ನವೆಂಬರ್ 7, 2024
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರೊಫೆಸರ್ ಬಿ ಕೃಷ್ಣಪ್ಪ 'ದಲಿತ ಸಂಘರ್ಷ ಸಮಿತಿ'ಯ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯು ರಾಜ್ಯಾಧ್ಯಕ್ಷರಾದ ಜೀವನಹಳ್ಳಿ ನಾರಾಯಣ ಅವರ ನೇತೃತ್ವದಲ್ಲಿ ನಡೆಯಿತು.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭ್ರಷ್ಟಾಧಿಕಾರಿಗಳ ಕಾರ್ಯವೈಖರಿಯಿಂದಾಗಿ ಅರ್ಹ ಫಲಾನುಭವಿಗಳಿಗೆ ದೊರಕಬೇಕಾಗಿರುವ ಜಮೀನು ಸಿಗದಂತೆ ಆಗಿದೆ ಎಂದು ಜೀವನ ಹಳ್ಳಿ ನಾರಾಯಣ ಅವರು ಆರೋಪಿಸಿದರು.
ಹಾಗಾಗಿ ರಾಜ್ಯ ಸರ್ಕಾರ ತಕ್ಷಣವೇ ರಾಜ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಜಮೀನು ಸಿಗುವಂತೆ ಮಾಡಬೇಕು ಎಂದು ಜೀವನಹಳ್ಳಿ ನಾರಾಯಣ ಅವರು ಒತ್ತಾಯಿಸಿದರು.