ಬೆಂಗಳೂರು, ಜನವರಿ 24, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು 'ದಲಿತರ ಪರಿವರ್ತನಾ ಸಮಿತಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಈಸ್ತೂರು ನಾರಾಯಣಪ್ಪ ಅವರು ಮಾತನಾಡಿದರು.
ಬೆಂಗಳೂರಿನ ಹೊಸಕೋಟೆ ತಾಲೂಕಿನ ಈಸ್ತೂರು ಗ್ರಾಮದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರ ಜಮೀನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಈಸ್ತೂರು ನಾರಾಯಣಪ್ಪ ಅವರು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ರಾಳಕುಂಟೆ ಗ್ರಾಮದ ಸರ್ವೆ ನಂ. 29ರಲ್ಲಿ ಈಸ್ತೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಶ್ರೀಮತಿ ಅಕ್ಕಯ್ಯಮ್ಮ ಕೋಂ. ಮಟ್ಟೆಪ್ಪ ಎಂಬುವವರಿಗೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ: 03/10/1998 ರಂದು 4ಎ-20ಗು ಜಮೀನು ಮಂಜೂರು ಮಾಡಿ ಸ್ವಾಧೀನ ಅನುಭವದಲ್ಲಿದ್ದು, ಪಹಣಿ, ಮ್ಯುಟೇಷನ್ ಹಾಗೂ ಎಲ್ಲಾ ಕಂದಾಯ ದಾಖಲೆಗಳು ಇದ್ದು, ಶ್ರೀಮತಿ ಅಕ್ಕಯ್ಯಮ್ಮನು ಮರಣದ ನಂತರ ಇವರ ಮಕ್ಕಳು 7 ಕುಟುಂಬದವರು ಸ್ವಾಧೀನ ಅನುಭವದಲ್ಲಿದ್ದು, ದಿನಾಂಕ: 18/01/2025ರಂದು ತಹಶೀಲ್ದಾರ್ ರವರಾದ ಮಾನ್ಯ ಸೋಮಶೇಖರ್ ಕೆ.ಎ.ಎಸ್. ಹಾಗೂ ಎ.ಡಿ.ಎಲ್.ಆರ್. ಸಂತೋಷ್ ರವರು ನಮ್ಮ ಅನುಭೋಗದ ಜಮೀನಿಗೆ ಬಂದು ಪೋಡಿ ಮಾಡಿಕೊಡುತ್ತೇವೆಂದು ನಮ್ಮ ಸ್ವಾಧೀನಾನುಭವದಲ್ಲಿದ್ದ ಜಮೀನನ್ನು ಅಳತೆ ಮಾಡಿಸಿ ನಿಮ್ಮ ಹೆಸರಿಗೆ ಪೋಡಿ ಮಾಡುತ್ತೇವೆ ಎಂದು ತಿಳಿಸಿ ಎ.ಡಿ.ಎಲ್.ಆರ್. ನಮ್ಮ ಅನುಭೋಗದ ಜಮೀನನ್ನು ಅಳತೆ ಮಾಡುವಾಗ ಪೋಟೋಗಳನ್ನು ತೆಗೆದುಕೊಂಡು ದಿನಾಂಕ: 21/01/2025 ರಂದು ರಾತ್ರಿ ನಮ್ಮಗಳ ಅನುಭೋಗದ ಜಮೀನಿನಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ರಿಯಲ್ ಎಸ್ಟೇಟ್ ರವರಲ್ಲಿ ಒಳ ಒಪ್ಪಂದ ಮಾಡಿಕೊಂಡು ಸದರಿಯವರಿಂದ ಲಂಚ ಪಡೆದು ನಮ್ಮ ಅನುಭವದ ಜಮೀನುಗಳಲ್ಲಿ ಏಕಾಏಕಿ ಅತಿಕ್ರಮ/ಅಕ್ರಮ ಪ್ರವೇಶ ಮಾಡುವಂತೆ ಮಾಡಿ ಪರಿಶಿಷ್ಟ ಜಾತಿಯವರಿಗೆ ಭಾರಿ ನಷ್ಟ / ಅನ್ಯಾಯ ಉಂಟು ಮಾಡಿರುವ ಕರ್ತವ್ಯ ಲೋಪದ ಬಗ್ಗೆ ಮತ್ತು ಕಾನೂನು ಉಲ್ಲಂಘನೆ ಮಾಡಿರುವ ಮತ್ತು ನಮ್ಮ ಜಾತಿಯ ನಿಂಧನೆ ಮಾಡಿರುವ ಕಾನೂನು ರೀತಿಯ ಕ್ರಮ ಜರುಗಿಸಿ ನಮ್ಮ ಜಮೀನಿನಲ್ಲಿ ರಾತ್ರಿ ವೇಳೆ ಅತಿಕ್ರಮ ಪ್ರವೇಶ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನಮ್ಮಗಳಿಗೆ ಸಂವಿಧಾನಿಕ ನ್ಯಾಯ ದೊರಕಿಸಿ ಕೊಡುವ ವಿಚಾರದ ಬಗ್ಗೆ.