ಬೆಂಗಳೂರು, ಫೆಬ್ರವರಿ 28, 2025
ಬಿಷಪ್ ಡಾ.ಅನಿಲ್ ಕುಮಾರ್ ಜಾನ್ ಸರ್ವಂದ್ ಅವರನ್ನು ಬೆಂಗಳೂರು ಪ್ರಾದೇಶಿಕ ಸಮ್ಮೇಳನಕ್ಕೆ ಕಾನೂನುಬದ್ಧವಾಗಿ ನೇಮಕಗೊಂಡಿದ್ದಾರೆ ಎಂದು ಮೆಥೋಡಿಸ್ಟ್ ಚರ್ಚ್ ಇನ್ ಇಂಡಿಯಾ ಅಧಿಕೃತವಾಗಿ ಘೋಷಿಸಿದೆ.
ಬಿಷಪ್ ಡಾ.ಅನಿಲ್ ಕುಮಾರ್ ಅವರು, ಸೆರಾಂಪೋರ್ ಕಾಲೇಜಿನ ಸೆನೆಟ್ ಮಾಸ್ಟರ್ ಸತ್ತಾಲ್ ಕ್ರಿಶ್ಚಿಯನ್ ಆಶ್ರಮದ ಮುಖ್ಯ ಅಚಾರ್ಯರಾಗಿ, ಕೌನ್ಸಿಲ್ ಆಫ್ ಮೆಡಿಕಲ್ ವರ್ಕ್ ಅಧ್ಯಕ್ಷರಾಗಿ, ಕೌನ್ಸಿಲ್ ಆಫ್ ವುಮೆನ್ಸ್ ವರ್ಕ್ ಅಧ್ಯಕ್ಷರಾಗಿ ಮತ್ತು ವರ್ಲ್ಡ್ ಕೌನ್ಸಿಲ್ ಆಫ್ ಚರ್ಚ್ ಕೇಂದ್ರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಪ್ರಸ್ತುತ ಬಿಷಪ್ ಎನ್. ಎಲ್ ಕರ್ಕರೆ ಅವರಿಗೆ 77 ವರ್ಷವಾಗಿದ್ದು, ಇನ್ನೂ ತಮ್ಮ ಸ್ಥಾನವನ್ನು ಬಿಟ್ಟುಕೊಡದೆ ಕಾನೂನು ಬಾಹಿರವಾಗಿ ತಮ್ಮ ಹುದ್ದೆಯಲ್ಲಿ ಮುಂದುವರೆಯಬೇಕೆಂಬ ಹುನ್ನಾರ ನಡೆಸುತ್ತಿದ್ದಾರೆ, ಬಿಷಪ್ ಕರ್ಕರೆ ಅವರಿಗೆ 70 ವರ್ಷ ವಯಸ್ಸನ್ನು ದಾಟಿದ ನಂತರವೂ ಅಧಿಕಾರದಲ್ಲಿ ಮುಂದುವರಿದ ಅವರು ಕಾರ್ಯಕಾರಿ ಮಂಡಳಿಯ ನಿರ್ಣಯದ ಪ್ರಕಾರ, ಅವರು ಇನ್ನು ಮುಂದೆ ಬೆಂಗಳೂರು ಪ್ರಾದೇಶಿಕ ಸಮ್ಮೇಳನದಲ್ಲಿ ಯಾವುದೇ ಅಧಿಕೃತ ಸ್ಥಾನ, ಬಿರುದು ಅಥವಾ ಅಧಿಕಾರವನ್ನು ಹೊಂದಿರುವುದಿಲ್ಲ ಅವರು ಬೆಂಗಳೂರು ಪ್ರಾದೇಶಿಕ ಸಮ್ಮೇಳನ ಅಥವಾ ಎಂಸಿಐ ಅಡಿಯಲ್ಲಿ ಯಾವುದೇ ಸಂಸ್ಥೆ, ಮಂಡಳಿ, ಕೌನ್ಸಿಲ್ ಅಥವಾ ಟ್ರಸ್ಟ್ ನ ಅಧ್ಯಕ್ಷರು ಅಥವಾ ಮುಖ್ಯಸ್ಥರಲ್ಲ ಹಾಗೂ ಇನ್ನಿತರ ರೀತಿಯಲ್ಲಿ ದಾರಿ ತಪ್ಪಿಸುವ ಯಾವುದೇ ಹೇಳಿಕೆಗಳು ಸುಳ್ಳು ಮತ್ತು ಸತ್ಯಕ್ಕೆ ದೂರವಾದವುಗಳು ಎಂದು ಬೆಂಗಳೂರು ಪ್ರಾದೇಶಿಕ ಸಮ್ಮೇಳನ ಮೆಥೋಡಿಸ್ಟ್ ಚರ್ಚ್ ಇನ್ ಇಂಡಿಯಾ ಕಾರ್ಯಕಾರಿ ಕಾರ್ಯದರ್ಶಿ ರೆವ್.ಡೇವಿಡ್ ನಥಾನಿಯಲ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಷಪ್ ಎನ್.ಎಲ್.ಕರ್ಕರೆ ಅವರು ಸೊಸೈಟಿಗಳ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿ ಅದರ ಅಧಿಕಾರ ವ್ಯಾಪ್ತಿಯನ್ನು ಮೀರಿ ತಡೆಯಾಜ್ಞೆಯನ್ನು ಪಡೆದಿದ್ದರು.ಆದರೆ ಹೈಕೋರ್ಟ್ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಮತ್ತು ಸೊಸೈಟಿಗಳ ರಿಜಿಸ್ಟ್ರಾರ್ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಹೆಚ್ಚುವರಿಯಾಗಿ ಮುಂಬೈ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ಜಾಮೀನು ಕೋರಿ ಅವರ ಮನವಿಯನ್ನು ತಿರಸ್ಕರಿಸಿತು. ಕಾನೂನು ಹಿನ್ನಡೆಗಳ ಮಧ್ಯೆ ನಿವೃತ್ತಿ ನಂತರ ಕರ್ಕರೆ ಅಧಿಕಾರದಲ್ಲಿ ಮುಂದುವರೆಯುವ ಪ್ರಯತ್ನ ನಡೆಸಿದ್ದಾರೆ ಎಂದರು.