ಡಿಸೆಂಬರ್ 30, 2024 

ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಆಯೋಜಿಸಿದ್ದ '25ನೇ ವರ್ಷದ ಅವರೆಬೇಳೆ ಮೇಳ'ದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗಿಯಾಗಿದ್ದರು. 

ಅವರೆಬೇಳೆ ಮೇಳದಲ್ಲಿ ಪಾಲ್ಗೊಂಡು ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ರುಚಿರುಚಿಯಾದ ಅವರೆ ತಿನಿಸುಗಳನ್ನು ಸವಿದೆ. ವ್ಯಕ್ತಿ, ಸ್ಥಳ, ವಿಷಯ ಎಲ್ಲವನ್ನೂ ಮನುಷ್ಯ ಮರೆಯಬಹುದು ಆದರೆ ರುಚಿಯನ್ನು ಮರೆಯುವುದು ಅಸಾಧ್ಯ ಡಿ.ಕೆ. ಶಿವಕುಮಾರ್ ಎಂದು ತಿಳಿಸಿದರು. 

  ವಾಸವಿ ಕಾಂಡಿಮೆಂಟ್ಸ್ ಅವರು ಕೊಟ್ಟಿದ್ದ ಅವರೆ ಕುರುಕು ತಿನಿಸುಗಳನ್ನು ಕಾರಿನಲ್ಲಿಟ್ಟುಕೊಂಡಿದ್ದೆ. ಆ ರುಚಿ ಇಲ್ಲಿಯವರೆಗೂ ನನ್ನನ್ನು ಕರೆದುಕೊಂಡು ಬಂದಿದೆ. ಮಾಗಡಿಯಲ್ಲಿ ಬೆಳೆಯುವ ಅವರೆಕಾಯಿ ತುಂಬಾ ವಿಶೇಷ. ಅದರಲ್ಲಿ ಸೊಗಡು ಜಾಸ್ತಿ. ನನಗಂತೂ ಮಾಗಡಿ ಅವರೆ ಅಂದ್ರೆ ಬಲು ಅಚ್ಚುಮೆಚ್ಚು. ನಮ್ಮನೆಯಲ್ಲೂ ಆಗಾಗ್ಗೆ ಅವರೆಕಾಳು ಸಾರು, ಪಲ್ಯ ಮಾಡುತ್ತೇವೆ, ನಾನಂತೂ ಬಲು ಇಷ್ಟಪಟ್ಟು ತಿನ್ನುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.