ಬೆಂಗಳೂರು, ಫೆಬ್ರವರಿ 13, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಭೀಮ್ ಸೇನೆ' (ರಿ.) ಸಂಘಟನೆಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಅವರು ಮಾತನಾಡಿದರು. 

 ಕರ್ನಾಟಕ ರಾಜ್ಯದಲ್ಲಿ 250 ಅಡಿ ಎತ್ತರದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ॥ ಬಿ.ಆ‌ರ್. ಅಂಬೇಡ್ಕ‌ರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಸಮುದಾಯದ ಪರವಾಗಿ ಕರ್ನಾಟಕ ಭೀಮ್ ಸೇನೆ (ರಿ.) ಸಂಘಟನೆ ವತಿಯಿಂದ ರಾಜ್ಯ ಸರ್ಕಾರಕ್ಕೆ, ಒತ್ತಾಯ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಪತ್ರಿಕೆಗಳಲ್ಲಿ ಹಾಗು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟಣೆ ಕುರಿತು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಭೀಮ್ ಸೇನೆ ಸಂಘಟನೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಏನೆಂದರೆ ಈಗಾಗಲೇ...

1. ತೆಲಂಗಾಣ ರಾಜ್ಯದಲ್ಲಿ ಏಪ್ರಿಲ್-14-2023 ರಂದು, 125 ಅಡಿ ಎತ್ತರದ ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ| ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆ ಅನಾವರಣ ಮಾಡಿದ ತೆಲಂಗಾಣ ರಾಜ್ಯದ ಮುಖ್ಯ ಮಂತ್ರಿಗಳಾದ ಕೆ. ಚಂದ್ರಶೇಖರ್ ರಾವ್ ರವರು ಹಾಗು ಮೊತ್ತೊಂದು ರಾಜ್ಯ.

2. ಅಂದ್ರ ಪ್ರದೇಶದ ವಿಜಯವಾಡದಲ್ಲಿ ಜನವರಿ 19-2024 ರಂದು 206 ಅಡಿ ಎತ್ತರದ ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ|| ಬಿ.ಆರ್. ಅಂಬೇಡ್ಕರವರ ಪ್ರತಿಮೆ ಅನಾವರಣ ಮಾಡಿದ ಅಂದ್ರ ಪ್ರದೇಶದ ಮುಖ್ಯ ಮಂತ್ರಿಗಳಾದ ಶ್ರೀ ವೈ.ಎಸ್. ಜಗನ್‌ಮೋಹನ್ ರೆಡ್ಡಿರವರು, ಅದೇ ರೀತಿ

3. ಕರ್ನಾಟಕ ರಾಜ್ಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ರಾಜ್ಯದ ಎಲ್ಲ ಹಿಂದುಳಿದ ಸಮುದಾಯ ಮಹತ್ವದ ಪಾತ್ರ ವಹಿಸಿದೆ, ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ| ಬಿ.ಆರ್. ಅಂಬೇಡ್ಕರವರ 250 ಅಡಿ ಎತ್ತರದ ಪ್ರತಿಮೆ ಬೆಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ಲಾಲ್‌ಬಾಗ್ ಗಾರ್ಡನ್ ಒಟ್ಟು 245 ಎಕರೆ ಹೊಂದಿದ್ದು ಪ್ರತಿಮೆ ನಿರ್ಮಾಣಕ್ಕೆ ಇದು ಸೂಕ್ತ ಸ್ಥಳ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸುತ್ತ

4. ಸುಮಾರು 1 ವರ್ಷದಿಂದ ರಾಜ್ಯವ್ಯಾಪ್ತಿ ಕರ್ನಾಟಕ ಸರ್ಕಾರದ 30 ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ಭೀಮ್ ಸೇನೆ ಸಂಘಟನೆಯ ಜಿಲ್ಲಾದ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ರಾಮಲಿಂಗಯ್ಯ ಹಾಗು ರಾಜ್ಯ ಮುಖಂಡರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರಿಗೆ, ಸಮಾಜಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪರವರಿಗೆ, ಗೃಹ ಮಂತ್ರಿಗಳಾದ ಪರಮೇಶ್ವರ್‌ರವರಿಗೆ, ಪ್ರಿಯಾಂಕಾ ಖರ್ಗೆರವರಿಗೆ, ಸತೀಶ್ ಜಾರಕಿಹೊಳಿರವರಿಗೆ, ಹಾಗು ಸರ್ಕಾರದ ಹಲವು ಸಚಿವರಿಗೆ ಹಾಗು ಶಾಸಕರ ಗಮನಕ್ಕೆ ಹಾಗು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.