ಬೆಂಗಳೂರು, ಡಿಸೆಂಬರ್ 10, 2024: ಭಾರತದಾದ್ಯಂತದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸ್ಥಾಪನೆಯಾಗಿರುವ ಸಾರ್ವಜನಿಕ ದತ್ತಿ ಸಂಸ್ಥೆ 'ಆಯುಷ್ಮಾನ್' ಹಾಗೂ ಮಕ್ಕಳ ಪಾಲನೆಯ ಹಕ್ಕುವಂಚಿತ ಪೋಷಕರಿಗಾಗಿ ಇರುವ ವೇದಿಕೆಯಾದ 'ಮಿಲಾಪ್', ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಡಿಸೆಂಬರ್ 10ರಂದು ಪೋಷಕರ ಪ್ರತ್ಯೇಕತೆಯಿಂದ ಮಕ್ಕಳ ಮೇಲೆ ಉಂಟಾಗುವ ಮಾನಸಿಕ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವ ಸಂವಾದ ಗೋಷ್ಠಿ ಆಯೋಜಿಸಿತ್ತು. ಪೊರ್ಗಟನ್ ವಾಯ್ಸಸ್ ಆಫ್ ಇನ್ ಫ್ಯಾಮಿಲಿ ಡಿಸ್ಪೂಟ್ಸ್; ಅಡ್ರೆಸಿಂಗ್ ಪೇರೆಂಟಲ್ ಏಲಿಯನೇಷನ್ ಇನ್ ಇಂಡಿಯಾ" (ಕುಟುಂಬ ವಿವಾದಗಳಲ್ಲಿ ಮರೆಯಾದ ಧ್ವನಿಗಳು: ಭಾರತದಲ್ಲಿ ಪೋಷಕರ ಪರಕೀಯತೆಗೆ ಪರಿಹಾರ) ಎಂಬ ಶೀರ್ಷಿಕೆಯಡಿ ಈ ಚರ್ಚೆ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ನ್ಯಾಯವಾದಿ ಜೂಹಿ ದಾಮೋದರ್, ಮಾನಸಿಕ ಆರೋಗ್ಯ ತಜ್ಞ ಪ್ರೊ.ಸುನೀತಾ ಕೆ.ಮಣಿ, ಮಿಲಾಪ್ ಸಂಸ್ಥಾಪಕ ಗಜಲ್ ರೈನಾ ಆಯುಷ್ಮಾನ್ ಸಂಸ್ಥಾಪಕರಾದ ಅರಿಜಿತ್ ಮಿತ್ರಾ ಅವರು ಗೋಷ್ಠಿಯಲ್ಲಿದ್ದರು. ಪೋಷಕರಾದ ಪಪೆ ಝಲ್ಕಾ ಮತ್ತು ಕೌಸ್ತವ್ ದಾಸ್ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಗೋಷ್ಠಿಯ ನೇತೃತ್ವವನ್ನು ಪತ್ರಕರ್ತೆ ವಾಸಂತಿ ಹರಿಪ್ರಕಾಶ್ ವಹಿಸಿದ್ದರು.