ಜುಲೈ 25, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ' ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ'ದ ಪದಾಧಿಕಾರಿಗಳ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಹೂವಳ್ಳಿ ಪ್ರಕಾಶ್ ಅವರು ಮಾತನಾಡಿದರು.
ಕೋಲಾರ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅವರು ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಲ್ಲಿಸಿ 2013 ರಿಂದ 2018ರವರೆಗೆ 145 - ಮುಳಬಾಗಿಲು (ಎಸ್ಸಿ ಮೀಸಲು) ವಿಧಾನಸಭಾ ಕ್ಷೇತ್ರದ ಶಾಸಕರಾಗುವ ಮೂಲಕ ವಂಚಿಸಿದ್ದು, ಇವರ ವಿರುದ್ಧ ಕರ್ನಾಟಕ ರಾಜ್ಯ ಹೈಕೋರ್ಟ್ ನ ಡಬ್ಲ್ಯೂ ಪಿ ನಂ. 2841 ಆಫ್ 2023 (ಜಿ. ಎಂ-ಸಿಸಿ) ಪ್ರಕರಣದ ಆದೇಶದಂತೆ ಇವರ ವಿರುದ್ಧ ಕ್ರಮ ತೆಗೆದುಕೊಂಡು ಪರಿಶಿಷ್ಟ ಜನಾಂಗಕ್ಕೆ ನ್ಯಾಯ ಒದಗಿಸಬೇಕೆಂದು ಹೋಳಿ ಪ್ರಕಾಶ್ ಅವರು ಒತ್ತಾಯಿಸಿದರು.
ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಲಾರದ ದಲಿತ ನಾರಾಯಣಸ್ವಾಮಿ ಅವರು ಕೊತ್ತೂರು ಶ್ರೀ ಮಂಜುನಾಥ ಅವರು ಯಾವುದೇ ಕಾರಣಕ್ಕೂ ಶಾಸಕರಾಗಿ ಮುಂದುವರೆಯಬಾರದು. ಕೊತ್ತೂರು ಜಿ ಮಂಜುನಾಥ್ ಅವರು ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಸಿಎಂ ಸಿದ್ದರಾಮಯ್ಯ ಅವರು ಕೊತ್ತೂರು ಜಿ. ಮಂಜುನಾಥ್ ಅವರ ವಿರುದ್ಧ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ದಲಿತ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.