು.

ಬೋವಿ ಗುರು ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ,ಸಂತೋಷ್ ಲಾಡ್ ಅತ್ಯಂತ ಪ್ರಮಾಣಿಕ ರಾಜಕಾರಣಿಯಲ್ಲಿ ಒಬ್ಬರು ಅವರು ಎಂದಿಗೂ ಭ್ರಷ್ಟತೆಯನ್ನು ಮೈಗೂಡಿಸಿಕೊಂಡ ರಾಜಕಾರಣಿಯಲ್ಲ ಇಡೀ ಅಹಿಂದ ಸ್ವಾಮೀಜಿಗಳು ಇವರ ಯಶಸ್ಸನ್ನು ಬಯಸಲಿದ್ದಾರೆ,ಮುಂದಿನ ರಾಜಕಾರಣದಲ್ಲಿ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ವಚನಾನಂದ ಶ್ರೀ ಗಳು ಮಾತನಾಡಿ, ಈ ಜಗತ್ತಿನಲ್ಲಿ ದೇವರು ಬಿಟ್ಟರೆ ಇನ್ನೋಬ್ಬ ಗಾಡ್ ಲಾಡ್ ಎಂದರೆ ಸಂತೋಷ್ ಲಾಡ್ ಅವರ ರಾಜಕೀಯ ಭವಿಷ್ಯಕ್ಕೆ ಇಡೀ ಸ್ವಾಮೀಜಿಗಳ ಸಮುದಾಯ ಶುಭ ಹಾರೈಸಲಿದೆ ಎಂದರು.