ಡಿಸೆಂಬರ್ 12, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ದೇವಾಂಗ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ನೇಕಾರಿಕೆಯನ್ನು ಕುಲವೃತ್ತಿಯನ್ನಾಗಿ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗಿರುವ ದೇವಾಂಗ ಸಮುದಾಯದ ಪುರಾಣ ಪುರುಷ "ಶ್ರೀ ದೇವಲ ಮಹರ್ಷಿ"ರವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ, ಹೇಮಕೂಟ, ಹಂಪಿ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘ (ರಿ), ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ: 15-12-2024 ರಂದು ನೆಲಮಂಗಲದ ಕೆಂಪಲಿಂಗನಹಳ್ಳಿಯಲ್ಲಿರುವ ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠದ ಶಾಖಾಮಠದ ದೇವಾಂಗ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ, ಹೇಮಕೂಟ, ಹಂಪಿಯ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಇವರು ವಹಿಸುತ್ತಿದ್ದು, ರಾಜ್ಯಸಭಾ ಸದಸ್ಯರಾದ ಶ್ರೀ ಕೆ. ನಾರಾಯಣರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಶ್ರೀ ದೇವಲ ಮಹರ್ಷಿ ಪುರಾಣ ಪುರಷರಾಗಿದ್ದು ಶಿವನಿಗೆ ವಸ್ತ್ರವನ್ನು ಕೊಟ್ಟ ಹೆಗ್ಗಳಿಕೆ ಇವರದ್ದಾಗಿದೆ. ಈ ಮೂಲಕ ಸಮಾಜದ ನಾಗರೀಕ ಸಮುದಾಯಕ್ಕೂ ಬಟ್ಟೆಯನ್ನು ತೊಡುವ ನಾಗರೀಕತೆಗೆ ಶ್ರೀ ದೇವಲ ಮಹರ್ಷಿ ಕಾರಣೀಭೂತರಾಗಿದ್ದಾರೆ. ನೇಕಾರ ಸಂತ, ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಹಾಗೂ ಶ್ರೀ ದೇವಲ ಮಹರ್ಷಿ ಇವರಿಬ್ಬರೂ ದೇವಾಂಗ ಸಮುದಾಯದ ಎರಡು ಕಣ್ಣುಗಳು ಎಂಬಂತೆ ಸಮುದಾಯದವರು ಭಾವಿಸಿ ಪೂಜನೀಯ ಗೌರವವನ್ನು ಕೊಟ್ಟಿರುತ್ತಾರೆ
ಅಲ್ಲದೇ ಶಿವನ ಅಂಶದಿಂದ ಅವತರಿಸಿದ ಏಳು ಮಹಾನ್ ಸತ್ಪುರುಷರಲ್ಲಿ "ಶ್ರೀ ದೇವಲ ಮಹರ್ಷಿ ಮತ್ತು ಶ್ರೀ ದೇವರ ದಾಸಿಮಯ್ಯ" ರವರುಗಳನ್ನು ಅಗ್ರಪಂಕ್ತಿಯಲ್ಲಿ ಗುರುತಿಸಲಾಗಿದೆ. ದೇವಾಂಗ ಸಮುದಾಯ ನಾಡಿನಾದ್ಯಂತ "ಶ್ರೀ ದೇವಲ ಮಹರ್ಷಿ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದು, ಇದೇ ಮೊದಲಬಾರಿಗೆ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ದೇವಾಂಗ ಸಂಘವು ರಾಜ್ಯಮಟ್ಟದಲ್ಲಿ “ಶ್ರೀ ದೇವಲ ಮಹರ್ಷಿ" ಜಯಂತಿಯನ್ನು ಆಚರಿಸುತ್ತಿದೆ.
ಜಯಂತ್ಯೋತ್ಸವದ ಸವಿ ನೆನಪಿಗಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿರುವ ಒಟ್ಟು 24 ಮಹನೀಯರುಗಳಿಗೆ ಶ್ರೀಗಳ ಅಮೃತ ಹಸ್ತದಿಂದ " ದೇವಾಂಗ ರತ್ನ" ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಶ್ರೀಯುತರುಗಳಾದ ಎಣ್ಣೆಗೆರೆ ಶ್ರೀ ವೈ.ವಿ. ಶ್ರೀನಿವಾಸಮೂರ್ತಿ-ಬೆಂಗಳೂರು, ಶ್ರೀ ಪಿ. ಆರ್. ಗಿರಿಯಪ್ಪ-ಶಿವಮೊಗ್ಗ, ಹಿರಿಯ ಚೇತನ ಶ್ರೀ ಜೆ.ಕೆ. ಶ್ರೀನಿವಾಸಮೂರ್ತಿ-ಚಿಕ್ಕಬಳ್ಳಾಪುರ, ಶ್ರೀ ಬಿ. ಮೋಹನ್ ಕೊಳ್ಳೇಗಾಲ, ಶ್ರೀ ಕಮಲಾಕ (ಸ್ಥಿತಿ)-ಮಂಗಳೂರು, ಶ್ರೀ ಬಿ. ರಾಜಶೇಖರ್-ಚಿಕ್ಕಬಳ್ಳಾಪುರ ಶ್ರೀ ಭೋರತಿ ರಮೇಶ್ ಮಡಿಕೇರಿ ಸೇರಿದಂತೆ ಹಲವು ಮಹನೀಯರುಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀಮಠದ ಕನಸಿನ ಯೋಜನೆಯಾದ "ರತ್ನಾಮೃತ ನಿತ್ಯ ಅನ್ನದಾಸೋಹ ಸನ್ನಿಧಿಗೆ ಚಾಲನೆ ನೀಡಲಾಗುತ್ತಿದ್ದು, ಬೆಂಗಳೂರಿನ ಹೆಸರಾಂತ ಡೆವಲಪರಾದ ತತಮವಾಂಗ ಕುಲರತ್ನ, ರತ್ನ ಮಹಲ್ ಬಿಲ್ಡರ್‌ನ ಮಾಲೀಕರಾದ ಶ್ರೀ ಎಂ.ವಿ.ಸಿ. ಹನುಮಂತಯ್ಯರವರು ಅನ್ನ ದಾಸೋಹದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದು, ಶ್ರೀಮಠಕ್ಕೆ ಆಗಮಿಸುವ ಸಮಾಜದ ಸದ್ಭಕ್ತರಿಗೆ ನಿತ್ಯ ದಾಸೋಹ ಲಭಿಸಲಿದೆ. ಅಲ್ಲದೇ ಈ ಐತಿಹಾಸಿಕ ಸಮಾರಂಭದಲ್ಲಿ ರಾಜ್ಯ ದೇವಾಂಗ ಸಂಘದ ಮಹಿಳಾ ಘಟಕ, ಯುವ ಘಟಕ ಮತ್ತು ವಧು-ವರರ ಮಾಹಿತಿ ಕೇಂದ್ರಗಳಿಗೂ ಶ್ರೀಗಳು ಚಾಲನೆ ನೀಡಲಿದ್ದಾರೆ.
: ಎಲ್ಲಾ ಅರ್ಥಪೂರ್ಣ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ರಾಜ್ಯ ದೇವಾಂಗ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಈ ರವೀಂದ್ರ ಪಿ. ಕಲಬುರ್ಗಿಯವರು ವಹಿಸುತ್ತಿದ್ದು, ಇವರೊಂದಿಗೆ ಇಸ್ರೋ ವಿಜ್ಞಾನಿಗಳಾದ ಶ್ರೀಮತಿ ಕಲ್ಪನಾ ಅರವಿಂದ್, ಮಾಜಿ ಶಾಸಕರಾದ ಶ್ರೀ ಎಂ.ಡಿ. ಲಕ್ಷ್ಮೀನಾರಾಯಣ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಶ್ರೀ ಬಿ. ನಾಗರಾಜ್, ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಟಿ. ರಾಜೇಶ್, ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಕೆ.ಸಿ. ತಿಮ್ಮಶೆಟ್ಟಿ, ದೇವಾಂಗ ಸೇವಾ ಸಮಾಜದ ಅಧ್ಯಕ್ಷರಾದ ಎಂ.ಪಿ. ಉಮಾಶಂಕರ್, ರಾಜ್ಯ ದೇವಾಂಗ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಕೆ.ಬಿ. ಭಾಸ್ಕರಯ್ಯ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಹೆಚ್. ಪಾರ್ವತಿ (ರಂಗನಾಯಕಿ), ಯುವ ಘಟಕದ ಅಧ್ಯಕ್ಷರಾದ ಶ್ರೀ ರಾದ ಶ್ರೀ ಬಿ.ಎಸ್. ಮೋಹನ್ ಸೇರಿದಂತೆ ಅನೇಕ ಗಣ್ಯಮಾನ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.