ಆಗಸ್ಟ್ 31, 2024

ಬೆಂಗಳೂರಿನ 'ಟ್ರಸ್ಟ್ ವೆಲ್' ಆಸ್ಪತ್ರೆಯಲ್ಲಿ "ಥ್ರೋಬಾಲ್ ಫಾರ್ ಹೆಲ್ತ್' ಕ್ಯಾಂಪ್ ನ ಸಮಾರೋಪ ಕಾರ್ಯಕ್ರಮ ನಡೆಯಿತು. 

  'ಇಂಟರ್ನ್ಯಾಷನಲ್ ಥ್ರೋಬಾಲ್ ಫೆಡರೇಶನ್' ಸಂಸ್ಥೆಯು "ಥ್ರೋಬಾಲ್ ಫಾರ್ ಹೆಲ್ತ್' ಕ್ಯಾಂಪ್ ಆಯೋಜಿಸಿತ್ತು. ಇಂಟರ್ನ್ಯಾಷನಲ್ ಥ್ರೋಬಾಲ್ ಫೆಡರೇಶನ್' ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಸೆಕ್ರೆಟರಿ ಆದ ಸಂಪೂರ್ಣ ಹೆಗಡೆ ಅವರ ನೇತೃತ್ವದಲ್ಲಿ ಥ್ರೋಬಾಲ್ ಫಾರ್ ಹೆಲ್ತ್ ಕ್ಯಾಂಪ್ ನಡೆಯಿತು. 

 ಎರಡು ತಿಂಗಳುಗಳ ಕಾಲ ನಡೆದ ಈ ಕ್ಯಾಂಪ್ ನಲ್ಲಿ 25ಕ್ಕೂ ಹೆಚ್ಚು ಡಯಾಲಿಸಿಸ್ ರೋಗಿಗಳು ಭಾಗಿಯಾಗಿದ್ದರು. 

  ಸಂಪೂರ್ಣ ಹೆಗಡೆ ಅವರು ಆಫ್ ಲೈನ್ ಹಾಗೂ ಆನ್ಲೈನ್ನಲ್ಲಿ ಥ್ರೋ ಬಾಲ್ ಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಮ್ಮ ರೋಗಿಗಳಿಗೆ ಹೇಳಿಕೊಟ್ಟಿದ್ದರು. ಅವರ ತರಬೇತಿಯ ಪರಿಣಾಮದಿಂದಾಗಿ ನಮ್ಮ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ರೋಗಿಗಳ ಭೀತಿಯಾಗುವ ಶುಗರ್ ಲೆವೆಲ್ ಕೂಡ ನಿಯಂತ್ರಣಕ್ಕೆ ಬಂದಿದೆ ಎಂದು 'ಟ್ರಸ್ಟ್ ವೆಲ್' ಆಸ್ಪತ್ರೆಯ ರವಿ ಅವರು ತಿಳಿಸಿದರು. 

 ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಪೂರ್ಣ ಹೆಗಡೆಯವರು ಥ್ರೋಬಾಲ್ ಆಟದಿಂದ ದೈಹಿಕ ಹಾಗೂ ಮಾನಸಿಕ ರೋಗಗಳು ನಿವಾರಣೆಯಾಗಲಿವೆ ಎಂದು ಹೇಳಿದರು. 

 ಮುಂದಿನ ದಿನಗಳಲ್ಲಿ ಬೆಂಗಳೂರಿನ ಬೇರೆ ಆಸ್ಪತ್ರೆಗಳಲ್ಲಿಯೂ ಸಹ ಥ್ರೋಬಾಲ್ ಫಾರ್ ಹೆಲ್ತ್' ಕ್ಯಾಂಪ್ ಆ ಯೋಜನೆ ಮಾಡುವುದಾಗಿ ಸಂಪೂರ್ಣ ಹೆಗಡೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.