ಬೆಂಗಳೂರು, ಫೆಬ್ರವರಿ 21, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಹಳ್ಳಿಕಾರ ಮಠ ಟ್ರಸ್ಟ್ ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ತುಮಕೂರು ಜಿಲ್ಲೆಯ ಶೆಟ್ಟಿಗೊಂಡನಹಳ್ಳಿಯ ಮಠದಲ್ಲಿ ಫೆಬ್ರವರಿ 23ರಂದು 'ಶ್ರೀ ಹಳ್ಳಿಕಾರ ಮಠದ 2ನೇ ವಾರ್ಷಿಕೋತ್ಸವ, ಪರಮಪೂಜ್ಯ ಶ್ರೀ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿ ಅವರ ದೀಕ್ಷಾ ಮಹೋತ್ಸವ ಹಾಗೂ ಹಳ್ಳಿಕಾರ ತಳಿ ರಾಸುಗಳ ಪ್ರದರ್ಶನ' ನಡೆಯಲಿದೆ ಎಂದು ತಿಳಿಸಿದರು.
ಶ್ರೀ ಹಳ್ಳಿಕಾರ ಮಠ ಟ್ರಸ್ಟ್ ವತಿಯಿಂದ ಅನೇಕ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.