ಬೆಂಗಳೂರು, 13 ಫೆಬ್ರವರಿ 2025:
ಮಲಬಾರ್ ಸಂಸ್ಥೆಯಿಂದ ಮಹಿಳಾ ಸಬಲೀಕರಣದ ತನ್ನ ಬದ್ಧತೆಯ ಪ್ರದರ್ಶನ
ಭಾರತದ ಮುಂಚೂಣಿಯಲ್ಲಿರುವ ವ್ಯವಹಾರಿಕ ಸಮೂಹ ಸಂಸ್ಥೆ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಪೋಷಕ ಸಂಸ್ಥೆಯಾಗಿರುವ ಮಲಬಾರ್ ಗ್ರೂಪ್ ಕರ್ನಾಟಕದಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನವನ್ನು ಘೋಷಣೆ ಮಾಡಿದೆ. ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿ ವೇತನ ಯೋಜನೆಯನ್ನು ಘೋಷಣೆ ಮಾಡಲಾಯಿತು. ಸಮೂಹದ ಫ್ಲ್ಯಾಗ್ಶಿಪ್ ಯೋಜನೆಯಾದ ಸಿಎಸ್ಆರ್ ಉಪಕ್ರಮದಡಿಯ ಮಲಬಾರ್ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಈ ಘೋಷಣೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಮೂಲಕ ಹೆಣ್ಣು ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಬದ್ಧತೆಯನ್ನು ತೋರಿಸುತ್ತದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ರವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಶಾಸಕರಾದ ಶ್ರೀ ಎನ್.ಎ.ಹ್ಯಾರೀಸ್ ಉಪಸ್ಥಿತರಿದರು. ಮಲಬಾರ್ ಗ್ರೂಪ್ನ ಅಧ್ಯಕ್ಷರಾದ ಎಂ.ಪಿ.ಅಹಮ್ಮದ್ರವರು, ಮಲಬಾರ್ ಗ್ರೂಪ್ನ ಇಂಡಿಯಾ ಕಾರ್ಯಾಚರಣೆಗಳ ವ್ಯವಸ್ಥಾಪಕ ನಿರ್ದೇಶಕರಾದ ಓ ಅಷರ್ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಫಿಲ್ಟರ್ ಬಾಬು ಬಿ.ಪಿ, ವಲಯ ಮುಖ್ಯಸ್ಥರಾದ ರಿಬಿನ್ ತೌಫೀಕ್, ಕೆ. ಮನ್ಸೂರ್ ಅಲಂ ಮತ್ತು ಶರಿಫುದ್ದೀನ್ ಪಿ ರವರು ಸೇರಿದಂತೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಹಿತೈಷಿಗಳು ಮತ್ತು
ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವರ್ಷ ಭಾರತದಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ 16 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಈ ಹಣವನ್ನು 21,000 ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ವಿತರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ 491 ಕಾಲೇಜುಗಳ 5,501 ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ನೆರವಾಗುವ ದೃಷ್ಟಿಯಿಂದ ಒಟ್ಟು 4.74 ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನವನ್ನು ವಿತರಣೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹಮ್ಮದ್ರವರು, "ಜಗತ್ತಿನ ಬದಲಾವಣೆಗೆ ಶಿಕ್ಷಣ ಒಂದು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ. ನಮ್ಮ ವಿದ್ಯಾರ್ಥಿವೇತನ ಕಾರ್ಯಕ್ರಮವು ಮಲಬಾರ್ ಗ್ರೂಪ್ನ ಆಳವಾದ ಬೇರೂರಿರುವ ನಂಬಿಕೆಯ ನೇರ ಪ್ರತಿಬಿಂಬವಾಗಿದೆ ಶಿಕ್ಷಣವು ಅವಕಾಶಗಳನ್ನು ತೆರೆಯುತ್ತದೆ ಮತ್ತು ಜೀವನವನ್ನು ಪರಿವರ್ತಿಸುತ್ತದೆ. ಯುವ ಹೆಣ್ಣುಮಕ್ಕಳು ತಮ್ಮ ಶೈಕ್ಷಣಿಕ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ'' ಎಂದು ತಿಳಿಸಿದರು.
ಆರಂಭದಿಂದಲೂ ಮಲಬಾರ್ ಗ್ರೂಪ್ ತನ್ನ ಸಾಮಾಜಿಕ ಕಲ್ಯಾಣ ಚಟುವಟಿಕೆಗಳ ಮೂಲಕ ಸಮಗ್ರ ಬೆಳವಣಿಗೆಗೆ ಪೂರಕವಾದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. 1999 ರಲ್ಲಿ ಮಲಬಾರ್ ಚಾರಿಟೆಬಲ್ ಟ್ರಸ್ಟ್(ಎಂಸಿಟಿ) ಅನ್ನು ರಚನೆ ಮಾಡಲಾಯಿತು. ಇದರ ಮೂಲಕ ಸಮಾಜಮುಖಿ ಕಾರ್ಯಗಳನ್ನು (ಎಂ)
ಮಲಬಾರ್ ಗುಂಪು
ಮುಂದುವರಿಸುವುದು ಮತ್ತು ವಿಸ್ತರಣೆ ಮಾಡುವ ಕಾರ್ಯಗಳನ್ನು ನಡೆಸಲಾಗುತ್ತಿದೆ. ಸಮೂಹ ಸಂಸ್ಥೆಯು ತನ್ನ ವಾರ್ಷಿಕ ಲಾಭದ ಶೇ.5 ರಷ್ಟು ಭಾಗವನ್ನು ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಸರ ಸುಸ್ಥಿರತೆ ಮತ್ತು ಬಡತನ ನಿರ್ಮೂಲನೆಯನ್ನು ಒಳಗೊಂಡ ಸಿಎಸ್ಆರ್ ಉಪಕ್ರಮಗಳಿಗೆ ಮೀಸಲಿಡುತ್ತಿದೆ. ಇದು ದುರ್ಬಲ ವರ್ಗದ ಸಮುದಾಯಗಳ ಸಬಲೀಕರಣದ ಉನ್ನತಿಗೆ ಸಹಕಾರಿಯಾಗುತ್ತಿದೆ.
2007 ರಲ್ಲಿ ಆರಂಭವಾದ ಮಲಬಾರ್ ರಾಷ್ಟ್ರೀಯ ವಿದ್ಯಾರ್ಥಿವೇತನ ಕಾರ್ಯಕ್ರಮವು ಅದರ ಸಿಎಸ್ಆರ್ ಚೌಕಟ್ಟಿನಡಿಯಲ್ಲಿ ಕಾರ್ಯಕ್ರಮವನ್ನು ಒಂದು ಅತ್ಯಂತ ಪ್ರಮುಖವಾದ ಉಪಕ್ರಮವಾಗಿದೆ. ಇಲ್ಲಿವರೆಗೆ ಬೆಂಬಲಿಸುವ ನಿಟ್ಟಿನಲ್ಲಿ 60 ಈ ರೂಪಾಯಿಗಳನ್ನು ವಿನಿಯೋಗಿಸಲಾಗಿದ್ದು, ಭಾರತದಾದ್ಯಂತ 95.000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲಾಗಿದೆ ಮತ್ತು ಕರ್ನಾಟಕ ರಾಜ್ಯದ 26.066 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ 16.82 ಕೋಟಿ ರೂಪಾಯಿಗಳ ನೆರವನ್ನು ನೀಡಲಾಗಿದೆ. ವಿದ್ಯಾರ್ಥಿನಿಯರ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮೂಲಕ ಮಲಬಾರ್ ಗ್ರೂಪ್ ವ್ಯಕ್ತಿಗಳನ್ನು ಮಾತ್ರವಲ್ಲದೇ ಇಡೀ ಸಮುದಾಯಗಳ ಜೀವನ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಭವಿಷ್ಯದ ಪೀಳಿಗೆಗಳು ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಾಧನಗಳೊಂದಿಗೆ ಸಜ್ಜುಗೊಂಡಿವೆ ಎಂಬುದನ್ನು ಖಚಿತಪಡಿಸುತ್ತದೆ.
ವಿದ್ಯಾರ್ಥಿವೇತನ ಕಾರ್ಯಕ್ರಮವಲ್ಲದೇ, ಮಲಬಾರ್ ಗ್ರೂಪ್ನ ಹಸಿವು ಮುಕ್ತ ಜಗತ್ತು ಯೋಜನೆಯು ದೇಶದಾದ್ಯಂತದ ದುರ್ಬಲ ವರ್ಗದವರಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಎನ್ಜಿಒಗಳು ಮತ್ತು ಸ್ವಯಂಸೇವಕರ ಪಾಲುದಾರಿಕೆಯನ್ನು ಪಡೆಯಲಾಗುತ್ತಿದೆ. ಈ ಮೂಲಕ ಹಸಿವನ್ನು ಮುಕ್ತಗೊಳಿಸುವುದು ಮತ್ತು ಎಲ್ಲರಿಗೂ ಆಹಾರ ಭದ್ರತೆಯನ್ನು ಒದಗಿಸುವ ಬದ್ಧತೆಯನ್ನು ಈ ಉಪಕ್ರಮ ಹೊಂದಿದೆ. ಪ್ರಸ್ತುತ ದೇಶದ 17 ರಾಜ್ಯಗಳ 81 ನಗರಗಳಲ್ಲಿ ಪ್ರತಿದಿನ 60.000 ಕ್ಕೂ ಅಧಿಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಝಾಂಬಿಯಾ ದೇಶದಲ್ಲಿ ಶಾಲಾ ಮಕ್ಕಳಿಗೆ ಪ್ರತಿದಿನ 10,000 ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದೆ. ಮಲಬಾರ್ ಗ್ರೂಪ್ ಈ ಕಾರ್ಯಕ್ರಮವನ್ನು ಭಾರತದ 200 ಕೇಂದ್ರಗಳಲ್ಲಿ ಪ್ರತಿದಿನ 1.00.000 ಅಧಿಕ ಜನರಿಗೆ ಊಟವನ್ನು ವಿತರಣೆ ಮಾಡಲು ಕಾರ್ಯಕ್ರಮ ರೂಪಿಸಿದೆ. ಈ ಹಸಿವು ಮುಕ್ತ ಜಗತ್ತು ಯೋಜನೆಯನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಯಾದ ಥನಲ್ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.