ಜನವರಿ 3, 2024
ಬೆಂಗಳೂರಿನ ಕೆ.ಆರ್. ಪುರಂ ನ ಶ್ರೀ ವೆಂಕಟೇಶ್ವರ ಶಾಲೆಯಲ್ಲಿ '47ನೇ ವರ್ಷದ ವಾರ್ಷಿಕೋತ್ಸವ'ದ ಪ್ರಯುಕ್ತ "ಕಲಾ ಸೌರಭ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಬೈರತಿ ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿಎನ್ ಗೋವಿಂದಪ್ಪ, ಶ್ರೀ ವೆಂಕಟೇಶ್ವರ ಶಾಲಾ ಸಂಸ್ಥೆಯ ಮುಖ್ಯಸ್ಥರಾದ ಕೆ.ವಿ. ಮುನಿಸ್ವಾಮಿ ಅವರು ಉಪಸ್ಥಿತರಿದ್ದರು.
ಉತ್ತಮ ಶೈಕ್ಷಣಿಕ ಪ್ರಗತಿಗೆ ಶ್ರೀ ವೆಂಕಟೇಶ್ವರ ಶಾಲೆಯು ಒಂದು ನಿದರ್ಶನವಾಗಿದೆ ಎಂದು ಶಾಸಕರಾದ ಬೈರತಿ ಬಸವರಾಜ ಅವರು ಅಭಿಪ್ರಾಯಪಟ್ಟರು.
ಶ್ರೀ ವೆಂಕಟೇಶ್ವರ ಶಾಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದು ಅತ್ಯುತ್ತಮ ಶಾಲಾ ಶಿಕ್ಷಕರಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿಎಂ ಗೋವಿಂದಪ್ಪ ಅವರು ಹೇಳಿದರು.
ಎಲ್ಲಾ ಮಕ್ಕಳ ಸರ್ವತೋಮುಖ ಪ್ರಗತಿಗೆ
ಶ್ರೀ ವೆಂಕಟೇಶ್ವರ ಶಾಲಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ವೆಂಕಟೇಶ್ವರ ಶಾಲೆಯ ಪ್ರಮುಖರಾದ ರವಿ ಅವರು ತಿಳಿಸಿದರು.
ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ವೆಂಕಟೇಶ್ವರ ಶಾಲಾ ಮಕ್ಕಳು ಹಾಗೂ ಪೋಷಕರು ಭಾಗಿಯಾಗಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಈ ಸಂದರ್ಭದಲ್ಲಿ ನಡೆಯಿತು.