ಸೆಪ್ಟೆಂಬರ್ 22, 2024

ಬೆಂಗಳೂರಿನ ಜಾಲಹಳ್ಳಿಯ ಸೆಂಟ್. ಕ್ಲಾರೆಟ್ ಕಾಲೇಜಿನಲ್ಲಿ "ಉಚಿತ ನೇತ್ರ ತಪಾಸಣೆ ಶಿಬಿರ" ಆಯೋಜಿಸಲಾಗಿತ್ತು. 

ಉಚಿತ ನೇತ್ರ ತಪಾಸಣೆ ಶಿಬಿರವು 'ರೋಟರಿ ಜಾಲಹಳ್ಳಿ' (Dist 3192), ರಂಗಲಕ್ಷ್ಮೀ ನೇತ್ರಾಲಯ, ಸೆಂಟ್. ಕ್ಲಾರೆಟ್ ಕಾಲೇಜ್ ಹಾಗೂ IDL ಫೌಂಡೇಶನ್ ಸಹಯೋಗದಲ್ಲಿ ನಡೆಯಿತು. 

  500ಕ್ಕೂ ಹೆಚ್ಚು ಜನರು ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಭಾಗಿಯಾಗಿ ಕಣ್ಣುಗಳ ಪರೀಕ್ಷೆ ಮಾಡಿಸಿಕೊಂಡರು. 

ಈ ಸಂದರ್ಭದಲ್ಲಿ ಅನೇಕ ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಣೆ ಮಾಡಲಾಯಿತು. ಕಣ್ಣಿನ ಸಮಸ್ಯೆ ಗಂಭೀರವಾಗಿರುವ ರೋಗಿಗಳಿಗೆ 'ರೋಟರಿ ಜಾಲಹಳ್ಳಿ' ವತಿಯಿಂದ "ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ" ಮಾಡಲಾಗುವುದು ಎಂದು 'ರೋಟರಿ ಜಾಲಹಳ್ಳಿ' (Dist 3192) ಅಧ್ಯಕ್ಷರಾದ ಸುಧೀರ್ ಅವರು ಮಾಧ್ಯಮಗಳಿಗೆ ತಿಳಿಸಿದರು. 

ಎಲ್ಲಾ ವಯೋಮಾನದ ಜನರು ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಭಾಗಿಯಾಗಿದ್ದರು. ಈ ಶಿಬಿರದಲ್ಲಿ ರಂಗಲಕ್ಷ್ಮೀ ನೇತ್ರಾಲಯದ ಮುಖ್ಯಸ್ಥರಾದ ರೂಪಶ್ರೀ, IDL ಫೌಂಡೇಶನ್ ನ ಮುಖ್ಯಸ್ಥರಾದ ಶೈನಿ ರಾಬರ್ಟ್ ಸೇರಿದಂತೆ ಸೆಂಟ್. ಕ್ಲಾರೆಟ್ ಕಾಲೇಜಿನ ಪ್ರಮುಖರು ಭಾಗಿಯಾಗಿದ್ದರು.