ಡಿಸೆಂಬರ್ 17, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಎಚ್.ಕೆ.ಜಿ.ಎನ್. ಗ್ರಾನೈಟ್ಸ್ ಮಾಲೀಕರದ ರಫೀಕ್ ಮೊಹಮ್ಮದ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಬಿ.ಬಿ.ಎಂ.ಪಿ. ಸಿಬ್ಬಂದಿ ಬೆಂಗಳೂರಿನ ತ್ಯಾಜ್ಯವನ್ನು ಅನಧಿಕೃತವಾಗಿ ನಮ್ಮ ಕಲ್ಲು ಗಣಿಯಲ್ಲಿ ಸುರಿಯುತ್ತಿದ್ದಾರೆಂದು ರಫೀಕ್ ಮೊಹಮ್ಮದ್ ಅವರು ಆರೋಪಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಕಣ್ಣೂರು ಗ್ರಾಮದ ಸರ್ವೆ ನಂ. 50 ರಲ್ಲಿ ಕಲ್ಲು ಗಣಿ ಕ್ವಾರಿ ಲೈಸೆನ್ಸ್ 292 ಮತ್ತು ಅದಕ್ಕೆ ಹೊಂದಿಕೊಂಡಂತೆ ಕಲ್ಲು ಗಣಿ ಕ್ರಷರ್ ಲೈಸನ್ಸ್ ನಂ. ಾ ಸ್ಥಾಪಿಸಿದ್ದು, ಸದರಿ ಸ್ಥಳ ಊರಿನಿಂದ ಸುಮಾರು 1 ರಿಂದ 1.5 ಕಿ.ಲೋ ದೂರದಲ್ಲಿದ್ದು ಹಾಗೂ ಗ್ರಾಮ ಜನ ಮತ್ತು ವಸತಿ ಪ್ರದೇಶ ಹೊಂದಿಕೊಂಡಂತೆ ಇರುವ ಸರ್ಕಾರಿ ಜಮೀನಿನಲ್ಲಿ ಹಾಗೂ ನ್ಯಾಯಾಲಯದ ಆದೇಶ ಸಿವಿಲ್ ದಾವೆ 1994/2024 ಆದೇಶ ಉಲ್ಲೇಂಘಿಸಿ ಅನಧಿಕೃತವಾಗಿ ಬಿ.ಬಿ.ಎಂ.ಪಿ. ಯವರು ಬೆಂಗಳೂರಿನ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯುತ್ತಿರುವ ಬಗ್ಗೆ ಸಾರ್ವಜನಿಕ ದೂರು.
ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಕಣ್ಣೂರು ಗ್ರಾಮದ ಸರ್ವೆ ನಂ. 50 ಸರ್ಕಾರಿ ಗೋಮಾಳ ಜಮೀನಾಗಿದ್ದು ಒಟ್ಟು 178 ಏಕರೆ ವಿಸ್ತೀರ್ಣ ಇದ್ದು, ಸದರಿ ಜಮೀನಿನಲ್ಲಿ 50 ಎಕರೆ ಬಿಎಂಟಿಸಿಗೆ ಮಂಜೂರಾಗಿದ್ದು, 20 ಎಕರೆ ಬಿಬಿಎಂಪಿಗೆ ಮಂಜೂರಾಗಿದೆ. ಉಳಿಕೆ ಜಮೀನಿನಲ್ಲಿ ಕಲ್ಲು ಗಣಿಕಾರ್ಯ ನಡೆಯುತ್ತಿದೆ ಹಾಗೂ ಕಲ್ಲು ಗಣಿಕಾರ್ಯದ ಲೈಸೆನ್ಸ್ ಪರವಾನಗೆ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಸದರಿ ಜಮೀನಿನಲ್ಲಿ 0-35 ಗುಂಟೆ ಕಲ್ಲು ಗಣಿ ಲೈಸೆನ್ಸ್ ನಂ. 292 ರಂತೆ ಎಂ ಸ್ಯಾಂಡ್‌ಗಾಗಿ ಅರ್ಜಿ ಸಲ್ಲಿಸಿದ್ದು, ಬಿ.ಫಾರ್ಮ ಸಹ ದೊರೆತ್ತಿದ್ದು. ಅದಕ್ಕೆ ಹೊಂದಿಕೊಂಡಂತೆ ಕಲ್ಲು ಗಣಿ ಕ್ರಷರ್ ಲೈಸೆನ್ಸ್ ನಂ. 20 ರಲ್ಲಿ ಪ್ಯಾಕ್ಟರಿ ನಿರ್ಮಿಸಿದ್ದು ಸದರಿ ಪ್ಯಾಕ್ಟರಿ ಮಿಷನ್‌ಗಾಗಿ ಸುಮಾರು 2 ಕೋಟಿ ಸಾಲ ಪಡೆದು ಪ್ಯಾಕ್ಟರಿ ನಿರ್ಮಿಸಿದ್ದು, ಬಿಬಿಎಂಪಿಯವರು ಅನಧಿಕೃತವಾಗಿ ತ್ಯಾಜ್ಯ ಸುರಿದಿದ್ದರಿಂದ ಸದರಿ ಮಿಷನ್ ಅನುಪಯುಕ್ತವಾಗಿ ತುಕ್ಕು ಹಿಡಿದಿದ್ದು ಹಾಗೂ ಅದಕ್ಕೆ ಹೊಂದಿಕೊಂಡಂತೆ ಎಂ ಸ್ಯಾಂಡ್‌ಗಾಗಿ ಅರ್ಜಿ ಸಲ್ಲಿಸಿದ್ದು ನನ್ನ ಅರ್ಜಿಯು ನವೀಕರಣಾಂತದಲ್ಲಿರುತ್ತದೆ. ನನ್ನ ಪ್ಯಾಕ್ಟರಿ ಮತ್ತು ಲೈಸನ್ಸ್‌ಗಾಗಿ ಸಲ್ಲಿಸಿರುವ ಜಮೀನಿನಲ್ಲಿ ಬಿಬಿಎಂಪಿರವರು ಗಣಿ ಗುತ್ತಿಗೆ ಪ್ರದೇಶದಲ್ಲಿ ಅನಧಿಕೃತವಾಗಿ ಬೆಂಗಳೂರಿನ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯಲು ಪ್ರಯತ್ನ ಪಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಕ್ಕೆ ನನ್ನ ಮೇಲೆ ಅಂದರೆ ರಫೀಕ್ ಅಹ್ಮದ್ ಹಲ್ಲೆಗೆ ಪ್ರಯತ್ನಿಸಿದರು ಹಾಗೂ ಸದರಿ ನಾನು ಪ್ರದೇಶದಲ್ಲಿ ಗಣಿ ಕಾರ್ಯ ಮಾಡುತ್ತಿರುವ ಬಗ್ಗೆ ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆನನ್ನ ಪರ ಗಣಿ ಪ್ರದೇಶದಲ್ಲಿ ಕಸ ಸುರಿಯದಂತೆ బిబిఎంపి ಇಂಜಿನಿಯರ್ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಮನವಿ ಮಾಡಿ ಕಸ ಸುರಿಯದಂತೆ ಮನವಿ ಮಾಡಿಕೊಂಡಿದ್ದರು ಹಾಗೂ ಈ ಬಗ್ಗೆ ನಾನು ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್. ನಂ. 1994/2024 ನ್ನು ಸಲ್ಲಿಸಿ ಸದರಿ ದಾವೆಯಲ್ಲಿ బిబిఎంసి ಕಸಸುರಿಯದಂತೆ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಆದೇಶ ಪಡೆದಿದ್ದೇವೆ ಮತ್ತು ಎಂ.ಸ್ಯಾಂಡ್‌ಗಾಗಿ ಸಲ್ಲಿಸಿರುವ ಲೈಸೆನ್ಸ್ ಜಾಗದ ತಡೆಯಾಜ್ಞೆಗಾಗಿ ಸಿವಿಲ್ ದಾವೆ ಓ.ಎಸ್. ನಂ. 2028/2024 ಸಲ್ಲಿಸಿದ್ದೇನೆ ಅದರಲ್ಲಿ ಬಿಬಿಎಂಪಿಯವರಿಗೆ ತುರ್ತು ನೋಟಿಸ್ ಜಾರಿಯಾಗಿದೆ. ಈಗಿದ್ದರೂ ಸಹ ಅನಧಿಕೃತವಾಗಿ ಕಸಸುರಿಯಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಮಂಜೂರಾಗಿರುವ ಜಮೀನು ಪೋಡಿಯಾಗಿ ಯಾವ ಜಾಗದಲ್ಲಿ ನಿರ್ದಿಷ್ಟವಾಗಿ ದಿನಾಂಕ:
ಬರುತ್ತದೆ ಎಂದು ನಿಗಧಿ ಪಡಿಸದೆ ಇದ್ದರೂ ಸಹ ಅನಧಿಕೃತವಾಗಿ ಸುಮಾರು 60-70 ಎಕರೆ ಜಾಗದಲ್ಲಿ ಅನಧಿಕೃತವಾಗಿ ಬೆಂಗಳೂರಿನ ತ್ಯಾಜ್ಯ ಕಸವನ್ನು ಸುರಿಯುತ್ತಿರುವುದರಿಂದ ನನ್ನ ಗಣಿಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಸದರಿ ಜಾಗ ಗ್ರಾಮಕ್ಕೆ ಹಾಗೂ ಜನ ವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವುದರಿಂದ ಹಲವಾರು ಸಾಂಕ್ರಮಿಕ ರೋಗಗಳು ಹಾಗೂ ಸಾಕು ಪ್ರಾಣಿಗಳ ಜೀವಕ್ಕೆ ತೊಂದರೆ ಆಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಸದರಿ ಸ್ಥಳದಲ್ಲಿ ಅನಧಿಕೃತವಾಗಿ ಬಿಬಿಎಂಪಿ ಕಸ ಸುರಿಯದಂತೆ ತಿಳಿಸಬೇಕೆಂದು ರಫೀಕ್ ಅವರು ಒತ್ತಾಯಿಸಿದರು.