ಬೆಂಗಳೂರು, ಫೆಬ್ರವರಿ 18, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ)' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆ. 24ರಂದು
'ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ ನಡೆಯಲಿದೆ.
ದಿನಾಂಕ: 24-02-2025 ರಂದು ಸಂಘದ ಹಕ್ಕುಗಳನ್ನು ಈವರೆಗೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಹೋರಾಟ ಘೋಷಣೆ.
ನಮ್ಮ ಸಂಘದ ಸದಸ್ಯರು ನಮ್ಮ ಸಮುದಾಯದ ಮೇಲೆ ಪ್ರಬಾವ ಬೀರುವ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ದೀರ್ಘಕಾಲದಿಂದ ಪ್ರಾಮಾಣಿಕವಾಗಿ ಪ್ರತಿನಿಧಿಸಲು ಪ್ರಯತ್ನಿಸುತ್ತಿದ್ದೇವೆ. ಇದರಲ್ಲಿ [ವಿಶೇಷವಾಗಿ ಕೇಳಿದ ಬೇಡಿಕೆಗಳು/ ಅನುಕೂಲತೆಗಳು) ಸೇರಿವೆ. ಆದರೆ, ಸಂಬಂಧಿತ ಪ್ರಾಧಿಕಾರಿಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಮ್ಮ ಸಂಘದ ಬೇಡಿಕೆಗಳನ್ನು ನೀಡಲು ಸರಿಯಾಗಿ ಗಂಭೀರವಾಗಿ ಪರಿಗಣಿಸಿರುವುದಿಲ್ಲ ಯಾವುದೇ ತೃಪ್ತಿಕರ ಪರಿಹಾರವನ್ನು ನೀಡಲು ವಿಫಲವಾಗಿದ್ದಾರೆ.
ಬೇಡಿಕೆಗಳು :
1. ನಮ್ಮ "ಸೇವೆಯನ್ನು ಖಾಯಂ" ಮಾಡಬೇಕು.
2. ಸುಪ್ರಿಂ ಕೋಟ್ರ್ ನ ಆದೇಶದಂತೆ "ಸಮಾನ ಕೆಲಸಕ್ಕೆ ಸಮಾನ ವೇತನ” ನಿಗಧಿಪಡಿಸಬೆಕು. [ಕನಿಷ್ಟ ಪಕ್ಷ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಶುಕ್ರೂಷಾಧಿಕಾರಿಗಳಿಗೆ ಮೂಲ ವೇತನ ಕೊಟ್ಟಂತೆ ನಮಿಗೂ ನಿಗದಿ ಪಡಿಸಬೇಕು].
3. ಮುಂಬರುವ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಲಿಕೆಯನ್ನು ನೀಡಬೇಕು.
4. ಜಿಲ್ಲೆ ಯಿಂದ ಜಿಲ್ಲೆಗೆ ವರ್ಗವಣೆ ನಿಡಬೇಕು.
ಮೇಲಿನ ಬೇಡಿಕೆಗಳು ಇದುವರೆವಿಗೂ ಪೂರ್ಣಗೋಳಿಸಿದ ಕಾರಣ ನಮ್ಮ ಧ್ವನಿಯನ್ನು ಪ್ರೇರೆಪಿಸಲು ನಾವು ಎಲ್ಲಾ ರೀತಿಯ ಮನವಿಗಳನ್ನು ಮತ್ತು ಇತರೆ ಮಾರ್ಗಗಳನ್ನು ಮುಗಿಸಿದ್ದೇವೆ. ಸಮಯವು ಕೊನೆಗೊಳ್ಳುತ್ತಿರುವುದರಿಂದ ನಮ್ಮ ಸಂಘವು ದಿನಾಂಕ:-19-02-2025 ರಿಂದ ಹೋರಾಟದ ಆರಂಭಿಸುವುದಾಗಿ ಘೋಷಿಸುತ್ತೇವೆ. ಇದು ಶಾಂತಿಯುತ ಸಂವಾದ ಮತ್ತು ಪರಿಹಾರಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದ ನಂತರವೇ ನಮ್ಮ ಅಂತಿಮ ನಿರ್ಧಾರವಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ನಾವು ಪತ್ರಿಕಗೋಷ್ಠಿಯಲ್ಲಿ ನಾಡಿನ ಜನತೆ ಎದುರು 24-02-2025 20 ದಿನಾಂಕ:-ಶಾಂತಿಯುತ ಹೋರಟವನ್ನು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಯನ್ನು ಆರಂಭಿಸುತ್ತೀದ್ದೇವೆ. ಈ ಹೋರಾಟವು ಕೇವಲ ಪ್ರತಿಭಟನೆ ಮಾತ್ರವಲ್ಲ ಇದು ನಮ್ಮ ಹಕ್ಕುಗಳನ್ನು ಮಾನ್ಯವಾಗಿಸುವ ವರೆಗೂ ಹೋರಾಡುತ್ತೇವೆ.
ನಮ್ಮ ಹಕ್ಕುಗಳನ್ನು ಮತ್ತು ಸಮಸ್ಯೆಗಳನ್ನು ಬಲಪಡಿಸಲು ಪತ್ರಿಕ ಮಾಧ್ಯಮ ಮತ್ತು ಇತರೆ ಜಾಲತಾಣಗಳ ಸಹಕಾರವನ್ನು ನೀಡಬೇಕಾಗಿ ನಮ್ಮ ಸಂಘದಿಂದ ಪ್ರಾರ್ಥಿಸುತ್ತೇವೆ.
ನಮ್ಮ ವಿನಂತಿಯನ್ನು ಗಮನವಾಗಿ ಪರಿಗಣಿಸಬೇಕಾಗಿ ಸದರಿ ನಮ್ಮ ಪ್ರತಿಭಟನೆಗೆ ಸುದ್ದಿ ಮಾಧ್ಯಮದ ಮೂಲಕ ಬೆಂಬಲವನ್ನು ನೀಡಬೇಕಾಗಿ ಕೋರುತ್ತೇವೆ. ನಮ್ಮ ಸಂಘವನ್ನು ಪರಿಗಣಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ಕೋರುತ್ತೇವೆ.