ಫೆಬ್ರವರಿ 17, 2025

 ಪ್ರಣವಸ್ವರೂಪಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶ್ರೀ ಆದಿಚುಂಚನಗಿರಿಯಲ್ಲಿ "ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭ" ನಡೆಯಲಿದೆ. 

ವಿಜ್ಞಾತಂ ಉತ್ಸವ 2025ರ ಕಲರವ:

ಸಹಸ್ರಮಾನಗಳ ಇತಿಹಾಸ ಹೊಂದಿರುವ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಅನ್ಯ, ಅಕ್ಷರ, ಆರೋಗ್ಯ, ಆಕಳು, ಅರಣ್ಯ, ಅಧ್ಯಾತ್ಮಿಕ, ಅಭಯ, ಅನುಕಂಪ ಮತ್ತು ಆಶ್ರಯದ ನವವಿಧ ದಾಸೋಹದ ಮೂಲಕ ಮನುಕುಲದ ಔನ್ನತ್ಯಕ್ಕಾಗಿ ನಿರಂತರವಾಗಿ ಸಲ್ಲಿಸುತ್ತಿರುವ ಸಮಾಜಮುಖಿ ಸೇವೆಗಳು ಅನುಪಮ ಮತ್ತು ಅನನ್ಯ. ಶ್ರೀಮಠದ 72ನೇ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಶ್ರೀಮಠದ ಸಾಧನೆಗಳು ಅತ್ಯಂತ ಉಚ್ಛಾಯ ಸ್ಥಿತಿಯಲ್ಲಿ ಸಾಗುತ್ತಿವೆ.

ಶ್ರೀಮಠದ 72ನೇ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ 2025ರ ಫೆಬ್ರವರಿ19 ಮತ್ತು 20 ರಂದು ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ವಿಜ್ಞಾತಂ ಉತ್ಸವ-2025 ನ್ನು ಆಯೋಜಿಸಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಯ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು, ಶ್ರೀಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ವಿಜ್ಞಾತಂ ಉತ್ಸವ-2025ರ ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀ ಮಠವು ಆಶಿಸುತ್ತದೆ. ಪ್ರಯೋಜನವನ್ನು

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ 12ನೇ ವಾರ್ಷಿಕ ಪಟ್ಟಾಭಿಷೇಕದ ಅಂಗವಾಗಿ ಫೆ.19 ರಂದು ವಿಜ್ಞಾತಂ ಉತ್ಸವ-2025 ರ ವಸ್ತು ಪ್ರದರ್ಶನ, ರಸಪ್ರಶ್ನೆ, ವಿಜ್ಞಾತಂ ನೃತ್ಯೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 2025ರ ವಿಜ್ಞಾತಂ ಉತ್ಸವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ)ನ ಆದಿಚುಂಚನಗಿರಿ ವಿಶ್ವವಿದ್ಯಾನಿಲಯ. ಶಿಕ್ಷಣ ಸಂಸ್ಥೆಗಳು ಸೇರಿದಂತೆ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಲಿವೆ. ಫೆ.20 ರಂದು ಚುಂಚಶ್ರೀಗಳಿಗೆ ವಾರ್ಷಿಕ ಪಟ್ಟಾಭಿಷೇಕ ಕಾರ್ಯಕ್ರಮ ಜರುಗಲಿದೆ.