ಬೆಂಗಳೂರು, ಫೆಬ್ರವರಿ 19, 2025
ಕಿಡ್ನಿ ಸ್ಟೋನ್ ಚಿಕಿತ್ಸೆ ನೆಪದಲ್ಲಿ ಹೊಸ್ಮಟ್ ಆಸ್ಪತ್ರೆಯ ಡಾ. ಸುಧಾಕರ್ ರಿಂದ ವೈದ್ಯಕೀಯ ನಿರ್ಲಕ್ಷ್ಯ - ವಂಚನೆ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಹೆಣ್ಣೂರಿನ ಹೀನಾ ಎಂಬುವರಿಗೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಳುತ್ತಿದ್ದರು. ಈ ಹಿನ್ನಲೆಯಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯ ಜತೆಗೆ ಕುಟುಂಬದವರು ಸಿಲ್ವರ್ ಲೈನ್ ಡಯಾಗ್ನೋಸ್ಟಿಕ್ ಕ್ಲಿನಿಕ್ ಗೆ ತೆರಳಿದ್ದರು. ಆಗ ಪರಿಚಯವಾದ
ಹೆಣ್ಣೂರಿನ ಹೊಸ್ಮಟ್ ಆಸ್ಪತ್ರೆ (HOSMAT Hospitals)ಯ ವೈದ್ಯರಾದ ಡಾ. ಸುಧಾಕರ್ ಅವರು ಕಿಡ್ನಿ ಸ್ಟೋನ್ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರು. ಡಾ. ಸುಧಾಕರ್ ಅವರ ಮಾತಿನಂತೆ ಜನವರಿ 8, 2025 ರಂದು ಹೆಣ್ಣೂರಿನ ಹೊಸ್ಮಟ್ ಆಸ್ಪತ್ರೆ (HOSMAT Hospitals)ಗೆ ತೆರಳಿ ಮಹಿಳೆಯನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆಯ 10 ದಿನಗಳ ಬಳಿಕ ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾರೆ. ಇದರಿಂದ ಗಾಬರಿಗೊಂಡ ಹೀನಾ ಕುಟುಂಬದವರು ಬೇರೊಂದು ಹಾಸ್ಪಿಟಲ್ ಗೆ ಹೋಗಿ ಹೀನಾ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಹೆಣ್ಣೂರಿನ ಹೊಸ್ಮಟ್ ಆಸ್ಪತ್ರೆ (HOSMAT Hospitals)ಯ ವೈದ್ಯರಾದ ಡಾ. ಸುಧಾಕರ್
ಸೂಕ್ತ ಚಿಕಿತ್ಸೆ ನೀಡದೆ ₹60 ಸಾವಿರ ಪಡೆದು ವಂಚನೆ ಎಸಗಿದ್ದಾರೆ ಎಂದು ಹೀನಾ ಕುಟುಂಬದವರು ಆರೋಪಿಸಿದರು.