ಬೆಂಗಳೂರು, ಫೆಬ್ರವರಿ 22, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಮುಸ್ಲಿಂ ಯುವ ವೇದಿಕೆ' ಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಅನ್ವ‌ರ್ ಬಾಷ ಅವರ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು 'ಕರ್ನಾಟಕ ರಾಜ್ಯ ಮುಸ್ಲಿಂ ಯುವ ವೇದಿಕೆ'ಯ ಸದಸ್ಯರು ಒತ್ತಾಯಿಸಿದರು. 

   ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ಇತ್ತೀಚೆಗೆ ನಡೆದ ಮುತುವಲ್ಲಿ ಚುನಾವಣೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅಧಿಕಾರ ದುರ್ಬಳಕೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ದುರ್ಬಳಕೆ ಮತ್ತು ಅಗಸನಕಲ್ಲು ಬಡಾವಣೆಯ ಖಬ್ರಾಸ್ಥಾನ್‌ನಿನ ಜಮೀನನ್ನು ಕಬಳಿಸಿಕೊಂಡು ತಮ್ಮ ಸಂಸ್ಥೆಯ ವತಿಯಿಂದ (ರಮೀಜಾ ಮೈನಾರಿಟಿ ವೆಲ್ಸ್ವೇರ್ ಟ್ರಸ್ಟ್) ಯಿಂದ ಬೃಹತ್ ಶಾಲಾ ಕಟ್ಟಡವನ್ನು ನಿರ್ಮಿಸಿಕೊಂಡಿದ್ದು, ಈ ಅಕ್ರಮಗಳಲ್ಲಿ ತಾವು ನೇರವಾಗಿ ಭಾಗಿಯಾಗಿದ್ದು, ಅನ್ವ‌ರ್ ಬಾಷ ರವರ ವಿರುದ್ಧ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿ ತನಿಖೆಯನ್ನು ನಡೆಸುವುದಲ್ಲೆ ಇವರ ಸದಸ್ಯತ್ವವನ್ನು ರದ್ದುಪಡಿಸಲು ಆದೇಶಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿರುವ ಬಗ್ಗೆ.

ಇತ್ತೀಚೆಗೆ ನಡೆದಂತಹ ವಕ್ಸ್ ಮಂಡಳಿಯ (ಮುತವಲ್ಲಿ) ಸದಸ್ಯರ ಚುನಾವಣೆಯಲ್ಲಿ ಭಾರೀ ಅಕ್ರಮವೇ ನಡೆದಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು 32 ಸಾವಿರ ವಕ್ಷೆಗೆ ಸೇರಿದ ನೋಂದಾಯಿತಿ ಸಂಸ್ಥೆಗಳಿದ್ದು, ಈ ನೋಂದಾಯಿತ ಸಂಸ್ಥೆಗಳ ಮುತುವಲ್ಲಿಗಳು ಮತದಾನ ಮಾಡುವ ಮೂಲಕ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಈ ಸದಸ್ಯರನ್ನು ಆಯ್ಕೆ ಮಾಡಲು ಮತದಾನದ ಹಕ್ಕು ವುಳ್ಳವರು 1024 ಸಂಸ್ಥೆಗಳ ಮುತುವಲ್ಲಿಗಳು ಹಕ್ಕು ವುಳ್ಳವರಾಗಿರುತ್ತಾರೆ. ಇನ್ನು ಬಾಕಿ ಉಳಿದ 31 ಸಾವಿರ ಸಂಸ್ಥೆಗಳ ಸದಸ್ಯರಿಗೆ ಅವಕಾಶ ಇಲ್ಲದೇ ಇರುವುದು ಸಂಶಯಸ್ಪದವಾಗಿದೆ.

ಮತದಾನ ಹಕ್ಕು ಚಲಾಯಿಸಲು ಆ ಸಂಸ್ಥೆಯ ವಾರ್ಷಿಕ ಆದಾಯವು 2 ಲಕ್ಷ ಮೇಲ್ಪಟ್ಟಿರಬೇಕಾಗುತ್ತದೆ. ಆದರೆ ಯಾವುದೇ ಆದಾಯವಿಲ್ಲದ ಸಂಸ್ಥೆಗಳು ಹಾಗೂ ವಾರ್ಷಿಕ ಆದಾಯ ವರದಿಯನ್ನು ಸಂಬಂಧಪಟ್ಟ ಇಲಾಖೆಯ ಆಡಿಟರ್‌ಗಳಿಂದ ಸುಮಾರು 7-8 ವರ್ಷಗಳಿಂದಲೂ ಸಹ ಮಾಡಿಸದೇ ಇರುವ ಸಂಸ್ಥೆಗಳ ಅಧ್ಯಕ್ಷರುಗಳು (ಮುತುವಲ್ಲಿ)ಗಳು ಮತದಾನ ಮಾಡಲು ಅರ್ಹರು ಎಂದು ದೃಢೀಕರಿಸಿರುತ್ತಾರೆ. ಇದು ವಕ್ಸ್ ಕಾಯ್ದೆಯ ವಿರುದ್ಧವಾಗಿ ಕಾನೂನು ಬಾಹಿರವಾಗಿರುತ್ತದೆ. ಮುತುವಲ್ಲಿಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಮುಂದಾಲೋಚನೆಯನ್ನು ಇಟ್ಟುಕೊಂಡು ಕೆ.ಅನ್ವ‌ರ್ ಬಾಷ ಷಡ್ಯಾಂತ್ರ ರಚಿಸಿ ಅರ್ಹ ಮತದಾರರನ್ನು ಕೈಬಿಟ್ಟಿರುತ್ತಾರೆ ಎಂಬು ಆರೋಪವು ಅನ್ವರ್ ಬಾಷ ರವರ ಮೇಲಿದ್ದು, ಈಗಾಗಲೇ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿರುತ್ತವೆ.

2. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದ ಸಂಸ್ಥೆಗಳಿಂದ ವಾರ್ಷಿಕ ಶೇ.7% ಸೆ ಶುಲ್ಕವನ್ನು ಪಡೆದು ವಕ್ಸ್ ವತಿಯಿಂದ ಸೌಲಭ್ಯಗಳಿಂದ ವಂಚಿತರಾಗಿರುವ ಸುಮಾರು ಸಂಸ್ಥೆಗಳಿದ್ದು ಗ್ರಾಮೀಣ ಪ್ರದೇಶಲ್ಲಿ ಇರುವಂತಹ ವಕ್ಸ್ಗೆ ಸೇರಿಗೆ ಮಸೀದಿ, ಖಬ್ರಸ್ಥಾನ್, ಮದರಸ ಗಳ ರಕ್ಷಣೆಯ ಬಗ್ಗೆ ಕಿಂಚಿತ್ತು ವಕ್ಸ್ ಅಧಿಕಾರಿಗಳಿಗೆ ಜವಾಬ್ದಾರಿ ಇರುವುದಿಲ್ಲ. ಇದರ ಬಗ್ಗೆ ಹಲಾವರು ಬಾರಿ ಅರ್ಜಿಗಳನ್ನು ಕೆ.ಅನ್ವರ್ ಬಾಷ ರವರಿಗೆ ನೀಡಿದ್ದರೂ ಸಹ ಇದರ ಬಗ್ಗೆ ಗಮನವನ್ನು ಹರಿಸದೇ ನಿರ್ಲಕ್ಷತನವನ್ನು ತೋರಿದ್ದಲ್ಲದೆ, ತಮ್ಮ ಹಿಂಬಾಲಕರ ಬೆಂಬಲಕ್ಕಾಗಿ ಅನೇಕ ಅಕ್ರಮಗಳನ್ನು ವೆಸಗಿರುತ್ತಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ವಕ್ಫ್ ಸಂಸ್ಥೆಗೆ ಸೇರಿರುವಂತಹ ಸುಮಾರು ಸಂಸ್ಥೆಗಳ ಸುಮಾರು 8-10 ವರ್ಷಗಳಿಂದಲೂ ಆದಾಯ ವರದಿ ಆಡಿಟ್‌ನ್ನು ಮಾಡಿಸದೇ ಇಂತಹ ಸಂಸ್ಥೆಗಳ ಸಮಿತಿ ರಚನೆ ಮಾಡಿ ಅನುಮೋದನೆಯನ್ನು ಅಕ್ರಮವಾಗಿ ನೀಡಿರುತ್ತಾರೆ. ಇದರ ಬಗ್ಗೆ ಸುಮಾರು ಬಾರಿ ದೂರು ಅರ್ಜಿಗಳನ್ನು ನೀಡಿದ್ದರೂ ಸಹ ಅಧಿಕಾರಿಗಳು ಕರ್ತವ್ಯ ಲೋಪವನ್ನು ವ್ಯಸಗಿರುತ್ತಾರೆ. ಇಂತಹ ಸಂಸ್ಥೆಗಳ ಆಡಳಿತ ಮಂಡಳಿ ಅನುಮೋದನೆಯನ್ನು ಕರ್ನಾಟಕ ರಾಜ್ಯ ವಕ್ಸ್ ಮಂಡಳಿಯ ಅಧಿಕಾರಿಗಳು ನೀಡಿದ್ದು, ಈ ಅಧಿಕಾರಿಗಳು ಕಾನೂನು ಬಾಹಿರವಾಗಿ ವಕ್ಫ್ ಕಾಯ್ದೆಯನ್ನು ಉಲ್ಲಂಘಿಸಿ ನೀಡಿರುವಂತಹ ಅನುಮೋದನೆಯನ್ನು ರದ್ದುಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಶಿಸ್ತಿನ ಕ್ರಮ ಜರುಗಿಸಲು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಮುಸ್ಲಿಂ ಹಾಸ್ಟೆಲ್‌ನ ಚುನಾವಣೆಯನ್ನು ನಡೆಸುತ್ತೇವೆಂದು ಸುಮಾರು 2040 ಸದಸ್ಯರಿಂದ 2 ಲಕ್ಷದ 4 ಸಾವಿರ ರೂ.ಗಳನ್ನು ಪಡೆದು ಸುಮಾರು 10 ವರ್ಷಗಳಿಂದಲೂ ಸಹ ಚುನಾವಣೆಯನ್ನು ನಡೆಸಿರುವುದಿಲ್ಲ ಹಾಗೂ ಈ ಸಂಸ್ಥೆಯ ವಾರ್ಷಿಕ ಆದಾಯ (ಆಡಿಟ್) ವರದಿಯನ್ನು ಸಹ ಮಾಡಿಸಿರುವುದಿಲ್ಲ. ಇದರ ಬಗ್ಗೆ ಸುಮಾರು ಬಾರಿ ದೂರು ಅರ್ಜಿಗಳನ್ನು ನೀಡಿದ್ದರೂ ಸಹ ಯಾವುದೇ ರೀತಿಯಾದ ಕ್ರಮ ಕೈಗೊಳ್ಳದೇ ಈ ಸಂಸ್ಥೆಯ ವತಿಯಿಂದ ವಾಣಿಜ್ಯ ಸಂಕೀರ್ಣಕ್ಕಾಗಿ ಸುಮಾರು 40 ಲಕ್ಷ ಗಳನ್ನು 20 ವರ್ಷಗಳ ಹಿಂದೆಯೇ ಪಡೆದು ಹಾಗು ಬಾಡಿಗೆದಾರರಿಂದ ಒಂದು ಕೋಟಿ ರೂ. ಅಡ್ವಾನ್ಸ್ ಹಣವನ್ನು ಸಹ ಪಡೆದು ಬಾಡಿಗೆದಾರರಿಗೆ ದೊರಕಬೇಕಾದಂತಹ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಅಪೂರ್ಣಗೊಳಿಸಿರುತ್ತಾರೆ. ಆದರೆ ಈ ಸಂಸ್ಥೆಗೆ ತಮಗೆ ಬೇಕಾದಂತಹ ತಮ್ಮ ಹಿಂಬಾಲಕರನ್ನು ಅಧ್ಯಕ್ಷರನ್ನಾಗಿ ಸದಸ್ಯರನ್ನಾಗಿ ಮಾಡಿಕೊಂಡು ಅಕ್ರಮವನ್ನು ವ್ಯಸಗಿರುತ್ತಾರೆ.

ತಾವು 2004-15 ರಲ್ಲಿ ಜಿಲ್ಲಾ ವಕ್ಸ್ ಮಂಡಳಿಯ ಅಧ್ಯಕ್ಷರಾದಂತಹ ಸಮಯದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಉಮೇನ್ ಪೌಂಡೇಷನ್ ವತಿಯಿಂದ ಮುಸ್ಲಿಂ ಸಮಾಜದ ಬಡ ಹೆಣ್ಣು ಮಕ್ಕಳಿಗೆ ನಾನಾ ತರಬೇತಿಗಳನ್ನು ಒದಗಿಸುವ ಸಲುವಾಗಿ ಸಹಾಯಧವನ್ನು ಎನ್.ಜಿ.ಓ. ಸಂಸ್ಥೆಗಳ ಮುಖಾಂತರ ಸುಮಾರು ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಕೆ.ಅನ್ವರ್ ಬಾಷ ರವರು ತಮ್ಮ ವಂಶಸ್ಥರು, ಹಾಗೂ ತಮ್ಮ ಹಿಂಬಾಲಕರಿಗೆ ಎನ್.ಜಿ.ಓ.ಗಳ ಮುಖಾಂತರ ಹಣವನ್ನು ಬಿಡುಗಡೆ ಮಾಡಿಸಿ ತಮ್ಮ ಸ್ವಂತಕ್ಕಾಗಿ ಈ ಹಣವನ್ನು ದುರ್ಬಳಕ್ಕೆ ಮಾಡಿಕೊಂಡು ಯಾವುದೇ ರೀತಿಯಾದಂತಹ ತರಬೇತಿ ಕೇಂದ್ರಗಳನ್ನು ತೆರೆದಿರುವುದಿಲ್ಲ.