ಡಿಸೆಂಬರ್ 26, 2024

ಕರ್ನಾಟಕ ರಾಜ್ಯ ಅರಣ್ಯ ಮತ್ತು ನೀರಾವರಿ ಇಲಾಖೆ. ದಿನಗೂಲಿ/ಗುತ್ತಿಗೆ ನೌಕರರ ಸಂಘದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಪಂಚಾಕ್ಷರಯ್ಯ ಗಣಾಚಾರಿ ಅವರು ಮಾತನಾಡಿದರು. 

 ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಪಂಚಾಕ್ಷರಯ್ಯ ಗಣಾಚಾರಿ ಅವರು ಮಾಧ್ಯಮಗಳಿಗೆ ತಿಳಿಸಿದರು. 

ಬೆಂಗಳೂರು: ಮಹಾತ್ಮ ಗಾಂಧೀಜಿಯವರ ಮೂರನೇ ಯುಗ ಗಾಂಧೀಜಿಯವರ ಕನಸಿನ ಭಾರತ

ಗ್ರಾಮ ಸ್ವರಾಜ್ಯ ಸರ್ವೋದಯ ಸಮಾಜ ರಚನೆಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕರ್ನಾಟಕವನ್ನು ಸುರಾಜ್ಯವನ್ನಾಗಿ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾರ್ಯಕ್ರಮಗಳು ಸಮಯೋಚಿತವಾಗಿ ಕರ್ನಾಟಕದಲ್ಲಿ ಅನುಷ್ಠಾನ ಗೊಂಡಿವೆ. ಅಲ್ಲದೆ ಹಿಂದುಳಿದ ವರ್ಗಗಳ ಅಗ್ರ ನಾಯಕರಾದ ಸಿದ್ದರಾಮಯ್ಯನವರ ಪ್ರತಿಮೆಯನ್ನು ಗಂಡು ಮೆಟ್ಟಿದ ಸ್ಥಳ ಬೆಳಗಾವಿಯಲ್ಲಿ 50 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿಲ್ಲಿಸಲಾಗುವುದೆಂದು ಸರ್ವೋದಯ ಧುರೀಣ ಪಂಚಾಕ್ಷರಯ್ಯ ಗಣಾಚಾರಿ ಯವರು ತಿಳಿಸಿದ್ದಾರೆ.

1947ರಲ್ಲಿ ಭಾರತವನ್ನು ಜಾಗೃತಗೊಳಿಸಿ ಗಾಂಧೀಜಿಯವರು ತಮ್ಮದೇ ಆದ ತತ್ವಗಳಾದ ಶಾಂತಿ, ಅಹಿಂಸೆ, ಪ್ರೇಮ ಇವೆಲ್ಲವುಗಳ ಮೂಲಕ ಬ್ರಿಟಿಷರಿಂದ ಸ್ವಾತಂತ್ರ ಪಡೆದಿದ್ದು ಇತಿಹಾಸವಾಗಿದೆ. ಇದು ಮೊದಲ ಯುಗವಾಗಿ ಭಾರತದಾಧ್ಯಂತ ಜನರು ಸುಖಶಾಂತಿಯಿಂದ ನೆಲೆಸುವಂತಾಯಿತು.

ನಂತರದ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರ ಎರಡನೇ ಯುಗ ಕರ್ನಾಟಕದ ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲ್ಲೂಕು, ಕಲಾಳ ಗ್ರಾಮದಲ್ಲಿ ತತ್ವಗಳ ಅನುಷ್ಠಾನ ಮಾಡಿದ ಸರ್ವೋದಯ ಸಂತ ನೀಲಕಂಠಯ್ಯ ಗೊಡಚಯ್ಯ ಗಣಾಚಾರಿ ಯವರ ನೇತೃತ್ವದಲ್ಲಿ ಗ್ರಾಮದ ಜನರು ಸ್ವಾವಲಂಬಿಗಳಾಗಿ ಹತ್ತಿ ಬೆಳೆದು ಬಟ್ಟೆ ತಯಾರಿಸಿ ಶುದ್ಧ ಖಾದಿದಾರಿಗಳಾದರು.