ಫೆಬ್ರವರಿ 7, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ' ಸಂಘಟನೆಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನ ಮುನ್ನೇಕೊಳ್ಳಲದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

  ಬೆಂಗಳೂರಿನ ಮುನ್ನೇಕೊಳ್ಳಲದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಭೂ ಪರಿವರ್ತನೆ ಮಾಡಿದ್ದು, ಪರಿವರ್ತನೆಯಾಗಿರುವುದಕ್ಕಿಂತ ಹೆಚ್ಚು ನಿವೇಶನಗಳನ್ನು ಮಾರಿರುವವರ ಮೇಲೆ ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಮೊಕದಮ್ಮೆ ದಾಖಲಿಸಲು ಒತ್ತಾಯಿಸಿ ಮಾರ್ಚ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

 ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಮುನ್ನಕೊಳ್ಳಲ ಸರ್ವೇ ನಂಬರ್ 116 ರಲ್ಲಿ ಸಬ್ಬರಾಮರೆಡ್ಡಿ ಬಿನ್ ಈರಪ್ಪ ರೆಡ್ಡಿ ಎಂಬುವವರಿಗೆ 15 ಗುಂಟೆ ಜಮೀನು ಜಿಲ್ಲಾಧಿಕಾರಿಗಳ ಭೂ ಪರಿವರ್ತನೆ ಹಾಗೂ ಶಾಮಣ್ಣ ರೆಡ್ಡಿ ಬಿನ್ ವೆಂಕಟಪ್ಪ ಎಂಬುವವರಿಗೆ 18.8 ಗುಂಟೆ ಜಮೀನು ಜಿಲ್ಲಾಧಿಕಾರಿಗಳ ಭೂ ಪರಿವರ್ತನೆ ಮತ್ತು ಪ್ರತಿಭಾ ಬಿನ್ ಚಿಕ್ಕಣ್ಣಯ್ಯ ರೆಡ್ಡಿ ಎಂಬುವವರಿಗೆ 4 ಗುಂಟೆ ಜಮೀನು ಒಟ್ಟಾರೆ 37 ಗುಂಟೆ ಜಮೀನು ಜಿಲ್ಲಾಧಿಕಾರಿಗಳ ಭೂ ಪರಿವರ್ತನೆಯಾಗಿರುತ್ತದೆ. ಇದರಲ್ಲಿ 120 ನಿವೇಶನಗಳನ್ನು ಎಂದರೆ ಜಮೀನು ಜಿಲ್ಲಾಧಿಕಾರಿಗಳ ಭೂ ಪರಿವರ್ತನೆ ಆಗದ ಜಮೀನನ್ನು ಸಹ ಭೂ ಪರಿವರ್ತನೆಯಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ 120 ಕ್ಕೂ ನಿವೇಶನಗಳನ್ನು ಬೇರೆ ರಾಜ್ಯದ ಹಾಗೂ ನಮ್ಮ ರಾಜ್ಯದ ನಮ್ಮ ರಾಜ್ಯದ ಜನತೆಗೆ ಮಾರಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾ ಉಪ ವಿಭಾಗಾಧಿಕಾರಿಗಳು ಸಹ ಅನಾಧಿಕೃತ ಬಡಾವಣೆ ಎಂದು ವರದಿ ನೀಡಿರುತ್ತಾರೆ. ಆದುದರಿಂದ ಈ ಕೂಡಲೇ ಪರಿಶೀಲನೆ ನಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ ಕ್ರಿಮಿನಲ್ ಮೊಕದಮೆ ದಾಖಲಿಸಲು ಒತ್ತಾಯಿಸಿ ಹಾಗೂ ಇದೇ ಸರ್ವೇ ನಂ 116 ರಲ್ಲಿ 10 ಎಕರೆ 26 ಗುಂಟೆ ಜಮೀನು ದಲಿತರ ಜಮೀನಾಗಿದ್ದು ಈ ಜಮೀನು ಸರ್ವೇ ನಡೆಸಲು ವಿಳಂಬ ಮಾಡಿತ್ತಿರುವ ತಹಸೀಲ್ದಾರರ ವಿರುದ್ಧ ದಿನಾಂಕ: 05. ಮಾರ್ಚ್ 2025 ರಂದು ಪ್ರತಿಭಟನೆ ನಡೆಯಲಿದೆ.