ಜನವರಿ 20, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ(ರಿ) ಬೆಂಗಳೂರು' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕರು & ರಾಜ್ಯ ಅಧ್ಯಕ್ಷರಾದ ಡಾ.ಕಟೀಲು ಸಂಜೀವ ಮಡಿವಾಳ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂದು 'ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ(ರಿ) ಬೆಂಗಳೂರು' ಸದಸ್ಯರು ಒತ್ತಾಯಿಸಿದರು.
ಒಕ್ಕೂಟದ ಕಾರ್ಯವ್ಯಾಪ್ತಿ:
ಕರ್ನಾಟಕ ರಾಜ್ಯದ ಎಲ್ಲಾ ತಾಲೂಕು ಮತ್ತು ಗ್ರಾಮಗಳು
•ಒಕ್ಕೂಟದ ಮುಖ್ಯ ಉದ್ದೇಶಗಳು:
* ಒಕ್ಕೂಟದ ಉದ್ದೇಶಗಳಿಗೆ ಸಾರ್ಥಕವಾದ ಮತ್ತು ಅವಶ್ಯಕವಾದ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು.
ಹೊಲಿಗೆ ತರಬೇತಿ, ಗೃಹ ಕೈಗಾರಿಕಾ ತರಬೇತಿ, ಹಾಗೂ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು.
•ಸಂಘಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಳವಡಿಸುವುದು ಪ್ರೋತ್ಸಾಹಿಸುವುದು.
* ಒಕ್ಕೂಟದ ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು. ಒಕ್ಕೂಟದಲ್ಲಿ ಗುರು ಪೂರ್ಣಿಮಾ, ಇತ್ಯಾದಿ ಧಾರ್ಮಿಕ ಪೂಜೆಗಳನ್ನು ನೆರವೇರಿಸುವುದು.
• ಒಕ್ಕೂಟದ ವಸತಿ ಸಮುಚ್ಚಯ / ಕಟ್ಟಡ ಹಾಗೂ ಇದರ ಕಟ್ಟಡ ಉಪಕರಣಗಳನ್ನು ರಕ್ಷಿಸುವುದು ಮತ್ತು ನಿರ್ವಹಣೆ ಮಾಡುವುದು. ಸ್ಥಳೀಯ ಸಂಘ/ಸಮಿತಿ/ ಗುಂಪುಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು. ಒಕ್ಕೂಟವನ್ನು ಬಲಪಡಿಸಲು ಸಹಕರಿಸುವುದು.
* ಸಂಘಗಳ ಯಾವುದೇ ವಿಷಯಗಳು ಲಿಖಿತ ಮೂಲಕ ಬಂದಲ್ಲಿ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು. ಸರಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಾರ್ಯಕ್ರಮದ ಪ್ರಚಾರ ಪಡಿಸುವುದು
•ಸರಕಾರದ ಸೌವಲತ್ತಿನ ಬಗ್ಗೆ ಸಮಾಜ ಭಾಂಧವರಿಗೆ ಮಾಹಿತಿಯನ್ನು ನೀಡಿ ಪ್ರೋತ್ಸಾಹಿಸುವುದು
*ವೆಬ್ ಸೈಟ್ ಜಾಲಾತಾಣ, ಮಾಧ್ಯಮದ ಮೂಲಕ ಒಕ್ಕೂಟದ ವ್ಯವಸ್ಥೆ ಮತ್ತು ಕಾರ್ಯಕ್ರಮದ ಬಗ್ಗೆ ಇತರ ಎಲ್ಲಾ ವಿಷಯಗಳು ಪಾರದರ್ಶಕವಾಗಿರುವಂತೆ ವ್ಯವಸ್ಥೆ
. (www.madivalasamaja.com)
•ಗ್ರಾಮಘಟಕ, ತಾಲೂಕು ಘಟಕ ಮತ್ತು ಜಿಲ್ಲಾ ಘಟಕಗಳು ಪ್ರತೀ ತಿಂಗಳಿನಲ್ಲಿ ಆಯಾಯ ಘಟಕದಲ್ಲಿ ಆಡಳಿತ ಮಂಡಳಿಯ ಸಭೆಯನ್ನು ನಡೆಸುವುದು ಹಾಗು ರಾಜ್ಯ ಘಟಕರ ಕಾರ್ಯಕಾರಿ ಮಂಡಳಿಯ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸುವುದು.
*ವ್ಯವಹಾರವನ್ನು ಜಾಲತಾಣದ ಮೂಲಕವ್ಯವಸ್ಥೆ ಮಾಡುವುದು
ಅಧಾಯ ತೆರಿಗೆ ಇಲಾಖೆ ಯಿಂದ 8OG ಪಡಕೊಂಡು ತೆರಿಗೆ ವಿನಾಯಿತಿಯ ಧೃಡಪತ್ರಿಕೆಯನ್ನು ಪಡಕೊಳ್ಳುವುದು. ಪ್ರತಿ ವರ್ಷ ಲೆಕ್ಕ ಪರಿಶೋಧಕರಿಂದ ಒಕ್ಕೂಟದ ಲೆಕ್ಕಪತ್ರವನ್ನು ಪರಿಶೀಲಿಸಿ ಸಂಘ ಸಂಸ್ಥೆ ನೊಂದಾವಣಿ ಇಲಾಖೆಯಲ್ಲಿ ವರದಿಯನ್ನು ಮಂಡಿಸಿ ಒಕ್ಕೂಟದ ನೊಂದಣಿಯನ್ನು ನವೀಕರಿಸುವುದು
ಹಣಕಾಸು:
ಒಕ್ಕೂಟಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಈ ಕೆಳಗಿನಂತೆ ಪಡೆಯುವುದು.
1 ಸದಸ್ಯತ್ವ, 2 ದೇಣಿಗೆ, 3 ಜಾಹೀರಾತು 4 ನಾಲ, 5 ಸಹಾಯ ಧನ,
6 ಸದಸ್ಯರಿಂದ
7 ಅಭಿಮಾನಿಗಳಿಂದ 8 ಸರಕಾರದಿಂದ, 9 ಹಣಕಾಸು ಸಂಸ್ಥೆಗಳಿಂದ