ಜುಲೈ 17, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಕರ್ನಾಟಕ ಸಂಘಟನೆಗಳ ಒಕ್ಕೂಟ"ದ ವತಿಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಕೆ.ಎನ್. ಲಿಂಗೇಗೌಡ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಬಿಎಂಐಸಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ 2000 ಕ್ಕೂ ಹೆಚ್ಚು ರೈತರಿಗೆ ಪರಿಹಾರದ ನಿವೇಶನವನ್ನು ನೀಡಬೇಕೆಂದು ಕೆ.ಎನ್. ಲಿಂಗೇಗೌಡ ಅವರು ಒತ್ತಾಯಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ರೈತರಾದ ರೇಣುಕಾ ಪ್ರಸಾದ್ ಅವರು ಮಾತನಾಡಿದರು.
20 ವರ್ಷಗಳ ಹಿಂದೆ ನೈಸ್ ರಸ್ತೆ ನಿರ್ಮಾಣ ಮಾಡುವುದಕ್ಕಾಗಿ ಎರಡು ಸಾವಿರಕ್ಕೂ ಹೆಚ್ಚು ರೈತರ ಜಮೀನನ್ನು ಸರ್ಕಾರ ವರ್ಷಕ್ಕೆ ಪಡೆಯಿತು. 1 ಎಕರೆಗೆ ₹5 ಲಕ್ಷಗಳಂತೆ ಸಾವಿರಾರು ಎಕರೆ ಜಮೀನನ್ನು ಖರೀದಿಸಿತು. ಭೂಮಿ ನೀಡಿದ ರೈತರಿಗೆ ಒಂದು ಎಕರೆಗೆ ಒಂದು ನಿವೇಶನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ರೈತರಿಗೆ ಪರಿಹಾರದ ನಿವೇಶನ ನೀಡಿರುವುದಿಲ್ಲ. ಸರ್ಕಾರಗಳ ಬದಲಾದರೂ ನೈಸ್ ರಸ್ತೆಗೆ ಭೂಮಿ ನೀಡಿದ ರೈತರಿಗೆ ನ್ಯಾಯ ಸಿಕ್ಕಿರುವುದಿಲ್ಲ.
ಹಾಗಾಗಿ ರಾಜ್ಯ ಸರ್ಕಾರವು ತಕ್ಷಣವೇ ರೈತರಿಗೆ ಪರಿಹಾರದ ನಿವೇಶನ ನೀಡಬೇಕೆಂದು ರೇಣುಕಾ ಪ್ರಸಾದ್ ಅವರು ಒತ್ತಾಯಿಸಿದರು. ಶೀಘ್ರದಲ್ಲಿ ರೈತರಿಗೆ ಪರಿಹಾರದ ನಿವೇಶ ನೀಡದಿದ್ದಲ್ಲಿ ನೈಸ್ ರಸ್ತೆಯನ್ನು ಬಂದ್ ಮಾಡುವುದಾಗಿ ರೇಣುಕಾ ಪ್ರಸಾದ್ ಅವರು ಎಚ್ಚರಿಕೆ ನೀಡಿದರು.