ಜನವರಿ 13, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ' ಬೆಂಗಳೂರು ರಾಜ್ಯ ಸಮಿತಿ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

   ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ವಿ. ಲೋಕೇಶ್ ಅವರು ಮಾತನಾಡಿದರು. 

  ದಿನಾಂಕ 29/12/2025 ರಂದು KPSC ನಡೆಸಿದ KAS 384 ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳಲ್ಲಿ ಪೂರ್ವಭಾವಿ ಮರುಪರೀಕ್ಷೆ ಬರೆದ ಎಲ್ಲರಿಗೂ 1:100 ಅನುಪಾತದಲ್ಲಿ ಮುಖ್ಯಪರೀಕ್ಷೆ ಬರೆಯಲು ಒಂದು ಬಾರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ವಿ. ಲೋಕೇಶ್ ಅವರು ಒತ್ತಾಯಿಸಿದರು. 

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 29/12/25 ರಂದು ಕೆಪಿಎಸ್‌ಸಿ ನಡೆಸಿದ 384 ಕೆಎಎಸ್ ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ- 01 ರಲ್ಲಿ 32 ಪ್ರಶ್ನೆಗಳು ಹಾಗೂ ಪಕ್ಷಪತ್ರಿಕೆ -02 ರಲ್ಲಿ 27 ಪ್ರಶ್ನೆಗಳು ಸೇರಿ ಒಟ್ಟು 59 ಪ್ರಶ್ನೆಗಳಲ್ಲಿ ಭಾಷಾಂತರ ದೋಷ ಸೇರಿದಂತೆ ಅನೇಕ ತಪ್ಪುಗಳು ಕಂಡು ಬಂದಿವೆ.

ಇಂಗ್ಲೀಷ್‌ನಲ್ಲಿ ಮೂಲ ಪ್ರಶ್ನೆಗಳ ಅರ್ಥಕ್ಕೂ ಕನ್ನಡಕ್ಕೆ ಅನುವಾದಗೊಂಡಿರುವ ಪದಗಳ ಮೂಲ ಅರ್ಥಕ್ಕೂ ಕೆಲವೆಡೆ ಸಂಪೂರ್ಣ ವ್ಯತ್ಯಾಸ ಕಂಡುಬಂದಿದೆ.

ಉದಾ: Pesticide ಗೆ ಕನ್ನಡದಲ್ಲಿ ಕಿಮಿನಾಶಕ ಎಂದು ಬರೆಯುವ ಬದಲು రాయని ఎండు జళ్ళద్యార

ಒಂದೇ ಪ್ರಶ್ನೆಯಲ್ಲಿ ಎರಡು ಮೂರು ಕಡೆ ಅನುವಾದ ದೋಷವಿದ್ದು Import

ಕನ್ನಡದಲ್ಲಿ ರಫ್ತನ್ನೂ ಎಂದು. Incorrect ಗೆ ಕನ್ನಡದಲ್ಲಿ ತಪ್ಪದ ಎಂದು, ಬಳಸಿದ್ದಾರೆ.

ವಾಕ್ಯ ರಚನೆಯಲ್ಲಿ ಸಾಕಷ್ಟು ದೋಷಗಳಿದ್ದು ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಸುಲಭವಾಗಿ ಗ್ರಹಿಸಿ ಅರ್ಥಮಾಡಿಕೊಳ್ಳದಷ್ಟು ಅನುವಾದ ಕಷ್ಟಕರವಾಗಿದೆ.

ಆಧ್ಯಾರೊಹಿಸಬಹುದು ಮತ್ತು ದೀಪರ್ಯ ಉಂಟಾಗುತ್ತಿಲ್ಲ. ಸ್ವಾಯಿಕ ಪುನರಂ ಅವರ ಲೋಕನ ವಿಮರ್ಶಿ ಬಾಂಡಿನ ಪ್ರತಿಫಲವು ಪ್ರತಿಲೋಮವಾಗಿರುವ ಅದರ ಬೆಲೆಗೆ ಸಂಬಂಧಪಟ್ಟಿದೆ.

ಭಾರತದಲ್ಲಿನ ಸ್ಥಾಯಿಕ ಪುನರಂರವರ ಲೋಕನ ವಿಮರ್ಶೆ ಅಧಿಕಾರವು ಉಚ್ಚನ್ಯಾಯಾಲಯದೊಂದಿಗೆ, ಇಂತಹ ಅನೇಕ ವಾಕ್ಯಗಳಿದ್ದು ಇವುಗಳು 10 ಕನ್ನಡ ಮಾದ್ಯಮದ అభగవాగబయదు. ಅಭ್ಯರ್ಥಿಗಳಿಗೆ ಅರ್ಥವಾಗುವುದಿಲ್ಲ. ವಾಕ್ಯಗಳು ಅನ್ಯಗ್ರಹದ ಜೀವಿಗಳಿಗೆ ಮಾತ್ರ

ಕೆಲವಾರು ಕಡೆ ಇಂಗ್ಲೀಷ್ ಪದವನ್ನು ಕನ್ನಡಕ್ಕೆ ಅನುವಾದ ಮಾಡದೇ ಹಾಗೆಯೇ ಕನ್ನಡದಲ್ಲಿ ಬರೆದಿದ್ದಾರೆ.

Bioremidiation ಪದವನ್ನು ಕನ್ನಡದಲ್ಲಿ ಬಯೋರೆಮಿಡಿಯೇಷನ್ ಎಂದು ಮುದ್ರಣ ಮಾಡಲಾಗಿದ್ದು ಇಂತಹ ಅನೇಕ ಪದಗಳು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಹೇಗೆ ಅರ್ಥವಾಗುತ್ತದೆ?.

ಚಾಲ್ತಿಯಲ್ಲಿರುವ ಪರ್ಯಾಯ ಪದಗಳನ್ನು ಬಳಸದೆ ಹಳೆಯ, ಸವಕಲು ಪದಗಳನ್ನು ಬಳಸಿದ್ದಾರೆ. ಅಧಿವೇಶನವನ್ನು

ಉಪವೇಶನ ಎಂದು ಬಳಸಿದ್ದಾರೆ.

ಆಯೋಗದಲ್ಲಿ ಪ್ರತ್ಯೇಕ ಭಾಷಾಂತರ ವಿಭಾಗ ಇಲ್ಲದಿರುವುದು ಹಾಗೂ ಕನ್ನಡದಲ್ಲಿ ಮೊದಲು ಪ್ರಶ್ನೆಪತ್ರಿಕೆ ತಯಾರಿಸಿ ನಂತರ ಇಂಗ್ಲೀಷ್‌ಗೆ ಭಾಷಾಂತರ ಮಾಡದಿರುವುದು ಈ ರೀತಿಯ ಅನಾಹುತಗಳಿಗೆ ಕಾರಣವಾಗಿದೆ.

ಕೆಪಿಎಸ್‌ಸಿಯ ಈ ನಡೆಯಿಂದ ಕನ್ನಡ ಮಾಧ್ಯಮವ, ಗ್ರಾಮೀಣ ಪ್ರದೇಶದ ಕೆಎಎಸ್ ಆಕಾಂಕ್ಷಿಗಳಿಗೆ ಭಾರಿ ಅನ್ಯಾಯವಾಗಿದ್ದು, ಇಂಗ್ಲೀಷ್ ಮಾಧ್ಯಮದ ಅಭ್ಯರ್ಥಿಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟಿದ್ದು 2000 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳು, ಕೆಎಎಸ್ ಅಧಿಕಾರಿಗಳು ಆಗದಂತೆ ಕೆಪಿಎಸ್‌ಸಿ ಅಧಿಕಾರಿಗಳು ಷಡ್ಯಾಂತರ ಮಾಡಿದ್ದಾರೆ.

ಶೇ 45 ರಿಂದ 50 ರಷ್ಟು ಲೋಪದೋಷಗಳನ್ನು ಬೆಂಗಳೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರ ಪತ್ತೆ ಮಾಡಿದೆ.

ಮುಂದುವರೆದು ದಿನಾಂಕ 29-12-2024 ರಂದು ನಡೆದ ಪೂರ್ವಭಾವಿ ಮರುಪರೀಕ್ಷೆಯಲ್ಲಿ ವಿಜಾಪುರ, ಕೋಲಾರ, ಹಾಗೂ ರಾಮನಗರ ಜಿಲ್ಲೆಗಳಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಸಾವಿರಾರು ಅಭ್ಯರ್ಥಿಗಳಿಗೆ ಬೇರೆ, ಬೇರೆ ಅಭ್ಯರ್ಥಿಗಳ OMR Sheet ಗಳನ್ನು ಅದಲು ಬದಲು ಮಾಡಿ ನೀಡಿದ್ದು, ಅಂದರೆ ಬಾ‌ರ್ ಕೋಡ್ ನಲ್ಲಿ "ಎ" ಅಭ್ಯರ್ಥಿಯ ನೊಂದಣಿ ಸಂಖ್ಯೆ ಇರುವ OMR Sheet ಅನ್ನು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದ "ಬಿ" ಅಭ್ಯರ್ಥಿಗಳಿಗೆ ನೀಡಿ ಪರೀಕ್ಷೆ ಬರೆಸಿದ್ದು "ಬಿ" ಅಭ್ಯರ್ಥಿಯ ನೊಂದಣಿ ಸಂಖ್ಯೆಯನ್ನು OMR Sheetನಲ್ಲಿ ಬರೆಸಿಕೊಂಡಿದ್ದು ಈ OMR Sheet ಗಳನ್ನು ಕಂಪ್ಯೂಟರ್‌ನಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಕೈಯಿಂದ ಮೌಲ್ಯಮಾಪನ ಮಾಡಿದರೆ ಯಾವ ಅಭ್ಯರ್ಥಿಯ ಅಂಕವನ್ನು ಯಾರಿಗೆ ನಮೂದಿಸುತ್ತಾರೆ. ಇದರಲ್ಲಿ ಅವ್ಯವಹಾರ ನಡೆಯುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಇದೆ?. ಈ ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈ ರೀತಿಯ ಎಲ್ಲಾ ಲೋಪದೋಷಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ದಿನಾಂಕ 29-12-2024 ರಂದು ನಡೆಸಿದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ರದ್ದು ಮಾಡಿ. ಕನ್ನಡ ಭಾಷಾಂತರದಲ್ಲಿ ತಪ್ಪು ಆಗದಂತೆ, ಮತ್ತೊಮ್ಮೆ ಪೂರ್ವಭಾವಿ ಪರೀಕ್ಷೆ ನಡೆಸುವಂತೆ ಕೆಪಿಎಸ್‌ಸಿ ಗೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ 1997ರವರೆಗೆ ಕೆಎಎಸ್ ಹುದ್ದೆಗಳಿಗೆ ಸರ್ಕಾರ ಪೂರ್ವಭಾವಿ ಪರೀಕ್ಷೆ ನಡೆಸದೇ ನೇರವಾಗಿ ಮುಖ್ಯಪರೀಕ್ಷೆ ನಡೆಸಿದ್ದು, ಪೂರ್ವಬಾವಿ ಪರೀಕ್ಷೆಯಲ್ಲಿ ಪದೇ ಪದೇ ತಪ್ಪುಗಳು ಮರುಕಳಿಸುತ್ತಿರುವುದರಿಂದ ಈ ಒಂದು ಅಧಿಸೂಚನೆಗೆ ಅನ್ವಯವಾಗುವಂತೆ, ದಿನಾಂಕ 29-12-2024 ರಂದು ಪೂರ್ವಬಾವಿ ಮರು ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೂ 15100 ಮಾದರಿಯಲ್ಲಿ ಮುಖ್ಯಪರೀಕ್ಷೆ ಬರೆಸುವಂತೆ, ಕೆಪಿಎಸ್‌ಸಿ ಗೆ ನಿರ್ದೇಶನ ನೀಡುವಂತೆ ಸನ್ಮಾನ್ಯ ಮುಖ್ಯಮಂತ್ರಿಯವರಾದ ಮಾನ್ಯ ಶ್ರೀ ಸಿದ್ದರಾಮಯ್ಯರವರನ್ನು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ(ರಿ) ಜಿ. ಆಗ್ರಹಿಸುತ್ತದೆ.