ಬೆಂಗಳೂರಿನಲ್ಲಿ ರಾಜ್ಯ ಒಕ್ಕಲಿಗ ಸಂಘದ ಸದಸ್ಯರಾದ ಜಿ.ಎಸ್. ಉದಯ ಕುಮಾರ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಜಿ.ಎಸ್. ಉದಯಕುಮಾರ ಅವರು ಮಾತನಾಡಿದರು. ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ ನಡೆಸಬೇಕೆಂದು ಜಿ.ಎಸ್. ಉದಯಕುಮಾರ ಅವರು ಒತ್ತಾಯಿಸಿದರು. 

    ಸಹಕಾರ ಸಂಘಗಳ ನಿಯಮದ ಪ್ರಕಾರ ಪ್ರತಿವರ್ಷ ಸರ್ವ ಸದಸ್ಯರ ಸಭೆ ನಡೆಸಬೇಕಿದೆ. ಆದರೆ ಮೂರು ವರ್ಷ ಕಳೆದರೂ ರಾಜ್ಯ ಒಕ್ಕಲಿಗರ ಸಂಘದಲ್ಲಿ ಸರ್ವಸದಸ್ಯರ ಸಭೆ ನಡೆದಿರುವುದಿಲ್ಲ ಎಂದು ಜಿ.ಎಸ್. ಉದಯಕುಮಾರ ಅವರು ತಿಳಿಸಿದರು. 

  ರಾಜ್ಯ ಒಕ್ಕಲಿಗರ ಸಂಘದಲ್ಲಿ ಕೆಲವರು ತಾವು ಮಾಡಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಸಲುವಾಗಿ 3 ವರ್ಷದಲ್ಲಿ 4 ಬಾರಿ ಕುದುರೆ ವ್ಯಾಪಾರ ಮಾಡಿಕೊಂಡು ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಎಂಬ ಬದಲಾಯಿಸಿಕೊಂಡು ಬರುತ್ತಿದ್ದಾರೆ ಎಂದು ಜಿಎಸ್ ಉದಯಕುಮಾರ ಅವರು ಆರೋಪಿಸಿದರು. 

 ಇದರಿಂದ ಒಕ್ಕಲಿಗ ಸಮುದಾಯದ ಜನರಿಗೆ ಹಾಗೂ ಸಂಘದ ಸದಸ್ಯರಿಗೆ ಅನ್ಯಾಯವಾಗುತ್ತಿದೆ ಎಂದು ಜಿ.ಎಸ್. ಉದಯಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

 ಈ ಹಿನ್ನಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ ನಡೆಸಬೇಕೆಂದು ಮನವಿ ಪತ್ರ ನೀಡಲಾಗಿದೆ ಎಂದು ಜಿ.ಎಸ್. ಉದಯಕುಮಾರ ಅವರು ತಿಳಿಸಿದರು.