ಫೆಬ್ರವರಿ 18, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಸ್ಟೇಟ್ ಸೋಷಿಯಲ್ ಲಿಬರ್ಟಿ ಫೋರಂ' ನ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಎಂ.ಎಸ್. ಮೊಹಿನುದ್ದೀನ್ ಅವರು ಮಾತನಾಡಿದರು.
ಶಿವಮೊಗ್ಗ ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಆಸ್ಪತ್ರೆಯ ವೈದ್ಯರಾದ ಡಾ॥ ತೇಜಸ್ವಿ ಅವರು ವೈದ್ಯಕೀಯ ನಿರ್ಲಕ್ಷ್ಯ ಎಸಗಿದ್ದಾರೆ ಎಂದು ಆರೋಪಿಸಿದರು. ಅವರ ನಿರ್ಲಕ್ಷ್ಯದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು.
ರಾಜಕಾರಣಿಗಳ ಆಶೀರ್ವಾದದಿಂದ ಅನ್ಯಾಯವಾಗಿರುವ ಪೀಡಿತರಿಗೆ ನ್ಯಾಯ ಸಿಗದಿರುವುದು. ಶಿವಮೊಗ್ಗ ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಆಸ್ಪತ್ರೆಯ ವೈದ್ಯರಾದ ಡಾ। ತೇಜಸ್ವಿಯವರು ಸುಳ್ಳು ಹೇಳಿ ಶ್ರೀಮತಿ. ಸುಜಾತ ಎಂಬ ಮಹಿಳೆಯನ್ನು ಹಣಕ್ಕಾಗಿ ಆಸ್ಪತ್ರೆಗೆ ದಾಖಲಿಸಿಕೊಂಡು 15 ದಿನಗಳ ಕಾಲ ಆಸ್ಪತ್ರೆಯಲ್ಲಿಟ್ಟುಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗವಿದ್ದ 2021ನೇ ಸಾಲಿನಲ್ಲಿ ಸಿ.ಟಿ. ಸ್ಕ್ಯಾನ್ ರಿಪೋರ್ಟ್ ಮುಚ್ಚಿಟ್ಟು, ಇದು ತೀವ್ರ ಸ್ವರೂಪವಾಗಿರುವುದೆಂದು ಸುಳ್ಳು ಹೇಳಿ ತನ್ನ ಮನಬಂದಂತೆ, ತನ್ನ ಇಚ್ಛೆಯಂತೆ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿ ಸಾವನ್ನುಂಟುಮಾಡಿರುವುದಲ್ಲದೆ, ಚಿಕಿತ್ಸೆಯ ವಿವರವನ್ನೂ ನೀಡದೆ, ಹಣ ಕಟ್ಟಿರುವುದಕ್ಕೆ ರಶೀದಿಯನ್ನೂ ನೀಡದೆ ಮೃತ ದೇಹವನ್ನು ನೀಡಿದ ನಂತರ ಹಣಕ್ಕಾಗಿ ಪೀಡಿಸಿರುವುದು. ನಂತರ ಚಿಕಿತ್ಸೆಯ ದಾಖಲೆಗಳನ್ನು ಪಡೆದುಕೊಂಡು ನೋಡಿದಾಗ ವೈದ್ಯರು ನಿರಾಧಾರ ಸುಳ್ಳು ಹೇಳಿರುವುದು ಸಿ ಟಿ. ಸ್ಕ್ಯಾನ್ ರಿಪೋರ್ಟ್, ಚಿಕಿತ್ಸೆಯ ಚಾರ್ಟ್, ಕನ್ಸಲೆಂಟ್ ಚಾರ್ಟ್, ಹದಲ್ಲಿ ಅಬ್ಬರ್ವೇಷನ್ ಚಾರ್ಟ್, ವೆಂಟಿಲೇಟರ್ ಚಾರ್ಟ್ ಒಂದಕ್ಕೊಂದು ವ್ಯತ್ಯಾಸವಿರುವುದು, ತಿದ್ದುಪಡಿ ಮಾಡಿರುವುದು ಮತ್ತು ಸಿ ಟಿ ಸ್ಕ್ಯಾನ್ ರಿಪೋರ್ಟ್ ಮೈಲ್ಡ್ ಅನ್ನು ಸೀವಿಯರ್ ಎಂದು ಸುಳ್ಳು ಹೇಳಿರುವುದಕ್ಕೆ ಮೊಬೈಲ್ ರೆಕಾರ್ಡಿಂಗ್ ಇದೆ ಮತ್ತು ಅಲ್ಲಿದಿ ನಿಭಾರತ ಸರ್ಕಾರದ ಐ.ಸಿ.ಎಂ.ಆರ್. ಮತ್ತು ರಾಜ್ಯ ಸರ್ಕಾರದ ಸುತ್ತೋಲೆಗಳು ಮತ್ತು ಆದೇಶಗಳನ್ನು ಪಾಲಿಸದಿರುವುದು ವೈದ್ಯರ ದಾಖಲೆಗಳ ಪ್ರಕಾರ ಕಂಡು ಬಂದಿರುತ್ತದೆ. ಇದರ ಬಗ್ಗೆ ಪೀಡಿತರು ಮಾನ್ಯ ಮುಖ್ಯಮಂತ್ರಿಗಳಿಗೆ ದಿನಾಂಕ: 22-08-2024 ರಂದು ದೂರು ನೀಡಿದ್ದು, ಮತ್ತು ಆರೋಗ್ಯ ಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ, ಜಿಲ್ಲಾ ಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದು. ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು ತನಿಖೆಗೆ ಆದೇಶಿಸಿರುವುದು. ಈ ದೂರಿನನ್ವಯ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತನಿಖೆಗೆ ವೈದ್ಯರ ತಂಡವನ್ನು ರಚಿಸಿ ಸುದೀರ್ಘ ಕಾಲಾವಧಿಯನ್ನು ತೆಗೆದುಕೊಂಡು (4 ತಿಂಗಳು) ಸುಳ್ಳುಗಾರರಾದ ವೈದರಾದ ತೇಜಸ್ವಿಯ ಪರವಾಗಿ ಶಾಮೀಲಾಗಿ ವರದಿಯನ್ನು ನೀಡಿರುವುದು.
ಪೀಡಿತರು ತನಿಖಾ ತಂಡದ ವರದಿಯ ವಿರುದ್ಧ ಮರು ದೂರು ನೀಡಿ, ವೈದ್ಯರ ದಾಖಲೆಗಳನ್ನು ಮತ್ತು ಐ.ಸಿ.ಎಂ.ಆರ್.ಗೈಡ್ ಲೈನ್, ರಾಜ್ಯ ಸರ್ಕಾರದ ಸುತ್ತೋಲೆ ಮತ್ತು ಆದೇಶಗಳನ್ನು ನಿಯಮಾನುಸಾರ ಕೂಲಂಕುಷವಾಗಿ ಪರಿಶೀಲಿಸದೆ ವರದಿ ನೀಡಿರುವರೆಂದು ದೂರು ನೀಡಿದಾಗ ಮತ್ತೊಮ್ಮೆ ತನಿಖಾ ತಂಡ ವರದಿ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆದೇಶಿಸಿದಾಗ ವೈದ್ಯರ ತನಿಖಾ ತಂಡವು ಆಸ್ಪತ್ರೆ ವೈದ್ಯರಾದ ತೇಜಸ್ವಿಯ ದಾಖಲೆಗಳಲ್ಲಿ Consultant Sheet ನ್ನು ಮಾತ್ರ ವೀಕ್ಷಿಸಿ ಇನ್ನುಳಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸದ ಸದರಿ ಆಸ್ಪತ್ರೆ ವೈದ್ಯರ ಪರವಾಗಿ ಮತ್ತೆ ವರದಿ ನೀಡಿರುವುದು. ಕಾರಣ ಡಾ.ತೇಜಸ್ವಿಯು ಪ್ರಭಾವಿ ರಾಜಕಾರಣಿಯಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಅಳಿಯನಾಗಿರುವುದರಿಂದ ಹಾಗೂ ಕೆ.ಎಸ್.ಈಶ್ವರಪ್ಪನವರ ಹಸ್ತಕ್ಷೇಪ ಇರುವುದರಿಂದ ಸರ್ಕಾರಿ ಅಧಿಕಾರಿಗಳು ಕೆ.ಎಸ್.ಈಶ್ವರಪ್ಪನವರ ಒತ್ತಡಕ್ಕೆ ಮಣಿದು ಅಳಿಯನಾದ ಡಾ.ತೇಜಸ್ವಿಯ ಪರವಾಗಿ ವರದಿ ನೀಡಿರುವುದರಿಂದ ಪೀಡಿತರಿಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ರಾಜಕಾರಣಿ ಈಶ್ವರಪ್ಪನವರ ಪರವಾಗಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಆದ ಕಾರಣ, ಸರ್ಕಾರದ ಮಾನ್ಯ ಘನ ಮುಖ್ಯಮಂತ್ರಿಗಳು ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿ ಈ ಪ್ರಕರಣದ ತನಿಖೆ ಮಾಡಿ ವರದಿ ನೀಡಲು ಸಿ.ಓ.ಡಿ.ಗೆ ಅದೇಶಿಸಲು ಮತ್ತು ಆಸ್ಪತ್ರೆಯ ವೈದ್ಯರಾದ ಡಾ.ತೇಜಸ್ವಿಯವರ ನಿರ್ಲಕ್ಷ್ಯದಿಂದ ನಾನು ಮಾಜಿ ಮಂತ್ರಿಗಳ ಅಳಿಯ, ನನ್ನನ್ನು ಯಾರೂ ಏನೂ ಮಾಡಲು ಆಗುವುದಿಲ್ಲವೆಂದು ದರ್ಪದಿಂದ ವರ್ತಿಸುತ್ತಿರುವುದು ಮತ್ತು ಸರ್ಕಾರಿ ಅಧಿಕಾರಿಗಳು ಸರ್ಕಾರಿ ವೈದ್ಯರುಗಳು ಶಾಮೀಲಾಗಿರುವುದರಿಂದ ಮೃತ ಶ್ರೀಮತಿ.ಸುಜಾತ ರವರ ಪತಿ ಮತ್ತು ಮಕ್ಕಳಿಗೆ ಅನ್ಯಾಯವಾಗಿರುವುದರಿಂದ ವೈದ್ಯರ ದಾಖಲೆಗಳನ್ನು ಪರಿಶೀಲಿಸಿ ನ್ಯಾಯ ಕೊಡಿಸಲು State Social Liberty Forum ಸಂಘವು ಮಾನ್ಯ ಮುದ್ರಣ ಪತ್ರಿಕಾ ಮಾದ್ಯಮ ಮತ್ತು ದೃಶ್ಯ ಮಾದ್ಯಮದ ವರದಿಗಾರರು ಬಂಧುಮಿತ್ರರಲ್ಲಿ ನ್ಯಾಯ ಕೊಡಿಸಲು ಕೇಳಿಕೊಳ್ಳುತ್ತಿದೆ. ಇದರಿಂದ ವೈದ್ಯರು ಸುಳ್ಳು ಹೇಳಿರುವುದು, ನಿರ್ಲಕ್ಷ್ಯ ತೋರಿರುವುದು ಮತ್ತು ದೌರ್ಜನ್ಯದಿಂದ ಬಲಿಯಾಗುವ ಸಾರ್ವಜನಿಕರಿಗೆ ಭದ್ರತೆಯೂ ಮತ್ತು ಸುಳ್ಳು ಹೇಳಿ ನಿರ್ಲಕ್ಷ್ಯ ಮತ್ತು ದೌರ್ಜನ್ಯವೆಸಗುವ ವೈದ್ಯರಿಗೂ ತಪ್ಪು ಮನವರಿಕೆಯಾಗುವುದೆಂದು ಮುದ್ರಣ ಮತ್ತು ದೃಶ್ಯ ಮಾದ್ಯಮದವರಲ್ಲಿ ಕೇಳಿಕೊಳ್ಳುತ್ತೇವೆ.
ಪೀಡಿತರು ಎಲ್ಲಾ ದಾಖಲೆಗಳನ್ನು ನೀಡಿಯೂ ನ್ಯಾಯ ಸಿಗದಿದ್ದಲ್ಲಿ ಸರ್ಕಾರಕ್ಕೆ ದಯಾಮರಣಕ್ಕೆ ಅವಕಾಶ ನೀಡಲು ಮನವಿ ಸಲ್ಲಿಸಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವೈದ್ಯರ ದಾಖಲೆಗಳನ್ನು ಸಂಘಕ್ಕೆ ನೀಡಿರುತ್ತಾರೆ. ಈ ಪ್ರಕರಣವನ್ನು ಸಿ.ಓ.ಡಿ. ತನಿಖೆಗೆ ಆದೇಶಿಸಿ ಪೀಡಿತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ನಮ್ಮ ಸಂಘಟನೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.