ಬೆಂಗಳೂರು, ಫೆಬ್ರವರಿ 27, 025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರುನಾಡ ಸೇವಕರು' ಸಂಘಟನೆಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಲೋಕೇಶಗೌಡ ಅವರು ಮಾತನಾಡಿದರು.
ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿದೆ ಎಂದು 'ಕರುನಾಡ ಸೇವಕರು' ಸಂಘಟನೆಯ ರಾಜ್ಯಾಧ್ಯಕ್ಷರಾದ ಲೋಕೇಶಗೌಡ ಅವರು ಆರೋಪಿಸಿದರು.
ಪೌರಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಅರ್ಹ ಪೌರಕಾರ್ಮಿಕರು ಕನ್ನಡ ಮಾತನಾಡಲು ತಿಳಿದಿರಬೇಕು ಎಂಬ ಮಾನದಂಡವನ್ನು ಕೈಬಿಟ್ಟು ನೇಮಕಾತಿ ನಡೆಸುತ್ತಿರುವ ಬಿಬಿಎಂಪಿಯ ಕನ್ನಡ ವಿರೋಧಿ ಧೋರಣೆಯನ್ನು ಕರುನಾಡ ಸೇವಕರು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಪೌರಕಾರ್ಮಿಕರ ವಿಶೇಷ ನೇಮಕಾತಿಯಡಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿ ನಡೆಸುತ್ತಿದೆ.ನೇಮಕಾತಿಯಲ್ಲಿ ಯಾವುದೆ ವಿದ್ಯಾರ್ಹತೆ ಕೇಳಿಲ್ಲ.ಬದಲಿಗೆ ಅರ್ಯ ಪೌರಕಾರ್ಮಿಕನಿಗೆ ಕನ್ನಡ ಮಾತನಾಡಲು ತಿಳಿದಿರಬೇಕು ಎಂಬುದು ಪ್ರಮುಖ ಅರ್ಹತಾ ನಿಯಮವಾಗಿದೆ.
ನೇಮಕಾತಿ ಪ್ರಕ್ರಿಯೆ ಸಂಧರ್ಭದಲ್ಲಿ ಈ ಅಂಶವನ್ನು ಪರಿಗಣಿಸಿ ನೇಮಕಾತಿ ನಡೆಸುವಂತೆ ಕನ್ನಡಬಲ್ಲವರನ್ನ ನೇಮಕಗೊಳಿಸುವಂತೆ ಬಿಬಿಎಂಪಿಗೆ ಕರುನಾಡ ಸೇವಕರು ಸಂಘಟನೆ ಮನವಿ ನೀಡಿತ್ತು ಈ ಸಂಬಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಸಹ ಎಚ್ಚರಿಸಿತ್ತು. ಎಚ್ಚೆತ್ತ ಪ್ರಾಧಿಕಾರ ಈ ಸಂಬಂದ ಬಿಬಿಎಂಪಿಗೆ ಪತ್ರವನ್ನು ಸಹ ಬರೆದಿತ್ತು.
ಆಡಳಿತದಲ್ಲಿ ಕನ್ನಡ ಜಾರಿಗೆ ತರುವ ಭರವಸೆ ನೀಡಿರುವ ಬಿಬಿಎಂಪಿ ಒಂದೆಡೆಯಾದರೆ ಕರ್ನಾಟಕದ ರಾಜಧಾನಿಯಲ್ಲಿ ಕರ್ತವ್ಯ ನಿರ್ವಹಿಸುವವರು ಕನ್ನಡ ಬಲ್ಲವರಾಗಿರಬೇಕು ಎಂಬುದು ಸಹಜ ನಿರೀಕ್ಷೆಯಾಗಿದೆ.
ಆದರೆ ಇದೆಲ್ಲವನ್ನು ಗಾಳಿಗೆ ತೂರಿರುವ ಬಿಬಿಎಂಪಿ ಕನ್ನಡ ಬಾರದ ಪೌರಕಾರ್ಮಿಕರನ್ನು ನೇಮಕಗೊಳಿಸಿ ಅಂತಿಮ ನೇಮಕಾತಿ ಪಟ್ಟಿ ಪ್ರಕಟಿಸಿದೆ.ಅರ್ಹ ಪೌರಕಾರ್ಮಿಕರಿಗೆ ಕನ್ನಡ ಮಾತನಾಡಲು ತಿಳಿದಿರುವ ಬಗ್ಗೆ, ಯಾವುದೆ ಸಂದರ್ಶನ ಇತ್ಯಾದಿ ನಡೆಸಿಲ್ಲ ಬದಲಿಗೆ ಕನ್ನಡ ಕರ್ನಾಟಕ ಕನ್ನಡಿಗರ ವಿರುದ್ಧ ಏನು ಮಾಡಿದರೂ ನಡೆಯುತ್ತದೆಂಬ ಧೋರಣೆಯನ್ನು ಬಿಬಿಎಂಪಿ ಪ್ರದರ್ಶಿಸುತ್ತಿದೆ.ನೇಮಕಾತಿಯಾದ ನಂತರ ಕನ್ನಡ ಕಲಿಸುವುದಾಗಿ ಬಿಬಿಎಂಪಿ ಹೇಳುತ್ತಿದೆ.ಹಾಗಿದ್ದರೆ ಅರ್ಹತಾ ನಿಯಮಕ್ಕೆ ಯಾವ ಗೌರವವೂ ಇಲ್ಲವಾದಂತಾಗಿದೆ.
ಅಲ್ಲಿ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆದರೆ ಇಲ್ಲಿ ಕನ್ನಡಿಗರ ರಾಜಧಾನಿಯಲ್ಲೆ ಕನ್ನಡವನ್ನು ಕಡೆಗಾಣಿಸಿ ಪರಭಾಷಿಕರಿಗೆ ಮಣೆ ಹಾಕಲಾಗಿದೆ. ಇದರಿಂದಾಗಿ ಅರ್ಹ ಕನ್ನಡಿಗರಿಗೆ ಉದ್ಯೋಗವಕಾಶ ಇಲ್ಲದಂತೆ ಮಾಡಲಾಗಿದೆ.
ಕನ್ನಡ ಮಾಧ್ಯಮ.ಗ್ರಾಮೀಣ ಅಭ್ಯರ್ಥಿಗಳು ಹುದ್ದೆಗೂ ಕನ್ನಡಿಗರು ಅರ್ಜಿ ಸಲ್ಲಿಸದಂತೆ ನಿಯಮ ರೂಪಿಸಲಾಗಿದೆ.