ಬೆಂಗಳೂರು, ಫೆಬ್ರವರಿ 28, 2025

ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್ ಬೆಂಗಳೂರು ನಗರ ಜಿಲ್ಲೆ ಸಂಕಲ್ಪ ಯೋಜನೆಯಡಿ ವೇಮನ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಹಯೋಗದೊಂದಿಗೆ 'ಉದ್ಯೋಗ ಮೇಳ-2025' ನಡೆಯಿತು. 

  ವೇಮನ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಂತ ನಾಯಕ್, ರೆಡ್ಡಿ ಸಂಘದ ಅಧ್ಯಕ್ಷರಾದ ಜಯರಾಮನ್ ರೆಡ್ಡಿ, ಉಪ ಅಧ್ಯಕ್ಷರಾದ ಲಕ್ಷ್ಮಣ್ ರೆಡ್ಡಿ, ಕಾರ್ಯದರ್ಶಿಯಾದ ಎನ್ ಶೇಖರ್ ರೆಡ್ಡಿ ಅವರು ಭಾಗಿಯಾಗಿದ್ದರು. 

   ಈ 'ಉದ್ಯೋಗ ಮೇಳ-2025' ದಲ್ಲಿ ಪ್ರತಿಷ್ಠಿತ 70 ಕಂಪನಿಗಳು ಭಾಗಿಯಾಗಿದ್ದವು. 5 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿಯಾದ್ದರು.