ಬೆಂಗಳೂರಿನ ಬಾಣಸವಾಡಿಯಲ್ಲಿ ಅತ್ಯಾಧುನಿಕ 'ವಿಮ್ಸ್ ಪೆಟ್ ಹಾಸ್ಪಿಟಲ್' ಆರಂಭವಾಗಿದೆ.
ಡಿಎಸ್ ಮ್ಯಾಕ್ಸ್ ಸಂಸ್ಥೆಯ ಪ್ರಮುಖರಾದ ದಯಾನಂದ್, ನಿರ್ದೇಶಕ ತರುಣ್ ಸುಧೀರ್ ದಂಪತಿಗಳು ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಈ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು.
ಡಾಕ್ಟರ್ ವಿನಾಯಕ್ ಹಾಗೂ ಡಾಕ್ಟರ್ ಮಂಜುನಾಥ್ ಅವರ ಅದ್ಭುತ ಕಲ್ಪನೆಯ ಆಸ್ಪತ್ರೆ ಇದಾಗಿದೆ. ವಿಮ್ಸ್ ಪೆಟ್ ಹಾಸ್ಪಿಟಲ್ ನಲ್ಲಿ ನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿದೆ.
ಈ ಆಸ್ಪತ್ರೆಯಲ್ಲಿ ಓ.ಪಿ.ಡಿ ವಿಭಾಗ ಸೇರಿದಂತೆ ಶಸ್ತ್ರಚಿಕಿತ್ಸೆ ವಿಭಾಗ ಕೂಡ ಒಳಗೊಂಡಿದೆ.